ನವದೆಹಲಿ : ಲಾಲ್ ಗೋಯಲ್ ಅವರಿಗೆ ಪ್ರತಿಷ್ಠಿತ ಹಾರ್ಪ್ಸ್ ಪ್ರಶಸ್ತಿ
ಆರ್ಗನ್ ಡೊನೇಷನ್ ಇಂಡಿಯಾ ಫೌಂಡೇಶನ್‌ನ ಚೇರ್‌ಮೆನ್ ಲಾಲ್ ಗೋಯಲ್ ಅವರಿಗೆ ಮಾನವೀಯತೆಯ ಸೇವೆಗಾಗಿ ಪ್ರತಿಷ್ಠಿತ ಹಾರ್ಪ್ಸ್ ಪ್ರಶಸ್ತಿಯನ್ನು ನವದೆಹಲಿಯ ಇಂಡಿಯನ್ ಏವಿಯೇಷನ್ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಏರ್ ಇಂಡಿಯಾದ ಕಾರ್ಯನಿವಾರ್ಹಕ ನಿರ್ದೇಶಕರಾದ ಡಾ. ಹರ್‌ಪ್ರಿತ್ ಡಿ ಸಿಂಗ್ ಅವರು ಲಾಲ್ ಗೋಯಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ಹರ್‌ಪ್ರಿತ್ ಡಿ ಸಿಂಗ್ ಅವರು ಹಾರ್ಪ್ಸ್ ಎಂದರೆ ಶುದ್ಧ ಆತ್ಮ – ಎಲ್ಲರಿಗೂ ಪ್ರೀತಿ ಮತ್ತು ಸೇವೆ ಎಂದು ಹೇಳಿದರು.
ಅಂಗ ದಾನ ಜಾಗೃತಿ ಕಾರ್ಯಕ್ರಮಕ್ಕೆ ಶ್ರೀ ಲಾಲ್ ಗೋಯೆಲ್ ಅವರ ಸಮರ್ಪಣೆಯನ್ನು ಶ್ಲಾಘಿಸಿದರು. ನಂತರ ಲಾಲ್ ಗೋಯೆಲ್ ಅವರು ಮಾತನಾಡಿ ಡಾ ಹರ್‌ಪ್ರೀತ್ ಸಿಂಗ್ ಅವರಿಗೆ ಪ್ರಶಸ್ತಿಗಾಗಿ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಅಂಗಾAಗ ದಾನದ ಜಾಗೃತಿ ಮೂಡಿಸುವ ಉದ್ದೇಶವು ಪ್ರತಿಯೊಬ್ಬರ ಧ್ಯೇಯವಾಗುವುದಾದರೆ ಮಾತ್ರ ನಾವು ಅನೇಕ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಬ್ರಹ್ಮಕುಮಾರಿಯ ಸಿಸ್ಟರ್ ಸಂಗೀತಾ, ಬೌದ್ಧ ಬಿ ಡಿ ಸುಮೇಧೋ, ಹಿತಂ ಲೈಫ್ ಋಷಿಕೇಶ ಸ್ವಾಮೀಜಿ, ರೆವರೆಂಡ್ ಫಾದರ್ ಮಾರಿಸನ್, ಹೃದ್ರೋಗ ತಜ್ಞ ಡಾ. ಮೋಹಿತ್ ಗುಪ್ತಾ, ಶಿಕ್ಷಣ ತಜ್ಞ ಡಾ. ಊರ್ವಶಿ ಮಕ್ಕರ್, ಉದ್ಯಮಿ ಶ್ರೀಮತಿ ದೀಪಿಕಾ ಜಿಂದಾಲ್, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ರಿಷಬ್ ಅಲಾಪ್ ಸಿಂಗ್ ಇತರರು ಉಪಸ್ಥಿತರಿದ್ದರು.