ಡಿ.3ರಂದು ಮುಸ್ಲಿಂ ವಿಚಾರ ಸಂಕಿರಣ

ಮುಸ್ಲಿಂ ಸಮುದಾಯಕ್ಕಾಗುವ ದೌರ್ಜನ್ಯ, ಅನ್ಯಾಯ ಹಾಗೂ ನಿಂದನೆಗಳನ್ನು ಗಮನದಲ್ಲಿಟ್ಟುಕೊಂಡು ಮುಸ್ಲಿಂ ಸಮಾಜಕ್ಕೆ ಆಸರೆಯಾಗಲು ಹಾಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಸ್ಲಿಂ ಜಸ್ಟೀಸ್ ಫೋರಮ್ ದ.ಕ. ವತಿಯಿಂದ ಡಿ.3ರಂದು ಸಂಜೆ 4ಕ್ಕೆ ಕಂಕನಾಡಿಯಲ್ಲಿರುವ ಜಮ್ಯಿಯ್ಯತುಲ್ ಫಲಾಹ್ ಸಭಾಂಗಣದ ಮರ್ಹೂಂ ಜನಾಬ್ ಅಮೀರ್ ತುಂಬೆ ವೇದಿಕೆಯಲ್ಲಿ ವಿಚಾರ ಸಂಕಿರಣ ನಡೆಯಲಿದೆ ಎಂದು ಸ್ಥಾಪಕಾಧ್ಯಕ್ಷ ರಫೀಯುದ್ದೀನ್ ಕುದ್ರೋಳಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಫೀಯುದ್ದೀನ್ ಕುದ್ರೋಳಿ ವಹಿಸಲಿದ್ದಾರೆ. ಎಂಜೆಎಫ್ ಅಧ್ಯಕ್ಷ ಇರ್ಷಾದ್ ಯು.ಟಿ. ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಯ್ಯಿದ್ ಮದನಿ ದರ್ಗಾ ಸಮಿತಿ ಉಳ್ಳಾಲ ಅಧ್ಯಕ್ಷ ಅಬ್ದುಲ್ ರಶೀದ್ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಪ್ರಮುಖರಾದ ಮುಝಾಫರ್ ಅಹಮದ್, ಜಿ. ಮೆಹಬೂಬ್, ನಾಸಿರ್ ಲಕ್ಕಿ ಸ್ಟಾರ್, ಬಿ.ಎ. ಮುಮ್ತಾಜ್ ಅಲಿ, ಬಶೀರ್ ಶಾಲಿಮಾರ್, ಹನೀಫ್ , ಕೆ. ಅಶ್ರಫ್, ಮುಸ್ತಫಾ ಕೆಂಪಿ, ಇಕ್ಬಾಲ್ ಎಲಿಮಲೆ, ಅಶ್ರಫ್ ಕಲ್ಲೇಗ, ಎಂ.ಎಸ್. ಮೊಹಮ್ಮದ್, ಬಿ.ಎ. ನಝೀರ್, ಯಾಸೀನ್ ಕುದ್ರೋಳಿ, ಅಬ್ಬಾಸ್ ಸುನೈನ, ಹನೀಫ್ ಗೋಳ್ತಮಜಲು, ಅಶ್ರಫ್ ಬದ್ರಿಯಾ, ಇಸ್ಮಾಯಿಲ್ ಉಳ್ಳಾಲ ಅವರು ಭಾಗವಹಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಜಮಾಅತ್, ಮಸೀದಿ, ಮುಸ್ಲಿಂ ಸಂಘ ಸಂಸ್ಥೆ, ಸಂಘಟನೆ ಹಾಗೂ ಎಲ್ಲಾ ಮುಸ್ಲಿಂ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಯು.ಟಿ. ಇರ್ಷಾದ್, ವಹಾಬ್ ಕುದ್ರೋಳಿ, ಸಲಾಂ ಉಚ್ಚಿಲ್, ಅಲಿ ಹಸನ್, ಎಂ.ಆರ್. ಇಮ್ರಾನ್ ಉಪಸ್ಥಿತರಿದ್ದರು.
