Home Blog Left SidebarPage 330

ಬೆಂಗಳೂರಿನಬಟ್ಟೆ ವ್ಯಾಪಾರಿ ಈಗ ರಾಜಸ್ತಾನದ ಶಾಸಕ

ಬೆಂಗಳೂರಿನ ಚಿಕ್ಕಪೇಟೆಯ ಬಟ್ಟೆ ವ್ಯಾಪಾರಿ ಹಾಗೂ ಜೂಗನಹಳ್ಳಿಯ ಬಂಗಲೆ ವಾಸಿ ಲಾಡುಲಾಲ್ ಪಿಟ್ಲಿಯಾ ಅವರು ಈಗ ರಾಜಸ್ತಾನದ ಸಹಾರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ 31 ಲಕ್ಷ ಮತ ಪಡೆದಿದ್ದರು. ಈ ಬಾರಿ ಬಿಜೆಪಿ ಟಿಕೆಟ್ ಪಡೆದು 1.17 ಲಕ್ಷ ಮತ ಪಡೆದು ಗೆದ್ದಿದ್ದಾರೆ. ಸೋತ ಕಾಂಗ್ರೆಸ್ ಅಭ್ಯರ್ಥಿ 55 ಸಾವಿರ ಮಾತ್ರ

ಮಂಗಳೂರಿಗೆ ಬಂದ ಕಾಟಿ ಕೊಟ್ಟ ಎಚ್ಚರಿಕೆ ಏನು?

ಮಂಗಳೂರಿನ ಕದ್ರಿ, ನೀರುಮಾರ್ಗಗಳ ಹಲವೆಡೆ ಕಾಟಿ ನನ್ನ ಕಾಡು ಎಲ್ಲಿದೆ ಎಂದು ಹುಡುಕಿ ಹೋದುದರ ವರದಿಯಾಗಿದೆ. ಮಲೆನಾಡಿನ ಎಲ್ಲ ಕಡೆ ಯಾವ ಬೇಲಿಗಳಿಗೂ ಕಾಟಿ, ಕಾಡುಕೋಣ ಜಗ್ಗುವುದಿಲ್ಲ ಎಂದು ಮಲೆನಾಡಿಗರು ದೂರುತ್ತಿದ್ದಾರೆ. ಕಾಡುಕೋಣಗಳಲ್ಲಿ ಕಾಡೆಮ್ಮೆ ಹೆಣ್ಣು ಇದ್ದರೂ ಕಾಡುಕೋಣ ಎಂದೇ ಕರೆಯುತ್ತಾರೆ. ಇದು ಪುರುಷ ವರ್ಗದ ಮೇಲಾಳ್ಕೆ ಕಿತಾಪತಿ ಎಂದು ಕೆಲವು ಮಹಿಳಾ ಹೋರಾಟಗಾತಿಯರು ದೂರಿದ್ದಾರೆ. ಮಲೆನಾಡಿಗರು ನಮ್ಮ ಬೇಲಿಯನ್ನು ಕಾಡುಕೋಣ ಮುರಿಯುತ್ತಿದೆ ಎಂದು

