Home Blog Left SidebarPage 537

ಮಂಜೇಶ್ವರದಲ್ಲಿ ಸರ್ವೀಸ್ ರೋಡ್, ಅಂಡರ್ ಪಾಸ್ ವ್ಯವಸ್ಥೆ : ಪ್ರಮುಖ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಮಂಜೇಶ್ವರ: ರಾಷ್ಟೀಯ ಹೆದ್ದಾರಿ ಎನ್.ಹೆಚ್. 66 ಅಭಿವೃದ್ಧಿಯ ಭಾಗವಾಗಿ ಹಲವೆಡೆ ಅಂಡರ್ ಪಾಸ್, ಸರ್ವಿಸ್ ರೋಡ್‍ನ ವ್ಯವಸ್ಥೆ ನೀಡಲಾಗಿದ್ದರೂ ಕೇರಳದ ಅತಿ ದೊಡ್ಡ ಎರಡನೇ ಚೆಕ್-ಪೋಸ್ಟ್ ಮಂಜೇಶ್ವರಕ್ಕೆ ಸರ್ವಿಸ್ ರೋಡ್ ಆಗಲಿ, ಅಂಡರ್ ಪಾಸ್ ಆಗಲಿ ಯಾವುದನ್ನು ನೀಡದ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆಗೆ ಸಿದ್ದತೆ ನಡೆಸುತಿದ್ದಾರೆ. ಇದರ ಮೊದಲ ಹಂತವಾಗಿ

“ನನ್ನನ್ನು ಅಪಹರಿಸಿ ನಾಮಪತ್ರ ವಾಪಾಸ್ ಪಡೆಯುವಂತೆ ಮಾಡಿದ್ದಾರೆ” : -ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ಆರೋಪ

ಮಂಗಳೂರು: “ಮಂಗಳೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪಕ್ಷದಿಂದ ಕಣಕ್ಕಿಳಿಸಿದ್ದ ನನ್ನನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ತಂಡವೊಂದು ಅಪಹರಿಸಿ ಕರೆದೊಯ್ದು ಬಲವಂತವಾಗಿ ನಾಮಪತ್ರ ಹಿಂತೆಗೆಯುವಂತೆ ಮಾಡಿದ್ದಾರೆ” ಎಂದು ಮಂಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಅಲ್ತಾಫ್ ಕುಂಪಲ ಆರೋಪಿಸಿದ್ದಾರೆ.“ನಾನು ಎಲ್ಲೂ ಓಡಿಹೋಗಿಲ್ಲ, ನನ್ನನ್ನು ಅಪಹರಿಸಿ ಬೆದರಿಸಿ ನನ್ನಿಂದ ನಾಮಪತ್ರ ಹಿಂದೆ ಪಡೆಯುವಂತೆ ಮಾಡಲಾಗಿದೆ. ನನಗೆ ಯಾವುದೇ

ಉಡುಪಿ. ಪಾರದರ್ಶಕ ಆಡಳಿತ ಕಾಂಗ್ರೆಸ್‍ನಿಂದ ಮಾತ್ರ ನೀಡಲು ಸಾಧ್ಯ : ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್

” 18 ವರ್ಷದವರಿಗೆ ಮತದಾನ ಮಾಡುವ ಅವಕಾಶವನ್ನು ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ನೀಡಿದ್ದಾರೆ. ಸರ್ಕಾರದಿಂದ ಆಗುವ ತೊಂದರೆಗಳನ್ನು ಯುವಕರು ತಿಳಿದುಕೊಳ್ಳಬೇಕು. ಯುವಕರಿಗಿಂದು ಉದ್ಯೋಗವಿಲ್ಲ. ಪಾರದರ್ಶಕ ಆಡಳಿತ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಯುವಜನತೆ ಗೆ ಉಗ್ಯೋಗದ ಬಾಗಿಲು ತೆರೆಯಬೇಕಾಗಿದೆ. ಕಾಂಗ್ರೆಸ್ ಹಲವು ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿದೆ. ಕಾಂಗ್ರೆಸ್ ಯುವಜನರಿಗೆ ಸಾಕಷ್ಟು ಅವಕಾಶ ನೀಡಿದೆ.” ಎಂದು ಉಡುಪಿ ವಿಧಾನಸಭಾ

