ಸುರತ್ಕಲ್ ಟೋಲ್ ಪ್ಲಾಜಾ ಯುಗಾಂತ್ಯ : ವಾಹನ ಸವಾರರಿಗೆ ಸಿಹಿ ನೀಡಿ ಸಂಭ್ರಮ

ಕಳೆದ ದಿನಗಳ ಹಿಂದೆ ಸುರತ್ಕಲ್ ಟೋಲ್ ಗೇಟ್ ರದ್ದಾಗ ಬೇಕು ಎಂಬುದಾಗಿ ಸಾಕಷ್ಟು ಸಂಘ-ಸಂಸ್ಥೆ ಸಂಘಟನೆಗಳ ಸಹಕಾರದೊಂದಿಗೆ ಹೋರಾಟದ ಮುಖಂಡತ್ವ ವಹಿಸಿ ಪರಿಣಾಮಕಾರಿ ಹೋರಾಟ ನಡೆಸಿದ ಆಪತ್ತ್ ಭಾಂದವ ಆಸೀಫ್ ಅವರನ್ನು ಮುಚ್ಚಿದ ಟೋಲ್ ಗೇಟ್ ಮುಂಭಾಗ ಸನ್ಮಾನಿಸಿ ಗೌರವಿಸಿದ್ದಲ್ಲದೆ, ವಾಹನ ಸವಾರರಿಗೆ ಸಿಹಿ ನೀಡಿ ಸಂತೋಷ ಸಂಭ್ರಮ ಹಂಚಿಕೊಂಡರು.


ಈ ಸಂದರ್ಭ ಮಾತನಾಡಿದ ಆಸೀಫ್ ಆಪತ್ತ್ ಬಾಂಧವ, ನಾನು ಹೋರಾಟ ನಡೆಸಿದ ಆ ದಿನಗಳಲ್ಲಿ ಟೋಲ್ ವಿರುದ್ಧ ಹೋರಾಟಕ್ಕೆ ನನಗೆ ಬೆಂಬಲ ವ್ಯಕ್ತ ಪಡಿಸಿದ ಎಲ್ಲಾ ಸಂಘ-ಸಂಸ್ಥೆ ಸಂಘಟನೆಯ ಮುಖಂಡರನ್ನು ಸ್ಮರಿಸಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖರೋರ್ವರು ಆಸೀಫ್ ನಡೆಸಿದ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಮತ್ತಷ್ಟು ಸಮಾಜಮುಖಿ ಕೆಲಸಗಳು ನಿಮ್ಮಿಂದಾಗಲಿ ಎಂಬುದಾಗಿ ಆರೈಸಿದ್ದಲ್ಲದೆ, ಇಲ್ಲಿನ ಸುಂಕವನ್ನು ಸರ್ಕಾರ ಹೆಜಮಾಡಿ ಟೋಲ್ ನೋಂದಿಗೆ ವಿಲಿನ ಗೊಳಿಸದಂತೆ , ಯಾವುದೇ ಕಾರಣಕ್ಕೆ ವಿಲಿನ ಗೊಳಿಸಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
