ಮೂಡುಬಿದಿರೆ: ಪಾರ್ಕಿಂಗ್ ಅವ್ಯವಸ್ಥೆ-ಅಧಿಕಾರಿಗಳ ಸಭೆ
ಮೂಡುಬಿದಿರೆ : ಮಂಗಳೂರಿನಿಂದ-ಕಾರ್ಕಳಕ್ಕೆ ಸಂಚಾರ ಮಾಡುವ ಎಕ್ಸ್ ಪ್ರೆಕ್ಸ್ ಮತ್ತು ಖಾಸಗಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ಸೂಚಿತ ನಿಲ್ದಾಣದಲ್ಲಿ ಮಾತ್ರ ನಿಲುಗಡೆಗೊಳಿಸಬೇಕು. ನಿಗದಿ ಪಡಿಸಿರುವ ವೇಳಾಪಟ್ಟಿಯಂತೆ ಸಂಚರಿಸಬೇಕು. ಬಸ್ ಚಾಲಕರು ಮತ್ತು ನಿರ್ವಾಹಕರುಗಳು ಸಾರ್ವಜನಿಕರು, ವಿದ್ಯಾರ್ಥಿಗಳೊಂದಿಗೆ ರೌಡಿಸಂ ತೋರಿಸಬೇಡಿ ಬದಲಾಗಿ ಮೃದುವಾಗಿ ವರ್ತಿಸಿ ತಪ್ಪಿದರೆ ಸಾರ್ವಜನಿಕರು ನಿಯಮ ಉಲ್ಲಂಘನೆ ಮಾಡುವ ಬಸ್‌ಗಳ ಬಗ್ಗೆ ಸ್ಪಷ್ಟ ಮಾಹಿತಿ, ದಾಖಲೆ ಸಹಿತ ದೂರು ನೀಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೋಲಿಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಎಚ್ಚರಿಸಿದರು.
ಮೂಡುಬಿದಿರೆಯಲ್ಲಿ ಪಾರ್ಕಿಂಗ್ ಅವ್ಯವಸ್ಥೆ, ಖಾಸಗಿ ಬಸ್‌ಗಳಿಂದಾಗುವ ಸಮಸ್ಯೆಗಳ ಕುರಿತು ಪುರಸಭೆ, ಪೋಲಿಸ್, ಬಸ್ ಮಾಲಕರು ಹಾಗೂ ಬಸ್‌ಸ್ಟ್ಯಾಂಡ್ ವಾಣಿಜ್ಯ ಸಂಕೀರ್ಣಗಳ ಮಾಲಕರ ಜೊತೆ ಸಮಾಜ ಮಂದಿರದಲ್ಲಿ ನಡೆದ ಸಮಾಲೋಚನಾ ಸಬೆಯಲ್ಲಿ ಅವರು ಮಾತನಾಡಿದರು. ಬಸ್ ಸಂಚಾರಕ್ಕೆ ಸಂಬಂಧಿಸಿದಂತೆ ಬಸ್ ಮಾಲಕರ ಸಂಘದಿಂದ ಕೈಗೊಂಡ ನಿರ್ಣಯಗಳ ಕುರಿತ ಪತ್ರವನ್ನು ಅವರು ಸಭೆಯ ಮುಂದಿಟ್ಟರು.
ಚಾಪೆ ಹಾಕಿಕೊಂಡು ಹೋಗುವ ಬಸ್ ನವರು ಕಂಡು ಬಂದರೆ ತಕ್ಷಣ ಸೀಝ್ ಮಾಡಿ ಕೋರ್ಟ್‌ಗೆ ಹಾಕಲಾಗುವುದು. ಬಸ್ ಮಾಲಕರು ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು. ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಮಾತನಾಡಿ ಬಸ್‌ಸ್ಟ್ಯಾಂಡ್‌ನಲ್ಲಿ ಪಾರ್ಕಿಂಗ್ ಅವ್ಯವಸ್ಥೆಯನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು. ಚತುಷ್ಪಕ್ರ, ದ್ವಿಷಕ್ರ ವಾಹನಗಳ ಪಾರ್ಕಿಂಗ್‌ಗೆ ಮಾರ್ಕ್ ಮಾಡಲಾಗುವುದು. ವಾಣಿಜ್ಯ ಸಂಕೀರ್ಣದ ಹಿಂಭಾಗದಲ್ಲಿ ವ್ಯವಸ್ಥೆ ಸರಿಪಡಿಸಿ ಅಲ್ಲಿಯೂ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೆ ಸ್ಥಳಾವಕಾಶ ನೀಡಲಾಗುವುದು. ಮುಖ್ಯ ರಸ್ತೆಯ ಲಭ್ಯವಿರುವ ಸ್ಥಳದಲ್ಲಿಯೂ ಖಾಸಗಿ ವಾಹನಗಳ ಪಾರ್ಕಿಂಗ್‌ಗೆ ಸ್ಥಳಾವಕಾಶ ಗುರುತಿಸಲಾಗುವುದು ಎಂದರು.
ಪೊಲೀಸ್ ಉಪನಿರೀಕ್ಷಕರಾದ ಸಿದ್ದಪ್ಪ, ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.