ಪವರ್ ಫ್ರೆಂಡ್ಸ್ ಬೆದ್ರ ಸೇವಾ ಯೋಜನೆಯಡಿ ಇರುವೈಲು ಗ್ರಾಮದ ಕಲ್ಲಾಡಿ ಎಂಬಲ್ಲಿನ ಬಡ ಕುಟುಂಬಕ್ಕೆ ಮನೆ ನಿರ್ಮಿಸಲಾಗಿದ್ದು, ಹಸ್ತಾಂತರ ಕಾರ್ಯಕ್ರಮ ಜೂನ್ 11ರಂದು ನಡೆಯಲಿದೆ ಎಂದು ಪವರ್ ಫ್ರೆಂಡ್ಸ್ ಬೆದ್ರ ಅಧ್ಯಕ್ಷ ವಿನಯ ಕುಮಾರ್ ತಿಳಿಸಿದರು. ಅವರು ಮೂಡುಬಿದರೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕಲ್ಲಾಡಿಯ ನೋಣಯ್ಯ ಪರವ ಎಂಬವರ ಬಡ ಕುಟುಂಬವು ಸಣ್ಣದಾದ
ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ದವಾದ ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೊಳಪಟ್ಟ ರಾಜ್ಯದಲ್ಲಿ ಕೋಟಿಗೂ ಮಿಕ್ಕಿ ಆದಾಯವನ್ನು ಒಳಗೊಂಡಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಈ ಬಾರಿ ಜಲಕ್ಷಾಮ ಕಂಡು ಬಂದಿದೆ. ಪ್ರತಿದಿನ ಸುಮಾರು 15000 ಕ್ಕೂ ಮಿಕ್ಕಿ ಆಗಮಿಸುವ ಭಕ್ತರಿಗೆ ಹಾಗೂ ದೇವಳದಿಂದ ನಡೆಸಲ್ಪಡುತ್ತಿರುವ ಶಿಕ್ಷಣ ಸಂಸ್ತೆಗೆ ಸಮಸ್ಯೆ ಉಂಟಾಗಿದ್ದು ಶಿಕ್ಷಣ ಸಂಸ್ತೆಗೆ ಮಧ್ಯಾಹ್ನದ ಬಳಿಕ ರಜೆಯನ್ನು ನಿಡಲಾಗುತ್ತಿದೆ. ಕಟೀಲು ಶ್ರೀ
ಶ್ರೇಷ್ಠ ವ್ಯಕ್ತಿಗಳಲ್ಲಿ ದೇವರಂತಹ ಹೃದಯವಿರುತ್ತದೆ. ಆದ್ದರಿಂದ ಉದಯ್ ಶೆಟ್ಟಿ ಮುನಿಯಾಲು ಎಲ್ಲರ ಗೌರವಕ್ಕೆ ಪಾತ್ರರಾಗುತ್ತಾರೆ ಎಂದು ಕೆಮಾರು ಸಾಧನ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅಭಿಪ್ರಾಯಸಿದ್ದಾರೆ. ಉದಯ ಶೆಟ್ಟಿ ಮುನಿಯಲು ಅಭಿಮಾನಿ ಬಳಗ ಮತ್ತು ಬ್ಲಾಕ್ ಕಾಂಗ್ರೆಸ್ ಹೆಬ್ರಿ ಮತ್ತು ಕಾರ್ಕಳದ ವತಿಯಿಂದ ಉದಯ ಶೆಟ್ಟಿ ಮುನಿಯಾಲು ಇವರ 50ನೇ ಹುಟ್ಟು ಹಬ್ಬದ ಸಂದರ್ಭ ಪುಲ್ಕೇರಿ ಲಕ್ಷ್ಮೀದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಮತ್ತು
ಮಂಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣದ ಮೇಲ್ದರ್ಜೆಗೇರಿಸುವಿಕೆ ಪುಟ್ ಓವರ್ ಬ್ರಿಡ್ಜ್ ಹಾಗೂ ಅತ್ಯವಶ್ಯಕ ರೈಲುಗಳ ನಿಲುಗಡೆಗೆ ಸಂಬಂಧಿಸಿದಂತೆ ಮಂಜೇಶ್ವರದ ಜನರಿಗೆ, ಜನಪ್ರತಿನಿಧಿಗಳು ನೀಡಿದ ವಾಗ್ದಾನಗಳು ಕಡತಗಳಲ್ಲೇ ಬಾಕಿ ಉಳಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ವರ್ಷಗಳ ಹಿಂದೆ ರೈಲು ನಿಲ್ದಾಣದ ಹಳಿ ದಾಟುತ್ತಿದ ವೇಳೆ ಸಂಭವಿಸಿದ ಅಪಘಾತದಲ್ಲಿ ಆಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಈ ವಿಚಾರವಾಗಿ ಜನರನ್ನು ಸಮಾಧಾನ ಪಡಿಸಲು ಡಂಗುರ
ಉಡುಪಿ : ಭಾರತೀಯ ಜನತಾ ಪಾರ್ಟಿ ಮಹಾಶಕ್ತಿ ಕೇಂದ್ರ ಮುದರಂಗಡಿ ಇದರ ವತಿಯಿಂದ ಜೂನ್ 7 ರ ಬುಧವಾರದಂದು, ಉಡುಪಿ ಜಿಲ್ಲೆಯ ಮುದರಂಗಡಿಯ ಸ್ಪಂದನ ಸಭಾಭವನದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಅಭಿನಂದನಾ ಸಮಾರಂಭ ನೆರವೇರಿತು. ಈ ಸಂದರ್ಭದಲ್ಲಿ ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್, ಬಿಜೆಪಿ ಕಾಪು ಮಂಡಲದ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ
ಉಡುಪಿ : ಭಾರತದಲ್ಲಿ ವಾರ್ಷಿಕವಾಗಿ, ಕ್ಯಾನ್ಸರ್ ಹೊಂದಿರುವ 78,000 ಮಕ್ಕಳಲ್ಲಿ 80% ಕ್ಕಿಂತ ಹೆಚ್ಚು ಮಕ್ಕಳು ಪೂರ್ಣ ಗುಣಮುಖವಾಗುವ ಅವಕಾಶವನ್ನು ಹೊಂದಿದ್ದಾರೆ. ಕ್ಯಾನ್ಸರ್ ನಿಂದ ಬದುಕುಳಿದವರು ಚಿಕಿತ್ಸೆಯ ತಡ ಪರಿಣಾಮಗಳು ಮತ್ತು ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದ ವಿಶಿಷ್ಟ ಸಮಸ್ಯೆಗಳನ್ನು ಎದುರಿಸುವುದರಿಂದ, ಕ್ಯಾನ್ಸರ್ ಚಿಕಿತ್ಸೆಯಿಂದ ಬದುಕುಳಿದವರಿಗೆ ವಿಶೇಷ ಚಿಕಿತ್ಸಾಲಯವನ್ನು ಹೊಂದಿರುವುದು ಮುಖ್ಯವಾಗಿದೆ. ಇದರ ಸಲುವಾಗಿ ಕ್ಯಾನ್ಸರ್ ಬದುಕುಳಿದವರಿಗೆ
