Home Blog Left SidebarPage 730

ಗುಂಡ್ಲುಪೇಟೆ : ನಿವೇಶನ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಕಪಾಳಮೋಕ್ಷ

ನಿವೇಶನ ಹಂಚಿಕೆ ವಿಚಾರವಾಗಿ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ವಸತಿ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ನಿವೇಶನದ ಹಕ್ಕು ಪತ್ರ ಸಿಗದ ಹಿನ್ನಲೆ ಬೇಸತ್ತ ಕೆಂಪಮ್ಮ ಎಂಬಾಕೆ ಏರು ಧ್ವನಿಯಲ್ಲಿ ಸಚಿವರನ್ನು ಕೇಳಿದ್ದಕ್ಕೆ ಸಚಿವರು ಕಾಪಾಳಮೋಕ್ಷ ಮಾಡಿದ್ದಾರೆ.ಕಪಾಳಕ್ಕೆ

ನವದೆಹಲಿ : ಲಾಲ್ ಗೋಯಲ್ ಅವರಿಗೆ ಪ್ರತಿಷ್ಠಿತ ಹಾರ್ಪ್ಸ್ ಪ್ರಶಸ್ತಿ

ಆರ್ಗನ್ ಡೊನೇಷನ್ ಇಂಡಿಯಾ ಫೌಂಡೇಶನ್‌ನ ಚೇರ್‌ಮೆನ್ ಲಾಲ್ ಗೋಯಲ್ ಅವರಿಗೆ ಮಾನವೀಯತೆಯ ಸೇವೆಗಾಗಿ ಪ್ರತಿಷ್ಠಿತ ಹಾರ್ಪ್ಸ್ ಪ್ರಶಸ್ತಿಯನ್ನು ನವದೆಹಲಿಯ ಇಂಡಿಯನ್ ಏವಿಯೇಷನ್ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಏರ್ ಇಂಡಿಯಾದ ಕಾರ್ಯನಿವಾರ್ಹಕ ನಿರ್ದೇಶಕರಾದ ಡಾ. ಹರ್‌ಪ್ರಿತ್ ಡಿ ಸಿಂಗ್ ಅವರು ಲಾಲ್ ಗೋಯಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ಹರ್‌ಪ್ರಿತ್ ಡಿ ಸಿಂಗ್ ಅವರು ಹಾರ್ಪ್ಸ್ ಎಂದರೆ

ಮೂಡುಬಿದಿರೆ: ಪಡುಮಾರ್ನಾಡಿನಲ್ಲಿ ಸಿಡಿಲು ಆಘಾತ

ಮೂಡುಬಿದಿರೆ: ಪಡುಮಾರ್ನಾಡ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನಡ್ಕ ಪಾಡ್ಯಾರ್ ನಿವಾಸಿ ಸುಜಾತ ಎಂಬವರ ಮನೆಗೆ ನಿನ್ನ ರಾತ್ರಿ ಸಿಡಿಲು ಬಡಿದು ಮನೆಯ ಕರೆಂಟ್ ಸ್ವಿಚ್ ಬೋರ್ಡ್, ‘ವಿದ್ಯುತ್ ವಯರ್‌ಗಳು ಸುಟ್ಟು ಸುಮಾರು 50 ಸಾವಿರ ಮೌಲ್ಯದ ವಿದ್ಯುತ್ ಇತರ ಸಲಕರಣೆಗಳು ಹಾನಿಗೀಡಾಗಿವೆ. ಸ್ಥಳಕ್ಕೆ ಮೂಡುಮಾರ್ನಾಡ್ ಪಂಚಾಯತ್ ಪಿಡಿಓ ಅನಿಲ್, ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಸುಜಾತ ಹಾಗು ಅವರ ತಾಯಿ ಮನೆಯೊಳಗಿದ್ದು ಪ್ರಾಣಾಪಾಯದಿಂದ