ಬೈಂದೂರಿನ ಶ್ರೀ ವಿಶಾಲಾಕ್ಷೀ ಅಮ್ಮನವರ ದೇವಸ್ಥಾನ ಬ್ರಹ್ಮಕಲಶೋತ್ಸವ

ಬೈಂದೂರಿನ ಕಿರಿ ಮಂಜೇಶ್ವರದ ಶ್ರೀ ಕ್ಷೇತ್ರ ಶ್ರೀ ಅಗಸ್ತೇಶ್ವರ, ಶ್ರೀ ಮಹಾಗಣಪತಿ, ಶ್ರೀ ವಿಶಾಲಾಕ್ಷಿ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ಅಗಸ್ತೇಶ್ವರ ದೇವರ ಜೀರ್ಣಾಷ್ಟಬಂಧ, ಬ್ರಹ್ಮಕಲಶೋತ್ಸವ ಪುಷ್ಪರಥ ಸಮರ್ಪಣೆ ಹಾಗೂ ಶ್ರೀ ಮನ್ಮಹಾ ರಥೋತ್ಸವವು ಏ.28ರಿಂದ ಮೇ 7ರ ವರೆಗೆ ಸಂಭ್ರಮದಿಂದ ನಡೆಯಲಿದೆ. ವಾದ್ಯಗೋಷ್ಠಿ ಚೆಂಡೆ ವಾದನ ಮೂಲಕ ಭವ್ಯ ಮೆರವಣಿಗೆ ಭಕ್ತರೊಬ್ಬರು ಕೊಡಮಾಡಿದ ನೂತನ ಪುಷ್ಪಾರಥ ಅದ್ದೂರಿಯಾಗಿ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ನಾಗೂರಿನ ಶ್ರೀ

ಹಿಂದುಳಿದ ವರ್ಗಗಳು ಒಂದಾಗುವ ಅಗತ್ಯವಿದೆ : ಮಾಜಿ ಸಚಿವ ವಿನಯಕುಮಾರ್ ಸೊರಕೆ

ಹಿಂದುಳಿದ ವರ್ಗಗಳ ಮೀಸಾಲಾತಿಗಳನ್ನು ರದ್ದುಮಾಡಿ, ಅದನ್ನು ಮೇಲ್ವರ್ಗಗಳಿಗೆ ನೀಡುವ ಕೆಲಸವನ್ನು ಬಿಜೆಪಿ ಸರ್ಕಾರ ನಡೆಸುತ್ತಿದ್ದು, ಆ ನಿಟ್ಟಿನಲ್ಲಿ ಕೆಲವರ್ಗದ ನಾವೆಲ್ಲಾ ಒಂದಾಗುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂಬುದಾಗಿ ಮಾಜಿ ಸಚಿವರೂ…ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯೂ ಆದ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.ಅವರು ಎರ್ಮಾಳು ಲಕ್ಷ್ಮೀ ಜನಾರ್ದನ ದೇವಸ್ಥಾನ, ವೀರಭದ್ರ ದೇವಸ್ಥಾನ, ನಡಿಯಾಲು ಧೂಮಾವತಿ ದೈವಸ್ಥಾನ ಮುಂತಾದ ಧಾರ್ಮಿಕ

ಜನರ ಬದುಕಿನ ಪ್ರಶ್ನೆ ಗೆಲ್ಲಬೇಕಾದರೆ ಬಿಜೆಪಿಯನ್ನು ಸೋಲಿಸಿ- ಸಂತೋಷ್ ಬಜಾಲ್

ರಾಜ್ಯದ ಅಧಿಕಾರ ಚುಕ್ಕಾಣಿಯಲ್ಲಿರುವ ಬಿಜೆಪಿ ಸರಕಾರದ ಅವಧಿಯಲ್ಲಿ ಜನರ ಯಾವೊಂದು ಆಶೋತ್ತರಗಳನ್ನು ಈಡೇರಿಸಲಿಲ್ಲ. ಭ್ರಷ್ಟಾಚಾರ, ಅಕ್ರಮ ಹಣ ಸಂಪಾದನೆ, ಮತೀಯ ವಿಭಜನೆಯಂತಹ ರಾಜಕಾರಣದಲ್ಲಿ ಜನರ ಬದುಕಿನ ಪ್ರಶ್ನೆಯನ್ನು ಕಡೆಗಣಿಸಿದಲ್ಲದೆ ಸೋಲಿಸುತ್ತಾ ಬಂದಿದೆ. ಈ ರಾಜ್ಯದ ಜನರ ಬದುಕಿನ ಪ್ರಮುಖ ವಿಚಾರಗಳಾದ ಉದ್ಯೋಗ, ಆರೋಗ್ಯ, ಶಿಕ್ಷಣದಂತಹ ಬಹುಮುಖ್ಯ ಪ್ರಶ್ನೆಗಳು ಗೆಲ್ಲಬೇಕಾದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೋಲಬೇಕಾಗಿದೆ ಎಂದು ಸಿಪಿಐಎಂ ಮಂಗಳೂರು