ನೆರೆಯ ಕುಳ್ಳ ಗೆಲಾಕ್ಸಿಯಲ್ಲಿ ಹೊಸ ನಕ್ಷತ್ರ ಪ್ರಸವ

ದೂರ ಇಣುಕುವ ಬಹು ಘಟಕ ಅಲೆಪಟ್ಟಿ ಪರಿಶೋಧಕವು ದೊಡ್ಡ ಸಾಧನೆ ಮಾಡಿದೆ. ಮೊದಲ ಬಾರಿಗೆ ನಕ್ಷತ್ರ ಹುಟ್ಟುವುದನ್ನು ನೇರ ನೋಡಲು ಸಾಧ್ಯವಾಗಿದೆ. ಇವೆಲ್ಲ ತಿಳಿದಿರುವ ಕ್ರಿಯೆಗಳು. ಆದರೆ ಸಾಕ್ಷ್ಯ ಸಮೇತ ಮೊದಲ ಬಾರಿಗೆ ನೋಡಲು ಸಾಧ್ಯವಾಗಿದೆ ಎಂದು ಬ್ರಿಟನ್ನಿನ ಡುರ್ರಾಮ್ ವಿಶ್ವವಿದ್ಯಾನಿಲಯದ ಖಗೋಳ ವಿಜ್ಞಾನಿ ಅನ್ನಾ ಮೆಕ್ಲೀಡ್ ಹೇಳಿದ್ದಾರೆ. ನಕ್ಷತ್ರಗಳು ದಟ್ಟ ಬಹುಕಣ ಗೊಂಚಲುಗಳಿಂದ ಹುಟ್ಟುತ್ತವೆ ಎಂದು ಆ ವಿಜ್ಞಾನಿಗಳ ತಂಡ ಹೇಳಿದೆ. ನಮ್ಮ ಹಾಲುಹಾದಿ ಮಿಲ್ಕೀವೇ

ರಜಪೂತ ಕರ್ಣಿ ಸೇನಾ ಅಧ್ಯಕ್ಷರ ಕೊಲೆ – ಇಂದು ರಾಜಸ್ತಾನ ಬಂದ್

ಜೈಪುರದ ಮನೆಗೇ ನುಗ್ಗಿ ರಜಪೂತ ಕರ್ಣಿ ಸೇನಾದ ರಾಷ್ಟ್ರೀಯ ಅಧ್ಯಕ್ಷ ಸುಖದೇವ್ ಸಿಂಗ್ ಗೋಗಮೇಡಿಯವರನ್ನು ಕೊಲೆ ಮಾಡಿದ ಸಂಬಂಧ ಇಂದು ರಾಜಸ್ತಾನ ಬಂದ್ ನಡೆಯುತ್ತಿದ್ದು, ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ. ಬೈಕಿನಲ್ಲಿ ಬಂದ ಮೂವರು ಮನೆಗೆ ನುಗ್ಗಿ ಸುಖದೇವ್‍ರನ್ನು ಪಿಸ್ತೂಲಿನಿಂದ ಗುಂಡಿಟ್ಟು ಕೊಂದಿದ್ದಾರೆ. ಅವರ ಜೊತೆಗಿದ್ದ ಇಬ್ಬರನ್ನು ಗುಂಡಿನಿಂದ ಬೆದರಿಸಿದ್ದಾರೆ. ಈಗ ಮಾಜೀ ಮುಖ್ಯಮಂತ್ರಿ ಆಗುತ್ತಿರುವ ಅಶೋಕ್ ಗೆಹ್ಲೋಟ್ ಅವರ ಉಸ್ತುವಾರಿ

ಉಳ್ಳಾಲ: ಇರಾ ಶಾಲಾ ವಠಾರದಲ್ಲಿ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಟ

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸುವರ್ಣ ಮಹೋತ್ಸವ ಸಮಿತಿ ಯುವಕ ಮಂಡಲ ಇರಾ ವತಿಯಿಂದ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವು ಇರಾ ಶಾಲಾ ವಠಾರದಲ್ಲಿ ನಡೆಯಿತು. ಯುವಕ ಮಂಡಲ ಇರಾ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ಕ್ರೀಡೆಗೂ ಹೆಚ್ಚಿನ ಒತ್ತನ್ನೂ ನೀಡುತ್ತಿದ್ದು, ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವನ್ನು ಆಯೋಜಿಸಿದ್ದರು. ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿರು.

ಅಕ್ಷಯ ಪಾತ್ರೆ ಪ್ರತಿಷ್ಠಾನದಿಂದ ಅತ್ಯಾಧುನಿಕ ಅಡುಗೆ ಮನೆಗೆ ಚಾಲನೆ

ಬಂಟ್ವಾಳ: ಅಕ್ಷಯಪಾತ್ರೆ ಫೌಂಡೇಶನ್‍ನ ವತಿಯಿಂದ ಕೃಷ್ಣನ ಪ್ರಸಾದವನ್ನು ಮಕ್ಕಳಿಗೆ ವಿತರಿಸುವ ಸತ್ಕಾರ್ಯ ಹಲವು ವರ್ಷಗಳಿಂದ ನಡೆಯುತ್ತಿದೆ. ಇಸ್ಕಾನ್ ಫೌಂಡೇಶನ್ ಮೂಲಕ ಇಡೀ ದೇಶದಲ್ಲಿ 23 ಲಕ್ಷ ಮಂದಿಗೆ ಮಧ್ಯಾಹ್ನದ ಊಟ ತಲುಪುತ್ತಿದ್ದು, ಇದು ಅತ್ಯಂತ ಶ್ಲಾಘನೀಯ ಕೆಲಸವಾಗಿದೆ ಎಂದು ಉಡುಪಿಯ ಪುತ್ತಿಗೆ ಮಠದ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಹೇಳಿದರು. ಅಕ್ಷಯ ಪಾತ್ರೆ ಫೌಂಡೇಶನ್ ಬಂಟ್ವಾಳ

ಮಿಜೋರಾಂನಲ್ಲಿ ಮುಖ್ಯಮಂತ್ರಿಗಳಿಗೆ ಸೋಲು, ಜೆಡ್‌ಪಿಎಂ ಅಧಿಕಾರಕ್ಕೆ

ಮುಖ್ಯಮಂತ್ರಿ ಜೋರಮ್ ತಂಗ, ಉಪ ಮುಖ್ಯಮಂತ್ರಿ ಸಹಿತ ಹಲವು ಮಂತ್ರಿಗಳ ಸೋಲಿನೊಂದಿಗೆ ಮಿಜೋರಾಂ ನ್ಯಾಶನಲ್ ಫ್ರಂಟ್ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಸಹ ಈ ಸರಕಾರದ ಭಾಗವಾಗಿತ್ತು. ಜೆಡ್‌ಪಿಎಂ ಮೈತ್ರಿ ಕೂಟವು 40 ಸದಸ್ಯ ಬಲದ ಮಿಜೋರಾಂನಲ್ಲಿ 27 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದೆ. ಎಂಎನ್ಎಫ್ ಬರೇ 10 ಕಡೆ ಗೆದ್ದಿದೆ. ಬಿಜೆಪಿ 2, ಕಾಂಗ್ರೆಸ್ 1 ಸ್ಥಾನ ಪಡೆದಿವೆ.

ವಿಜಯಪುರ ; ಗೋದಾಮು ಮಣ್ಣು ಸಹಿತ ಕಟ್ಟಡ ಕುಸಿದು 7 ಕಾರ್ಮಿಕರ ಸಾವು

ವಿಜಯಪುರ ನಗರದ ಹೊರ ವಲಯದಲ್ಲಿರುವ ರಾಜಗುರು ಫುಡ್ಸ್ ಗೋದಾಮು ಕುಸಿದು ಏಳು ಮಂದಿ ಕಾರ್ಮಿಕರು ದುರ್ಮರಣಕ್ಕೆ ಒಳಗಾದರು. ಇದು ಮೆಕ್ಕೆ ಜೋಳ ಸಂಗ್ರಹಣಾ ಮತ್ತು ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಗೋದಾಮು ಆಗಿದೆ. ಸಾವಿಗೀಡಾದವರೆಲ್ಲರೂ ಬಿಹಾರದಿಂದ ಬಂದ ವಲಸೆ ಕಾರ್ಮಿಕರಾಗಿದ್ದಾರೆ. ಇಲ್ಲಿಯವರೆಗೆ ಏಳು ಶವಗಳನ್ನು ಮಣ್ಣಿನೊಳಗಿನಿಂದ ಹೊರಕ್ಕೆ ತೆಗೆಯಲಾಗಿದೆ. ಇನ್ನೂ ಯಾರಾದರೂ ಮಣ್ಣಿನಡಿ ಇರುವರೇ ಎಂಬ ಅನುಮಾನ ಇದ್ದು ಕಾರ್ಯಾಚರಣೆ ಮುಂದುವರಿದಿದೆ.