ಮಂಗಳೂರು; ಕಮಿಷನರ್ ಸೀಟೇರಿದ ಮಗು

ಮಂಗಳೂರು;ಕರಾವಳಿಯ ಮಂಗಳೂರಿನಲ್ಲಿ ಅಪರೂಪದ ಘಟನೆಯೊಂದು ನಡೆದಿದೆ.ಅಪಘಾತದಲ್ಲಿ ಮೃತ ಪೊಲೀಸ್ ಅಧಿಕಾರಿಯ ಮಗಳನ್ನು ಕಮಿಷನರ್ ಶಶಿಕುಮಾರ್ ತನ್ನ ಕುರ್ಚಿಯಲ್ಲಿ ಕೂರಿಸಿ ಗೌರವಿಸುವ ಮೂಲಕ ಪ್ರಸಂಸೆಗೆ ಪಾತ್ರರಾಗಿದ್ದಾರೆ. 2016-17ರ ವೇಳೆಯಲ್ಲಿ ಮಂಗಳೂರಿನಲ್ಲಿ ರವಿಕುಮಾರ್ ಎಂಬವರು ಎಎಸ್ಪಿಯಾಗಿದ್ದರು.ಮಂಗಳೂರು ಎಸಿಪಿ ಆಗಿದ್ದ ರವಿ ಕುಮಾರ್ 2017ರಲ್ಲಿ ಮೈಸೂರಿಗೆ ಲೋಕಾಯುಕ್ತ ಎಸ್ಪಿ ಆಗಿ ಬಡ್ತಿ ಹೊಂದಿ ವರ್ಗಾವಣೆಗೊಂಡಿದ್ದರು.ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ

ಮಂಗಳೂರು : ಶೈಕ್ಷಣಿಕ ಮತ್ತು ಸಂಶೋಧನಾ ಕುರಿತ ಕಾರ್ಯಕ್ರಮಗಳ ಬಗ್ಗೆ ಒಪ್ಪಂದ

ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಫಿಸಿಯೋಥೆರಫಿ ವಿಭಾಗ ಮತ್ತು ಥೀಮ್ ಫಿಸಿಯೋಥೆರಫಿ ಯುನಿವರ್ಸಿಟಿ ನೆದರ್‌ಲ್ಯಾಂಡ್ಸ್ ಮತ್ತು ಸ್ವಿಟ್ಜರ್‌ಲ್ಯಾಂಡ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ. ಎರಡೂ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಮತ್ತು ಸಂಶೋಧನಾ ವಿನಿಮಯ ಕಾರ್ಯಕ್ರಮಗಳಲ್ಲಿ ಸಹಕರಿಸಲು ಒಪ್ಪಿಕೊಂಡಿವೆ. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾದ ರೆವರೆಂಡ್ ಫಾದರ್ ರಿಚರ್ಡ್ ಅಲೊಶಿಯಸ್ ಕೊಯಿಲೊ ಅವರು, ಥೀಮ್ ವಿವಿಯ ನಿರ್ದೇಶಕರಾದ ಥೀಮ್‌ವಂಡರ್

ದೇರಳಕಟ್ಟೆ : ಕಣಚೂರು ಸಂಸ್ಥೆಯಲ್ಲಿ ಓರಿಯಂಟೇಶನ್ ಕಾರ್ಯಕ್ರಮ

ನಾಟೆಕಲ್‌ನ ಕಣಚೂರು ಇಸ್ಲಾಮಿಕ್ ಎಜ್ಯುಕೇಶನ್ ಟ್ರಸ್ಟ್ನ ಫಿಸಿಯೋಥೆರಫಿ, ನರ್ಸಿಂಗ್ ಅಲೈಡ್ ಹೆಲ್ತ್ ಸೈನ್ಸ್ನ 2022-23ನೇ ಬ್ಯಾಚ್‌ನ ಓರಿಯಂಟೇಶನ್ ಕಾರ್ಯಕ್ರಮ ಮತ್ತು ಕಣಚೂರು ಕಾಲೇಜು ಆಫ್ ನರ್ಸಿಂಗ್ ಸೈನ್ಸ್ನ 2022-23 ಬ್ಯಾಚ್‌ನ ಕೋರ್ಸ್ ಉದ್ಘಾಟನಾ ಕಾರ್ಯಕ್ರಮ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಡಿಟೋರಿಯಂನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಳ್ಳಾಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವಕುಮಾರ್ ಅವರು, ಈ

ಪ್ರತಿಭಾ ಕುಳಾಯಿ ವಿರುದ್ದ ಅಶ್ಲೀಲ ಬರಹ ಪೋಸ್ಟ್ ಹಾಕಿದವರು ವಿರುದ್ದ ಕ್ರಮ ಕೈಗೊಳ್ಳುತ್ತೇವೆ : ಕಮೀಷನರ್

