ರಜಪೂತ ಕರ್ಣಿ ಸೇನಾ ಅಧ್ಯಕ್ಷರ ಕೊಲೆ – ಇಂದು ರಾಜಸ್ತಾನ ಬಂದ್
ಜೈಪುರದ ಮನೆಗೇ ನುಗ್ಗಿ ರಜಪೂತ ಕರ್ಣಿ ಸೇನಾದ ರಾಷ್ಟ್ರೀಯ ಅಧ್ಯಕ್ಷ ಸುಖದೇವ್ ಸಿಂಗ್ ಗೋಗಮೇಡಿಯವರನ್ನು ಕೊಲೆ ಮಾಡಿದ ಸಂಬಂಧ ಇಂದು ರಾಜಸ್ತಾನ ಬಂದ್ ನಡೆಯುತ್ತಿದ್ದು, ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ. ಬೈಕಿನಲ್ಲಿ ಬಂದ ಮೂವರು ಮನೆಗೆ ನುಗ್ಗಿ ಸುಖದೇವ್‍ರನ್ನು ಪಿಸ್ತೂಲಿನಿಂದ ಗುಂಡಿಟ್ಟು ಕೊಂದಿದ್ದಾರೆ. ಅವರ ಜೊತೆಗಿದ್ದ ಇಬ್ಬರನ್ನು ಗುಂಡಿನಿಂದ ಬೆದರಿಸಿದ್ದಾರೆ. ಈಗ ಮಾಜೀ ಮುಖ್ಯಮಂತ್ರಿ ಆಗುತ್ತಿರುವ ಅಶೋಕ್ ಗೆಹ್ಲೋಟ್ ಅವರ ಉಸ್ತುವಾರಿ ಸರಕಾರವಿದೆ. ಎಲ್ಲೆಡೆ ಬಿಗಿ ಬಂದೋಬಸ್ತು ಮಾಡಲಾಗಿದೆ. ಸೋತ ಕಾಂಗ್ರೆಸ್ ದ್ವೇಷದ ರಾಜಕೀಯ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಆಪಾದಿಸಿದೆ