ನೆರೆಯ ಕುಳ್ಳ ಗೆಲಾಕ್ಸಿಯಲ್ಲಿ ಹೊಸ ನಕ್ಷತ್ರ ಪ್ರಸವ
ದೂರ ಇಣುಕುವ ಬಹು ಘಟಕ ಅಲೆಪಟ್ಟಿ ಪರಿಶೋಧಕವು ದೊಡ್ಡ ಸಾಧನೆ ಮಾಡಿದೆ. ಮೊದಲ ಬಾರಿಗೆ ನಕ್ಷತ್ರ ಹುಟ್ಟುವುದನ್ನು ನೇರ ನೋಡಲು ಸಾಧ್ಯವಾಗಿದೆ.
ಇವೆಲ್ಲ ತಿಳಿದಿರುವ ಕ್ರಿಯೆಗಳು. ಆದರೆ ಸಾಕ್ಷ್ಯ ಸಮೇತ ಮೊದಲ ಬಾರಿಗೆ ನೋಡಲು ಸಾಧ್ಯವಾಗಿದೆ ಎಂದು ಬ್ರಿಟನ್ನಿನ ಡುರ್ರಾಮ್ ವಿಶ್ವವಿದ್ಯಾನಿಲಯದ ಖಗೋಳ ವಿಜ್ಞಾನಿ ಅನ್ನಾ ಮೆಕ್ಲೀಡ್ ಹೇಳಿದ್ದಾರೆ. ನಕ್ಷತ್ರಗಳು ದಟ್ಟ ಬಹುಕಣ ಗೊಂಚಲುಗಳಿಂದ ಹುಟ್ಟುತ್ತವೆ ಎಂದು ಆ ವಿಜ್ಞಾನಿಗಳ ತಂಡ ಹೇಳಿದೆ.
ನಮ್ಮ ಹಾಲುಹಾದಿ ಮಿಲ್ಕೀವೇ ಗೆಲಾಕ್ಸಿಯಿಂದ 1,79,000 ಬೆಳಕಿನ ವರುಷದಷ್ಟು ದೂರದ ನಮ್ಮ ನೆರೆಯ ಮೆಗಾಲ್ಲನಿಕ್ ಮೋಡ ಎಂಬ ಕುಳ್ಳ ಗೆಲಾಕ್ಸಿಯಲ್ಲಿ ಈ ಕ್ರಿಯೆ ನಡೆದಿದೆ. ಒಂದು ಅಗಲದ ಧೂಳು ಮತ್ತು ಅನಿಲದ ಚಕ್ರವು ಬಹು ದೂರದ ನಕ್ಷತ್ರ ಒಂದರ ಸುತ್ತ ಉರುಳುತ್ತ ಸುತ್ತುವುದನ್ನು ಖಗೋಳ ವಿಜ್ಞಾನಿಗಳು ಕಂಡರು. ನಕ್ಷತ್ರ ಮತ್ತು ಗ್ರಹ ಬೆಳವಣಿಗೆಯ ವ್ಯವಸ್ಥೆಯ ಹಂತದಲ್ಲಿ ಇವೆಲ್ಲ ಸದಾ ನಡೆಯುತ್ತಿರುವ ಪ್ರಕ್ರಿಯೆಗಳೇ ಆಗಿವೆ.