ಜೂಜಾಟದ ಕೋಳಿ ಅಂಕಕ್ಕೆ ದಾಳಿ : ಗ್ರಾಮ ಪಂಚಾಯತ್ ಸದಸ್ಯನ ಬಂಧನ
ಹಿರೇಬೆಟ್ಟು ಗ್ರಾಮದ ದೂಮಾವತಿ ದೈವಸಾನದ ಬಳಿಯ ಕಬ್ಯಾಡಿ ಕಂಬಳ ಗದ್ದೆಯ ಸೆರಗಲ್ಲಿ ಜೂಜು ಪಣವೊಡ್ಡಿ ಕೋಳಿ ಅಂಕ ನಡೆಸಿದ್ದ 11 ಮಂದಿಯನ್ನು ಮಣಿಪಾಲ ಠಾಣೆಯ ಪೋಲೀಸರು ಕೋಳಿಗಳ ಸಹಿತ ಬಂಧಿಸಿದ್ದಾರೆ.
80ನೇ ಬಡಗಬೆಟ್ಟು ಗ್ರಾಮ ಪಂಚಾಯತ್‍ನ ಬಿಜೆಪಿ ಬೆಂಬಲಿತ ಸದಸ್ಯ ಶುಭಕರ ಶೆಟ್ಟಿ, ರಾಕೇಶ, ಉಮೇಶ, ವಿಘ್ನೇಶ, ವಿವೇಕ, ದಿನೇಶ, ರತ್ನಾಕರ, ವಿಠಲ, ರಾಜೇಶ, ಜಯ, ಸುಂದರ ಬಂಧಿತ ಆರೋಪಿಗಳು.
ಇವರಿಂದ 5,450 ರೂಪಾಯಿ ಮೌಲ್ಯದ 10 ಹುಂಜ, ಜೂಜಾಡಿದ 2,800 ರೂಪಾಯಿ ನಗದು ಮತ್ತು ಬಾಳ್ ಕತ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.