ಉಳ್ಳಾಲ: ಇರಾ ಶಾಲಾ ವಠಾರದಲ್ಲಿ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಟ
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸುವರ್ಣ ಮಹೋತ್ಸವ ಸಮಿತಿ ಯುವಕ ಮಂಡಲ ಇರಾ ವತಿಯಿಂದ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವು ಇರಾ ಶಾಲಾ ವಠಾರದಲ್ಲಿ ನಡೆಯಿತು. ಯುವಕ ಮಂಡಲ ಇರಾ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ಕ್ರೀಡೆಗೂ ಹೆಚ್ಚಿನ ಒತ್ತನ್ನೂ ನೀಡುತ್ತಿದ್ದು, ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವನ್ನು ಆಯೋಜಿಸಿದ್ದರು. ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿರು.
ಮುಡಿಪು ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷರಾದ ಪ್ರಶಾಂತ್ ಕಾಜವ ಇವರು ಮಾತನಾಡಿ, ಯುವಕ ಮಂಡಳ (ರಿ) ಇರಾ ಅನೇಕ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ. ಇರಾ ಜನಗಳಿಂದ ನಾನು ಪ್ರೀತಿಯಿಂದ ಬದುಕುವುದನ್ನು ಕಲಿತಿದ್ದೇನೆ, ಈ ರೀತಿ ಪ್ರೀತಿ ಸೌಹಾರ್ದತೆ ಇರಾದಲ್ಲಿ ಬಿಟ್ಟರೆ ಬೇರೆ ಎಲ್ಲೂ ಕಾಣಲೂ ಸಿಗುವುದಿಲ್ಲ ಎಂದರು. ಬಂಟ್ವಾಳ ತಾಲೂಕು ಪಂಚಾಯತ್‍ನ ಮಾಜಿ ಅಧ್ಯಕ್ಷರಾದ ಯಶವಂತ ದೇರಾಜೆಗುತ್ತು ಮಾತನಾಡಿ, ಇರಾ ಒಂದು ವಿಶಿಷ್ಟವಾದ ಗ್ರಾಮವಾಗಿದ್ದು, ಯಾವುದೇ ಜಾತಿ ಭೇದವಿಲ್ಲದೆ ಅದ್ಭುತ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ. ಯುವಕ ಮಂಡಳ ಇರಾವು ಉತ್ತುಂಗ ಮಟ್ಟದಲ್ಲಿ ಇರಾದ ಹೆಸರು ಬೆಳಗಿಸಲಿ ಎಂದರು.
ಈ ವೇಳೆ ದ.ಕ ಜಿಲ್ಲಾ ವಾಲಿಬಾಲ್ ಎಸೋಸಿಯೇಶನ್‍ನ ಸಹಕಾರ್ಯದರ್ಶಿಯಾಗಿರುವ ಹೈದರ್ ಕೈರಂಗಳರವರನ್ನು ಗಣ್ಯರು ಶಾಲು ಹೊದಿಸಿ ಹಾರ ಹಾಕಿ ಸ್ಮರಣಿಕೆಯನ್ನು ನೀಡುವ ಮೂಲಕ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮ್ಮರ್ ಎಂ.ಬಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರದ ಸಂತೋಷ್ ಕುಮಾರ್ ರೈ ಬೋಳ್ಯಾರು, ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಎಸೋಸಿಯೇಶನ್ ಕಾರ್ಯದರ್ಶಿ ಶಂಕರ್ ಶೆಟ್ಟಿ, ಮುಡಿಪು ಕುರ್ನಾಡು ಪ್ರೌಢಶಾಲೆಯ ಹಾಗೂ ತಪ್ಸಿಯಾ ಗ್ರೂಪ್ಸ್‍ನ ಕಾರ್ಯದರ್ಶಿ ಟಿ. ಆರ್. ಇಬ್ರಾಹಿಂ, ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಫೀಕ್ ಪಜೀರು, ಮಂಚಿ ಗ್ರಾ.ಪಂ. ಅಧ್ಯಕ್ಷರಾದ ಜಿ.ಎಂ. ಇಬ್ರಾಹಿಂ, ಮಂಗಳೂರು ನ್ಯಾಯವಾದಿ ಗಿರೀಶ್ ಶೆಟ್ಟಿ, ಶಶಿಕಿರಣ್ ಶೆಟ್ಟಿ ಅನೆಯಾಲಗುತ್ತು, ಉದ್ಯಮಿ ಸುಖೇಶ್ ಭಂಡಾರಿ ಕಿನ್ನಿಮಜಲುಬೀಡು, ರಾಜಶೇಖರ್ ರೈ ಇರಾಗುತ್ತು, ಅನಿಲ್ ಕುಮಾರ್ ಸೂತ್ರಬೈಲು, ಇರಾ ಗ್ರಾಮ ಪಂಚಾಯತ್ ಸದಸ್ಯರಾದ ಯಾಕೂಬ್, ತಾಲೂಕು ಪಂಚಾಯತ್ ಬಂಟ್ವಾಳದ ನಿಕಟಪೂರ್ವ ಅಧ್ಯಕ್ಷರಾದ ಚಂದ್ರಹಾಸ ಆರ್. ಕರ್ಕೇರ ಹಾಗೂ ಯುವಕ ಮಂಡಲ ಇರಾದ ಅಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.
ವಿಜೇತರಿಗೆ ಪ್ರಥಮ ಬಹುಮಾಮವಾಗಿ 15,000 ರೂಪಾಯಿ ನಗದು ಮತ್ತು ಟ್ರೋಫಿ, ಎರಡನೇ ಬಹುಮಾನ 10,000 ರೂಪಾಯಿ ಮತ್ತು ಟ್ರೋಫಿ, ಮೂರನೇ ಬಹುಮಾನ 8,000 ರೂಪಾಯಿ ಮತ್ತು ಟ್ರೋಫಿ, ಚತುರ್ಥ ಬಹುಮಾನ 5,000 ರೂಪಾಯಿ ಮತ್ತು ಟ್ರೋಫಿಯನ್ನು ನೀಡಿದರು. ಅಷ್ಟೇ ಅಲ್ಲದೇ ಉತ್ತಮ ಹೊಡೆತಗಾರ, ಉತ್ತಮ ಲಿಫ್ಟರ್ ಸವ್ಯಸಾಚಿ ಪ್ರಶಸ್ತಿಗಳನ್ನು ಗಣ್ಯರು ನೀಡಿದರು.