ಉಡುಪಿ. ಪಾರದರ್ಶಕ ಆಡಳಿತ ಕಾಂಗ್ರೆಸ್‍ನಿಂದ ಮಾತ್ರ ನೀಡಲು ಸಾಧ್ಯ : ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್
” 18 ವರ್ಷದವರಿಗೆ ಮತದಾನ ಮಾಡುವ ಅವಕಾಶವನ್ನು ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ನೀಡಿದ್ದಾರೆ. ಸರ್ಕಾರದಿಂದ ಆಗುವ ತೊಂದರೆಗಳನ್ನು ಯುವಕರು ತಿಳಿದುಕೊಳ್ಳಬೇಕು. ಯುವಕರಿಗಿಂದು ಉದ್ಯೋಗವಿಲ್ಲ. ಪಾರದರ್ಶಕ ಆಡಳಿತ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಯುವಜನತೆ ಗೆ ಉಗ್ಯೋಗದ ಬಾಗಿಲು ತೆರೆಯಬೇಕಾಗಿದೆ. ಕಾಂಗ್ರೆಸ್ ಹಲವು ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿದೆ. ಕಾಂಗ್ರೆಸ್ ಯುವಜನರಿಗೆ ಸಾಕಷ್ಟು ಅವಕಾಶ ನೀಡಿದೆ.” ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದರು.
ಅವರು ಇಂದು ಉಡುಪಿ ಕಾಂಗ್ರೆಸ್ ಭವನದಲ್ಲಿ ಯುವ ಕಾಂಗ್ರೆಸ್ ಹಮ್ಮಿಕೊಂಡ ಯುವ ಸಂಗಮ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, “ ಬಿಜೆಪಿ ಸರಕಾರದಲ್ಲಿ ಅಂಬಾನಿ, ಅದಾನಿ, ವಿಕಾಸವಾಗಿದ್ದಾರೆ. ಬಿಜೆಪಿಗೆ ಐಟಿ ಪಾರ್ಕ್ ಮಾಡುವ ಆಲೋಚನೆ ಇಲ್ಲ. ಇಲ್ಲಿಯೇ ಉದ್ಯೋಗ ನೀಡುವ ಆಲೋಚನೆ ಇಲ್ಲ. ಈ ಆಲೋಚನೆಯನ್ನು ಪ್ರಸಾದ್ ಕಾಂಚನ್ ಮಾಡಿದ್ದಾರೆ.” ಎಂದರು. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ, ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿರಾಜ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದಿವಾಕರ್ ಕುಂದರ್, ಜಿಲ್ಲಾ ಯುವ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಪ್ರೀತಿ ಸಾಲಿನ್ಸ್, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನ ಸುರಯ್ಯಾ ಅಂಜುಮ್, ಸೌರಭ್ ಬಲ್ಲಾಳ್, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.