ಟೀಮ್ ತಾಂಡವ ಪ್ರಸೆಂಟ್ಸ್ ತಾಂಡವ ಪ್ರೀಮಿಯರ್ ಲೀಗ್ ಉರ್ವ ಮೈದಾನದಲ್ಲಿ ಜೂನ್ 17 ಮತ್ತು 18ರಂದು ನಡೆಯಲಿದೆ.ಟೀಮ್ ತಾಂಡವ ವತಿಯಿಂದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುತ್ತಿದ್ದಾರೆ. ಜೂನ್ 18ರಂದು ನಡೆಯಲಿರುವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ವಿ4 ನ್ಯೂಸ್‍ನ ಯೂಟ್ಯೂಬ್ ಚಾನಲ್ ನಲ್ಲಿ ನೇರಪ್ರಸಾರಗೊಳ್ಳಲಿದೆ
ಉಳ್ಳಾಲ: ನೂತನ ಮನೆ ಖರೀದಿಸಿದ ಯುವತಿಯೋರ್ವಳು 24 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ. ಮೂಲತ: ಫರಂಗಿಪೇಟೆಯ ನಿವಾಸಿಯಾಗಿರುವ ಅಶ್ವಿನಿ ಬಂಗೇರ ಅವರು, ಸದ್ಯ ಕುಂಪಲ ಚಿತ್ರಾಂಜಲಿ ನಗರದಲ್ಲಿ ಮನೆ ಖರೀದಿಸಿದ್ದು, ಅದ್ಧೂರಿ ಗೃಹ ಪ್ರವೇಶಗೈದ ಐದೇ ದಿವಸದಲ್ಲಿ ಅದೇ ಮನೆ ಕೋಣೆಯೊಳಗೆ ನೇಣು ಬಿಗಿದು ಆತ್ಮ ಹತ್ಯೆಗೆ ಶರಣಾಗಿದ್ದಾಳೆ. ಅಶ್ವಿನಿ ಬರೆದ 24 ಪುಟಗಳ ಡೆತ್ ನೋಟ್ ಪೊಲೀಸರಿಗೆ ದೊರೆತಿದೆ. ಡೆತ್
ಮಂಗಳೂರಿನಿಂದ ಆಂಧ್ರ ಪ್ರದೇಶಕ್ಕೆ ಮೀನು ಹೇರಿಕೊಂಡು ಹೋಗಿದ್ದ ವಾಹನ ಹಾಗೂ ಲಾರಿ ಮಧ್ಯೆ ಆಂಧ್ರ ನಾಬೂರ ಎಂಬಲ್ಲಿ ಅಪಘಾತ ನಡೆದಿದೆ. ಮೀನು ಸಾಗಾಟ ವಾಹನ ಚಾಲಕ ಉಚ್ಚಿಲದ ಯುವಕ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೀನು ಸಾಗಾಟ ವಾಹನ ಚಾಲಕ ಕಾಪು ತಾಲೂಕಿನ ಉಚ್ಚಿಲ ಭಾಸ್ಕರ ನಗರ ಬಾಂಗ್ಲಾ ನಿವಾಸಿ ಬಶೀರ್ ಎಂದು ತಿಳಿದು ಬಂದಿದೆ. ಇಂದು ಮುಂಜಾನೆ ವೇಳೆ ಅಪಘಾತ ಸಂಭವಿಸಿದ್ದು, ಕಾಲು ಸಿಲುಕಿಕೊಂಡ ಪರಿಣಾಮ ಅವರನ್ನು ಹೊರ
ಮಧ್ಯಾಹ್ನದ ಊಟ ಸವಿದ 35 ಮಂದಿ ಸೈನಿಕರು ಅಸ್ವಸ್ಥಗೊಂಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೊಡುಗರವಳ್ಳಿ ಗ್ರಾಮದಲ್ಲಿ ಈ ಪ್ರಕರಣ ಜರುಗಿದೆ ಅಸ್ವಸ್ಥಗೊಂಡಂತಹ ಸುಮಾರು 35 ಮಂದಿಯನ್ನು ಸದ್ಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಹುಡುಗರ ಒಳ್ಳೆಯ ಕ್ಯಾಂಪ್‍ನಲ್ಲಿರುವ ವಾಹನ ಚಾಲನಾ ತರಬೇತಿ ಸೈನಿಕರು ಮಧ್ಯಾಹ್ನ ಎಂದಿನಂತೆ ಊಟ ಸವಿದಿದ್ದಾರೆ ಕೆಲ ಸಮಯದಲ್ಲಿ ಸುಮಾರು 35




























