ಬ್ರಹ್ಮಾವರ: ಹಿಂದಿನ ಬಿಜೆಪಿ ರಾಜ್ಯ ಸರಕಾರದ ಅವಧಿಯಲ್ಲಿ ಆರಂಭವಾಗಿದ್ದ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆ “ಅಗ್ನಿ ಪಥ್” ಸೇನಾಪೂರ್ವ ತರಬೇತಿಯ ಮರು ಚಾಲನೆಗೆ ಕಾಂಗ್ರೆಸ್ ರಾಜ್ಯ ಸರಕಾರ ಅಸ್ತು ಎಂದಿದೆ. ರಾಜ್ಯದ ಕರಾವಳಿಯ 3 ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡದಲ್ಲಿ ಕಳೆದ ವರ್ಷ “ಅಗ್ನಿ ಪಥ್” ಸೇನಾ
ಲೈವ್ ವಿಡಿಯೋ ಮಾಡಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದ್ದು ಗಂಭೀರ ಸ್ಥಿತಿಯಲ್ಲಿ ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರಿನ ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸುವ ಮುನ್ನ ಯುವಕ ಬ್ಯಾರಿ ಭಾಷೆಯಲ್ಲಿ ವಿಡಿಯೋ ಮಾಡಿದ್ದು ಕೃತ್ಯಕ್ಕೆ ಕಾರಣ ಹೇಳಿ ನೇಣಿಗೆ ಶರಣಾಗುವುದಾಗಿ
ಹಾಸನ ಜಿಲ್ಲೆ ಹೆಬ್ಬಾನಹಳ್ಳಿಯಲ್ಲಿ ಎತ್ತಿನಹೊಳೆ ಯೋಜನೆಯ ಕಾಮಗಾರಿಯ ವೀಕ್ಷಣೆಗೆಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಆಗಮಿಸಿದ್ದರು. ಇದೇ ವೇಳೆ ಪೆÇಲೀಸರಿಂದ ಗೌರವ ಸಮರ್ಪಣೆ ಸ್ವೀಕರಿಸಿದರು. ನಂತರ ಯೋಜನೆ ಕುರಿತಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ. ಸಕಲೇಶಪುರ ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನೆಯನ್ನು ನಡೆಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಾಡಾನೆ ಹಾವಳಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಭೆಯಲ್ಲಿ
ಮಂಗಳೂರಿನ ನಂತೂರಿನಿಂದ ಮೂಡುಬಿದರೆಯ ತನಕ ರಾಷ್ಟ್ರೀಯ ಹೆದ್ದಾರಿಗಾಗಿ ಸ್ವಾಧೀನಪಡಿಸಿದ ಭೂಮಿಗೆ ಸೂಕ್ತ ಪರಿಹಾರ ನೀಡುವಲ್ಲಿ ವಿಳಂಬ ಆರೋಪಿಸಿ ಎನ್.ಎಚ್. 169 ಭೂ ಮಾಲೀಕರ ಹೋರಾಟ ಸಮಿತಿ ವತಿಯಿಂದ ನಂತೂರಿನ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಭೂ ಮಾಲಕರ ಹೋರಾಟ ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್ ಅವರು, ರಾ.ಹೆದ್ದಾರಿ 169ರ ಅಗಲೀಕರಣಕ್ಕಾಗಿ ಭೂಸ್ವಾಧೀನಗೊಂಡವರಿಗೆ
ತುಳುವಿನ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ರಾಪಟ. ಅರ್ಜುನ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದ್ದು, ಬಹರೈನ್‍ನಲ್ಲಿ ಸೆಫ್ಟರಂಬರ್ 15ರಂದು ಪ್ರೀಮಿಯರ್ ಶೋ ನಡೆಯಲಿದೆ. ಆ ಪ್ರಯುಕ್ತ ಟಿಕೆಟ್ ಬಿಡುಗಡೆ ಸಮಾರಂಭವು ಅದ್ಧೂರಿಯಾಗಿ ನಡೆಯಿತು.ಬೊಳ್ಳಿ ಮೂವೀಸ್ ಹಾಗೂ ಅವಿಕ ಪ್ರೋಡಕ್ಷನ್ ನಿರ್ಮಾಣದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದಿರುವ ಸಿನಿಮಾ ರಾಪಟ. ಈಗಾಗಲೇ ಗಲ್ಫ್ ರಾಷ್ಟ್ರಗಳಲ್ಲಿ
ಮುಂಬೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಟ್ಲ ಆಲ್ ಇಂಡಿಯಾ ಶಿಟೋ ರಿಯೋ ಕರಾಟೆ ಡೊ ಯೂನಿಯನ್ ತಂಡದ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶೋಟೊಕನ್ ಕರಾಟೆ-ಡೊ ಫೆಡರೆಷನ್ ಇವರ ಆಶ್ರಯದಲ್ಲಿ ಮರಾಠ ಮಂಡಲ್ ಹಾಲ್ ಮುಲುಂದ್ ಮುಂಬೈ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಇಂಡಿಪೆಂಡೆನ್ಸ್ ಕಪ್ ಕರಾಟೆ ಚಾಂಪಿಂಯನ್‍ಶಿಪ್‍ನಲ್ಲಿ ಆಲ್ ಇಂಡಿಯಾ ಶಿಟೋ ರಿಯೋ ಕರಾಟೆ ಡೊ ಯೂನಿಯನ್ತಂ ಡದ ಕರಾಟೆ
ಪೆಟ್ ಝೋನ್ ಸಾಕು ಪ್ರಾಣಿ ಪಕ್ಷಿಗಳ ಮಾರಾಟ ಮಳಿಗೆ ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಇಂಟರ್ ಸಿಟಿ ಕಟ್ಟಡಲ್ಲಿ ಶುಭಾರಂಭಗೊಂಡಿತು. ಇಬ್ರಾಹಿಂ ಶಕೀಲ್ ಇಸ್ಮಾಯಿಲ್ ಮತ್ತು ಸಫ್ವಾನ್ ಇಸ್ಮಾಯಿಲ್ ಮಾಲಕತ್ವ ಪೆಟ್ ಝೋನ್ ಮಳಿಗೆಯನ್ನು ಉದ್ಯಮಿ ಕೆ.ಇಸ್ಮಾಯಿಲ್ ಸಂತೋಷ ನಗರ ಉದ್ಘಾಟಿಸಿದರು. 6 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಯಶಸ್ವಿಯಾಗಿದ್ಧೇವೆ. ನಮ್ಮಲ್ಲಿ ದೇಶ ವಿದೇಶಿದ ಸಾಕು ಪಕ್ಷಿ, ಬೆಕ್ಕು Tropical fish monster fish, exotic
ಸ್ಪಂದನ ಫ್ರೆಂಡ್ಸ್ ಅಶೋಕನಗರ ಮಂಗಳೂರು ಇದರ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ರಾಮ ಕಿರೋಡಿಯನ್ ರಸ್ತೆಯ ಮುಂಭಾಗದಲ್ಲಿ ಆಚರಿಸಲಾಯಿತು. ಸಂಸ್ಥೆಯ ಗೌರವ ಅಧ್ಯಕ್ಷರಾದ ಜೋಸ್ಸಿ ಸೋನ್ಸ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು, ಸಾರ್ವಜನಿಕರು ಭಾಗವಹಿಸಿ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ರಾಮ ಕಿರೋಡಿಯನ್ ರಸ್ತೆ ಅಶೋಕ ನಗರ ಇಲ್ಲಿಯ 2 ತಿರುವುಗಳಲ್ಲಿ ವಾಹನ ಚಾಲಕರ ಹಾಗೂ ಸಾರ್ವಜನಿಕರ
ಪುತ್ತೂರು: ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಭಾಷಣ ಮಾಡಿದ ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಸತೀಶ್ ದಾವಣೆಗೆರೆಯವರನ್ನು ಗೌರಿಬಿದನೂರು ಪೊಲೀಸರು ಬಂಧಿಸಿದನ್ನು ಖಂಡಿಸಿ ಪುತ್ತೂರಿನಲ್ಲಿ ಹಿಂದು ಜಾಗರಣ ವೇದಿಕೆಯ ನೇತೃತ್ವದಲ್ಲಿ ದೊಂದಿ ಹಿಡಿದು ಪ್ರತಿಭಟನೆ ನಡೆಸಿದರು. ಹಿಂದು ಜಾಗರಣ ವೇದಿಕೆ ಪ್ರಾಂತ ಸಂಪರ್ಕ ಪ್ರಮುಖ್ ಹರೀಶ್ ಶಕ್ತಿನಗರ ಅವರು ಮಾತನಾಡಿ ಹಿಂ.ಜಾ.ವೇ. ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ್
ಸುಬ್ರಹ್ಮಣ್ಯ: ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ನಮ್ಮ ಹೆಮ್ಮೆಯ ಇಸ್ರೋ ಸಂಸ್ಥೆಯ ಚಂದ್ರಯಾನ 3 ನೌಕೆಯು ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿಯಲಿ ಎಂದು ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವಳದ ಆಡಳಿದ ಮಂಡಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಶ್ರೀ ದೇವರಿಗೆ ಇಸ್ರೋ ಹೆಸರಿನಲ್ಲಿ ಸೇವೆ ನೆರವೇರಿಸಿತು. ಭಾರತದ ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿಯ ಚಂದ್ರಯಾನ 3 ನೌಕೆಯು ಚಂದ್ರನ




