ಶಾಸಕರ ಮಾನಹಾನಿ ಪ್ರಕರಣ ಸಮಗ್ರ ತನಿಖೆಯಾಗಲಿ – CPIM ಒತ್ತಾಯ

ಶಾಸಕ ವೇದವ್ಯಾಸ ಕಾಮತ್ ರವರು ತನ್ನ ಮಾನಹಾನಿಕರ ಸುದ್ದಿ ಪ್ರಕಟವಾಗದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದಿರುವ ಬಗ್ಗೆ ಸಮಗ್ರ ತನಖೆಯಾಗಬೇಕು.ಜನರಿಂದ ಆಯ್ಕೆಯಾದ ಜನಪ್ರತಿನಿಧಿಯೊಬ್ಬರು ಮಾನಹಾನಿ ಆಗುವಂತಹ ವಿಚಾರದ ಬಗ್ಗೆ ಕನಿಷ್ಟ ದೂರನ್ನು ಕೊಡದೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದು ಶಾಸಕರ ಸಚ್ಚಾರಿತ್ಯದ ಬಗ್ಗೆ ಸಾರ್ವಜನಿಕರಿಗೆ ಅನುಮಾನಗಳು ವ್ಯಕ್ತವಾಗುತ್ತಿದ್ದು,ಈ ಬಗ್ಗೆ ಕೂಡಲೇ ಶಾಸಕ ವೇದವ್ಯಾಸ ಕಾಮತರು ಸ್ಪಷ್ಟನೆ ನೀಡಬೇಕು ಎಂದು CPIM ದ.ಕ. ಜಿಲ್ಲಾ

ಕಾಪು ಬಿಜೆಪಿ ಅಭ್ಯರ್ಥಿ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಮತಯಾಚನೆ

ಕಾಪು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಮಾನ್ಯ ಶಾಸಕರಾದ ಶ್ರೀ ಲಾಲಾಜಿ ಆರ್ ಮೆಂಡನ್ ಅವರು ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಪ್ರದೇಶದ ನಿವಾಸಿಗಳನ್ನು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಪ್ರಮುಖರೊಂದಿಗೆ ಮನೆ ಮನೆಗೆ ತೆರಳಿ ಭೇಟಿ ಮಾಡಿ ಮತಯಾಚಿಸಿದರು.

ಬೆಳ್ತಂಗಡಿ : ಮಾಜಿ ಸಚಿವ ಗಂಗಾಧರ ಗೌಡರಿಗೆ ಸಂಬಂಧಿಸಿದ ಮೂರು ಸ್ಥಳಗಳಿಗೆ ಐಟಿ ದಾಳಿ

ಮಾಜಿ ಸಚಿವ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಉಪಾಧ್ಯಕ್ಷರಾಗಿರುವ ಗಂಗಾಧರ ಗೌಡವರವರ ಮೂರು ಸ್ಥಳಗಳಿಗೆ ಏ.24 ರಂದು ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಪಕ್ಕದಲ್ಲಿರುವ ಮನೆ, ಲಾಯಿದಲ್ಲಿರುವ ಪ್ರಸನ್ನ ಇನ್ಸ್ಟಿಟ್ಯೂಷನ್ , ಇಂದಬೆಟ್ಟು ನಲ್ಲಿರುವ ಮನೆ ಮೇಲೆ ಇಂದು ಬೆಳಗ್ಗೆ ಇನೋವಾ ಕಾರಿನಲ್ಲಿ ಪೊಲೀಸರ ಜೊತೆ ಬಂದ ಐಟಿ ಅಧಿಕಾರಿಗಳು ಬಂದು ದಾಳಿ ಮಾಡಿದ್ದು. ಪರಿಶೀಲನೆ ಮುಂದುವರಿದಿದೆ.

ಜೋಕಟ್ಟೆ ಮುಹಿಯದ್ದೀನ್ ಹೊಸ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಬಿಎಮ್ ಶರೀಫ್ ಅವಿರೋಧ ಆಯ್ಕೆ

ಜೋಕಟ್ಟೆ ಮುಹಿಯದ್ದೀನ್ ಹೊಸ ಜುಮ್ಮಾ ಮಸೀದಿ 2023 ರ ಆಡಳಿತ ಸಮಿತಿಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇಂದು ನಡೆದಿದ್ದು ಅಧ್ಯಕ್ಷ ರಾಗಿ ಜೋಕಟ್ಟೆ ಮೂಲದ ಮುಝೈನ್ ಗ್ರೂಪ್ ಆಫ್ ಕಂಪನಿಯ ಮಾಲಕರಾದ ಹಾಜಿ ಬಿಎಮ್ ಶರೀಫ್ ರವರು ಅವಿರೋಧವಾಗಿ ಆಯ್ಕೆ ಯಾದರು. ಉಪಾಧ್ಯಕ್ಷರಾಗಿ ಹಾಜಿ ಬಿಎಸ್ ಶರೀಪ್ಪ್ರಧಾನ ಕಾರ್ಯದರ್ಶಿ-ಎಚ್ ಎಮ್ ಬಾವಜೊತೆ ಕಾರ್ಯದರ್ಶಿಯಾಗಿ ಹಾಜಿ ಟಿ ಅಬೂಬಕ್ಕರ್,ಖಜಾಂಚಿ-ಸುಲೈಮಾನ್ ಬೊಟ್ಟುಸಾಂಸ್ಕೃತಿಕ