ಮಂಗಳೂರು; ಸಾಮಾಜಿಕಕಾರ್ಯಕರ್ತೆ ಪ್ರತಿಭಾ ಕುಳಾಯಿ ವಿರುದ್ಧ ಅವಹೇಳನಾಕಾರಿ ಹಾಗೂ ಅಶ್ಲೀಲವಾಗಿ ಪೆÇೀಸ್ಟ್ ಹಾಕಿದ ಆರೋಪಿಗಳನ್ನು ಶೀಘ್ರವಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸತ್ತೇವೆ ಎಂದುಮಿಷನರ್ ಶಶಿಕುಮಾರ್ ತಿಳಿಸೊದ್ದಾರೆ. ಸುರತ್ಕಲ್ ಟೋಲ್ ಗೇಟ್ ವಿಚಾರದಲ್ಲಿ ಹೋರಾಟ ಎರಡು ಮೂರಿ ದಿನದ ಹಿಂದೆ ನಡೆದಿತ್ತು, ಈ ವೇಳೆ ಮಹಿಳಾ ಹೋರಾಟಗಾರರ ಪೋಟೋಗೆ ಅಶ್ಲೀಲವಾಗಿ ಬರಹ, ಪೋಸ್ಟ್ ಬಗ್ಗೆ ದೂರುದಾಖಲಾಗಿದೆ. ಇದರಿಂದ ಅವರ ಗೌರವಕ್ಕೆ ಧಕ್ಕೆ ಬರುವುದು,ಸಾಮಾಜಿಕ

ಮಂಗಳೂರು : ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ವರ್ಗಾವಣೆ

ಆಡಳಿತ ಯಂತ್ರ ಚುರುಕುಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು,ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರನ್ನು ಸಾಂಸ್ಕೃತಿಕ ನಗರಿ ಮೈಸೂರಿಗೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಕಳೆದ ಎರಡು ವರ್ಷಗಳಿಂದ ಹಾಗೂ ಕೊರೊನಾದಂತಹ ಮಾರಕ ರೋಗದ ಸಂದರ್ಭದಲ್ಲಿ ಉತ್ತಮ ನಿರ್ವಹಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರನ್ನು

ಉಡುಪಿ : ತುಳುನಾಡಿನಲ್ಲಿ ಮತ್ತೊಮ್ಮೆ ತನ್ನ ಕಾರ್ಣಿಕ ತೋರಿಸಿಕೊಟ್ಟ ಕೊರಗಜ್ಜ ಸ್ವಾಮಿ

ತುಳುನಾಡಿನ ಕೊರಗಜ್ಜ ಸ್ವಾಮಿ ಮತ್ತೊಮ್ಮೆ ತನ್ನ ಕಾರ್ಣಿಕವನ್ನು ತೋರಿಸಿಕೊಟ್ಟಿದೆ. ನಂಬಿದವರನ್ನು ಹರಸಿ,ಇಷ್ಟಾರ್ಥಗಳನ್ನು ಈಡೇರಿಸುವ ಕೊರಗಜ್ಜ ಆರಿ ಹೋಗುತ್ತಿದ್ದ ಕುಟುಂಬವೊಂದರ ನಂದದೀಪವನ್ನು ಬೆಳಗಿಸಿಕೊಟ್ಟಿರುವ ಅಪರೂಪದ ಘಟನೆಗೆ ತುಳುನಾಡು ಸಾಕ್ಷಿಯಾಗಿದೆ. ನಾಲ್ಕು ತಿಂಗಳ ಹಸುಕೂಸೊಂದು ಕೊರಗಜ್ಜನ ಕೃಪೆಯಿಂದ ಸಾವನ್ನೇ ಗೆದ್ದು ಬಂದಿದೆ.ಹೌದು ಸಾಗರ ಮೂಲದ ಪುಟ್ಟ ಹೆಣ್ಣು ಮಗುವಿಗೆ ವಿಪರೀತ ಜ್ವರ ಕಂಡು ಬಂದಿತ್ತು.ಎರಡು ದಿನ ಕಳೆದರೂ ಜ್ವರ ಕಡಿಮೆಯಾಗದೇ ಮಗು

ಮಂಗಳೂರು : ಪಳನೀರು ರಸ್ತೆ ಅಗಲೀಕರಣದ ಬಗ್ಗೆ ಜಾಗದ ತಕರಾರು

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಂಜತ್‌ಬೈಲ್ ದಕ್ಷಿಣ 15ನೇ ವಾರ್ಡ್ನ ಪಳನೀರು ರಸ್ತೆಯ ಅಗಲೀಕರಣದ ಬಗ್ಗೆ ಜಾಗದ ಮಾಲೀಕರ ತಕರಾರು ಇದ್ದ ಕಾರಣ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಚಣೆ ಉಂಟಾಗಿತ್ತು. ಶಾಸಕರಾದ ಡಾ. ಭರತ್ ಶೆಟ್ಟಿಯವರು ಶುಕ್ರವಾರ ಪಳನೀರಿಗೆ ಭೇಟಿ ನೀಡಿ ಪರಸ್ಪರ ಸೌಹಾರ್ದ ಮಾತುಕಥೆಯ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ತಡೆಗೋಡೆ ಸಹಿತ ರಸ್ತೆ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈ ಮೂಲಕ ಅಗಲೀಕರಣದ ಕಾಮಗಾರಿಗಿದ್ದ ಎಲ್ಲಾ