Home Blog Left SidebarPage 687

ಮಾಜಿ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು

ಬೆಂಗಳೂರು;ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಫೈಲ್ಸ್ ಸಂಬಂದಿಸಿದ ಸಣ್ಣ ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಗಳೂರಿನ ಹೆಚ್ ಎ ಎಲ್ ರಸ್ತೆಯಲ್ಲಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರದ ಹೆಚ್‌ಎಎಲ್‌ ಮಣಿಪಾಲ್‌ ಆಸ್ಪತ್ರೆಯಲ್ಲಿ ಇಂದು 11 ಗಂಟೆಗೆ ಸಿದ್ದರಾಮಯ್ಯ

ಸುರತ್ಕಲ್ ಅಕ್ರಮ ಟೋಲ್ ಬಂದ್ : ಹೋರಾಟಗಾರರ ವಿಜಯೋತ್ಸವ

ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುಚ್ಚುವಂತೆ ಆಗ್ರಹಿಸಿ ಕಳೆದ 35 ದಿನಗಳಿಂದ ನಡೆಯುತ್ತಿದ್ದ ಆಹೋರಾತ್ರಿ ಹೋರಾಟವು ಬುಧವಾರ ರಾತ್ರಿ ಮುಕ್ತಾಯಗೊಂಡಿದ್ದು, ಹೋರಾಟ ಯಶಸ್ವಿಯಾದ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯ ನಾಯಕರು ಹಾಗೂ ಕಾರ್ಯಕರ್ತರು ಗುರುವಾರದಂದು ಸುರತ್ಕಲ್ ಧರಣಿ ವೇದಿಕೆಯಲ್ಲಿ ವಿಜಯೋತ್ಸವ ಆಚರಿಸಿದರು. ಸಾಮೂಹಿಕ ಹೋರಾಟದ ಫಲವಾಗಿ ಸುರತ್ಕಲ್ ಅಕ್ರಮ ಟೋಲ್ ಮುಚ್ಚುವಂತಾಯಿತು, ದೇಶದಲ್ಲಿ ಇರುವ ಎಲ್ಲಾ ಅಕ್ರಮ ಟೋಲ್ ಗಳ ಮುಚ್ಚುಗಡೆಗೆ ಈ ಹೋರಾಟ

ಡಿ.3ರಂದು ಮುಸ್ಲಿಂ ವಿಚಾರ ಸಂಕಿರಣ

ಮುಸ್ಲಿಂ ಸಮುದಾಯಕ್ಕಾಗುವ ದೌರ್ಜನ್ಯ, ಅನ್ಯಾಯ ಹಾಗೂ ನಿಂದನೆಗಳನ್ನು ಗಮನದಲ್ಲಿಟ್ಟುಕೊಂಡು ಮುಸ್ಲಿಂ ಸಮಾಜಕ್ಕೆ ಆಸರೆಯಾಗಲು ಹಾಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಸ್ಲಿಂ ಜಸ್ಟೀಸ್ ಫೋರಮ್ ದ.ಕ. ವತಿಯಿಂದ ಡಿ.3ರಂದು ಸಂಜೆ 4ಕ್ಕೆ ಕಂಕನಾಡಿಯಲ್ಲಿರುವ ಜಮ್ಯಿಯ್ಯತುಲ್ ಫಲಾಹ್ ಸಭಾಂಗಣದ ಮರ್ಹೂಂ ಜನಾಬ್ ಅಮೀರ್ ತುಂಬೆ ವೇದಿಕೆಯಲ್ಲಿ ವಿಚಾರ ಸಂಕಿರಣ ನಡೆಯಲಿದೆ ಎಂದು ಸ್ಥಾಪಕಾಧ್ಯಕ್ಷ ರಫೀಯುದ್ದೀನ್ ಕುದ್ರೋಳಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ

ಸುರತ್ಕಲ್ ಟೋಲ್ ಪ್ಲಾಜಾ ಯುಗಾಂತ್ಯ : ವಾಹನ ಸವಾರರಿಗೆ ಸಿಹಿ ನೀಡಿ ಸಂಭ್ರಮ

ಕಳೆದ ದಿನಗಳ ಹಿಂದೆ ಸುರತ್ಕಲ್ ಟೋಲ್ ಗೇಟ್ ರದ್ದಾಗ ಬೇಕು ಎಂಬುದಾಗಿ ಸಾಕಷ್ಟು ಸಂಘ-ಸಂಸ್ಥೆ ಸಂಘಟನೆಗಳ ಸಹಕಾರದೊಂದಿಗೆ ಹೋರಾಟದ ಮುಖಂಡತ್ವ ವಹಿಸಿ ಪರಿಣಾಮಕಾರಿ ಹೋರಾಟ ನಡೆಸಿದ ಆಪತ್ತ್ ಭಾಂದವ ಆಸೀಫ್ ಅವರನ್ನು ಮುಚ್ಚಿದ ಟೋಲ್ ಗೇಟ್ ಮುಂಭಾಗ ಸನ್ಮಾನಿಸಿ ಗೌರವಿಸಿದ್ದಲ್ಲದೆ, ವಾಹನ ಸವಾರರಿಗೆ ಸಿಹಿ ನೀಡಿ ಸಂತೋಷ ಸಂಭ್ರಮ ಹಂಚಿಕೊಂಡರು. ಈ ಸಂದರ್ಭ ಮಾತನಾಡಿದ ಆಸೀಫ್ ಆಪತ್ತ್ ಬಾಂಧವ, ನಾನು ಹೋರಾಟ ನಡೆಸಿದ ಆ ದಿನಗಳಲ್ಲಿ ಟೋಲ್ ವಿರುದ್ಧ ಹೋರಾಟಕ್ಕೆ ನನಗೆ ಬೆಂಬಲ

ಉಚ್ಚಿಲ ಬಡಾ ಗ್ರಾ.ಪಂ. ಪ್ರಥಮ ಗ್ರಾಮ ಸಭೆ

ಕೇವಲ ಬೆರಳೆಣಿಕೆಯ ಗ್ರಾಮಸ್ಥರ ಮಧ್ಯೆಯೇ 56ನೇ ಉಚ್ಚಿಲ ಬಡಾ ಗ್ರಾಮ ಪಂಚಾಯತಿಯ ಪ್ರಥಮ ಗ್ರಾಮ ಸಭೆ, ಉಚ್ಚಿಲ ಶ್ರೀ ಮಹಾಲಕ್ಷ್ಮಿ ಸಭಾಭವನದಲ್ಲಿ ನಡೆದಿದೆ. ಆರಂಭದಲ್ಲೇ ಸಭಾಭವನದಲ್ಲಿ ಸೂಕ್ತ ಧ್ವನಿವರ್ಧಕದ ವ್ಯವಸ್ಥೆ ಇಲ್ಲದೆ ಸಭೆ ಮಾತುಗಳು ಉಪಸ್ಥಿತರಿದ್ದ ಬೆರಳೆಣಿಕೆ ಮಂದಿಗೂ ಕೇಳದೆ ಸಭೆಯಲ್ಲಿ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು.15 ಮಂದಿ ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು, ಅಧಿಕಾರಿ ವರ್ಗ ಮಾತ್ರ ಸಭೆಯಲ್ಲಿ ಕಾಣಿಸುತ್ತಿದ್ದು ಗ್ರಾ.ಪಂ. ಕಾರ್ಯವೈಕರಿ

ಕಾಪುವಿನಲ್ಲಿ ಡಿ.16, 18 ಮತ್ತು 19ರಂದು ಕಡಲ ಐಸಿರ ಬೀಚ್ ಫೆಸ್ಟ್

ಕಾಪು ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್, ಕಲ್ಚರಲ್ ಕ್ಲಬ್ ಕಾಪು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಪು ಪಡು ಮತ್ತು ದಿ. ಆರ್.ಡಿ. ಮೆಂಡನ್ ಕಾಪು ಸ್ಮರಣಾರ್ಥ ಜನ್ಮ ಶತಮಾನೋತ್ಸವ ಆಚರಣಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 16, 17 ಮತ್ತು 18 ರಂದು ಕಾಪು ಬೀಚ್ ನಲ್ಲಿ ಕಡಲ ಐಸಿರ ಬೀಚ್ ಫೆಸ್ಟ್ -2022 ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ, ಶಾಸಕ ಲಾಲಾಜಿ ಆರ್. ಮೆಂಡನ್ ತಿಳಿಸಿದರು. ಕಾಪು ಬೀಚ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ

ಹಲವಾರು ಪ್ರತಿಭಟನೆಗಳ ನಂತರ ಸುರತ್ಕಲ್ ಟೋಲ್‍ಗೆ ಮುಕ್ತಿ

ಹಲವಾರು ಪ್ರತಿಭಟನೆಗಳ ನಂತರ ಇಲ್ಲಿನ ಟೋಲ್ ಗೇಟಿಗೆ ಕೊನೆಗೂ ಮುಕ್ತಿ ದೊರಕಿದ್ದು, ಶುಕ್ರವಾರದಿಂದ ವಾಹನಗಳು ಉಚಿತವಾಗಿ ಸಂಚರಿಸುತ್ತಿವೆ. ಈ ನಡುವೆ ಈ ಶುಲ್ಕ ಕೇಂದ್ರದಲ್ಲಿ ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದ 50ಕ್ಕೂ ಅಧಿಕ ಮಂದಿ ಉದ್ಯೋಗ ವಂಚಿತರಾಗಿದ್ದಾರೆ. ಗುರುವಾರ ಮುಂಜಾನೆ ಶುಲ್ಕ ಕೇಂದ್ರದ ಕೆಲ ಸಿಬ್ಬಂದಿಗಳು ಆಗಮಿಸಿ ಕುರ್ಚಿಗಳಲ್ಲಿ ಕುಳಿತು ಮೊಬೈಲ್ ವೀಕ್ಷಿಸುತ್ತಿದ್ದ ದೃಶ್ಯ ಕಂಡು ಬಂತು.ಹೆಜಮಾಡಿಯ ನವಯುಗ ಟೋಲ್ ಗೇಟ್ ಗೆ ಕೇಂದ್ರ ಸರ್ಕಾರ