ನೌಕಾಪಡೆಯ ಹೊಸ ಉಪ ಮುಖ್ಯಸ್ಥರ ನೇಮಕ

ವೈಸ್ ಎಡ್ಮಿರಲ್ ದಿನೇಶ್ ಕೆ ತ್ರಿಪಾಠಿಯವರನ್ನು ಭಾರತೀಯ ನೌಕಾ ಪಡೆಯ ಹೊಸ ಉಪ ಮುಖ್ಯಸ್ಥರನ್ನಾಗಿ ನೇಮಿಸಲು ಭಾರತೀಯ ಸರಕಾರವು ಒಪ್ಪಿಗೆ ಮುದ್ರೆ ಒತ್ತಿತು. ಇದೇ ವೇಳೆ ಹಲವು ಉನ್ನತ ನೇಮಕಾತಿಗಳಿಗೂ ಸರಕಾರದ ಒಪ್ಪಿಗೆ ಬಿತ್ತು. ಸದ್ಯ ನೌಕಾಪಡೆಯ ಪಶ್ಚಿಮ ಕಮಾಂಡಿನಲ್ಲಿ ಬಾವುಟ ಕಮಾಂಡಿಂಗ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೈಸ್ ಎಡ್ಮಿರಲ್ ಸೂ ಸಿಂಗ್ ಅವರು ತ್ರಿಪಾಠಿಯವರ ಜಾಗಕ್ಕೆ ಬಡ್ತಿ ಪಡೆಯುತ್ತಿದ್ದಾರೆ. ಹಲವು ಬಡ್ತಿ ನಡೆದಿದ್ದು ಇವರೆಲ್ಲರೂ

ರಾಜ್ಯೋತ್ಸವದ ತಿಂಗಳಿನ ಕನ್ನಡ ಕೂಗುಗಳು – ಕೊಡವ, ತುಳು ಅಸ್ಮಿತೆಯ ಮಾಯದ ಗಾಯಗಳು

ನವೆಂಬರ್ ತಿಂಗಳನ್ನು ರಾಜ್ಯೋತ್ಸವ ಆಚರಣೆಯ ತಿಂಗಳು ಎಂದೇ ತಿಳಿಯಲಾಗಿದೆ. ಹುಟ್ಟಿದ ದಿನ ನವೆಂಬರ್ ಒಂದು ಆದರೂ ಇಡೀ ತಿಂಗಳು ಏನು ಆಚರಣೆ ಎಂಬುದನ್ನೆಲ್ಲ ಕೇಳಬಹುದು. ಉತ್ತರಿಸುವವರು ಯಾರೂ ಇರುವುದಿಲ್ಲ. ನಿಂದನೆ ಬೇಕಾದರೆ ಸಿಗಬಹುದು. ಆದರೆ ಇಲ್ಲಿ ಕನ್ನಡ ಹೇಗಿದೆ? ನವೆಂಬರ್ ಒಂದು ಕನ್ನಡ ನಾಡು ಹುಟ್ಟಿದ ದಿನ ಸಂತೋಷ. ಆದರೆ ಅಂದು ತುಳುನಾಡು, ಕೊಡವನಾಡು ಸತ್ತ ದಿನ‌ ಎನ್ನುವುದೂ ಅಷ್ಟೇ ಸತ್ಯ. ಕೊಡಗು ಪ್ರತ್ಯೇಕ ರಾಜ್ಯವಾಗಿತ್ತು. ಚೆಪ್ಪುಡಿರ ಮುತ್ತಣ ಪೂಣಚ್ಚ