ಸುರತ್ಕಲ್ : ಟೋಲ್ ಗು ಟೋಲ್ ಗು ಮದುವೆಯಂತೆ …!

ಮಂಗಳೂರು: ಸುರತ್ಕಲ್ ಹಾಗೂ ಹೆಜಮಾಡಿ ಟೋಲ್ ಗೇಟ್ ಗೆ ಬಿಜೆಪಿ ಸರ್ಕಾರದ ಕೃಪೆಯಿಂದ ಶುಭ ವಿವಾಹ. ಇಂತಹದ್ದೊಂದು ವಿವಾಹ ಆಮಂತ್ರಣದ ಪತ್ರಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಸುರತ್ಕಲ್ ನ ಎನ್ ಐಟಿಕೆ ಬಳಿಯಿದ್ದ ಅಕ್ರಮ ಟೋಲ್ ಗೇಟ್ ಇತ್ತೀಚೆಗೆ ಸಾರ್ವಜನಿಕರ ಭಾರೀ ಆಕ್ರೋಶದ ಹಿನ್ನೆಲೆಯಲ್ಲಿ ರದ್ದಾಗಿತ್ತು. ಆದರೆ, ಇದಾದ ಬಳಿಕ ಹೆಜಮಾಡಿ ಟೋಲ್ ಗೇಟ್ ನಲ್ಲಿ ಸುರತ್ಕಲ್ ಟೋಲ್ ಗೇಟ್ ನ ಟೋಲ್ ಅನ್ನೂ ಸೇರಿಸಿ ದುಪ್ಪಟ್ಟು ಟೋಲ್ ಸಂಗ್ರಹ

ಹಸುವಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದವ ಅಂದರ್

ಕೊಡಗು: ಮೇಯುತ್ತಿದ್ದ ಹಸುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದ ವಿಕೃತ ಕಾಮಿಯನ್ನು ಪೊಲೀಸರು, ಕೊಡಗಿನಲ್ಲಿ ಬಂಧಿಸಿದ್ದಾರೆ. ದೇವಯ್ಯ ಎನ್ನುವವರಿಗೆ ಸೇರಿದ್ದ ಹಸು ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದ ಅಬೂಬಕ್ಕರ್‌ ಸಿದ್ದಿಕಿ (40) ಬಂಧಿತ ಆರೋಪಿ. ಕಳೆದ‌ 15 ದಿನಗಳಿಂದ ಅಂದಗೋವೆಗೆ ಬೈಕ್‌ನಲ್ಲಿ ಆಗಮಿಸುತ್ತಿದ್ದ ಅಬುಬಕ್ಕರ್, ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ‌ ಸಮೀಪದ ಅಂದಗೋವೆಯಲ್ಲಿ ಹಸುವಿನ ಜೊತೆ ಸೆಕ್ಸ್ ಮಾಡಿದ್ದ. ಹೀಗೆ ಒಂದು ದಿನ

ಯಕ್ಷಗಾನ ತರಬೇತಿ ಕೇಂದ್ರ ಸ್ಥಾಪನೆ : ರಕ್ಷಿತ್ ಶಿವರಾಂ

ಉಜಿರೆ : ಶ್ರೀ ಕ್ಷೇತ್ರ ಗೆಜ್ಜೆಗಿರಿ ಶ್ರೀ ಆದಿ ಧೂಮಾವತಿ ,ದೇಯಿ ಬೈದೆತಿ ಅಮ್ಮನರ ಬೆಳಕಿನಗೆಜ್ಜೆ ಸೇವೆಯ ಶ್ರೀ ಗೆಜ್ಜೆಗಿರಿ ಯಕ್ಷಗಾನ ಮೇಳದ ಯಕ್ಷಗಾನ ಬಯಲಾಟ , ಯಕ್ಷಗಾನ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬಳಿ ಯಕ್ಷ ಬಳಗ ಬೆಳ್ತಂಗಡಿ ಬಳಗದ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಯಕ್ಷ ಬಳಗ ಬೆಳ್ತಂಗಡಿ ಗೌರವ ಅಧ್ಯಕ್ಷರಾದ , ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ರವರು ಯಕ್ಷಗಾನವನ್ನು ಉಳಿಸಿ