ಮಂಗಳೂರು: ಬಿಎನ್ ಐ ಯುನಿಟಿ ಕಪ್ ಸೀಸನ್-4ಗೆ ಚಾಲನೆ
ಮುಕುಂದ್ ಎಂಜಿಎಮ್ ರಿಯಾಲಿಟಿ ವತಿಯಿಂದ ಬಿಎನ್‌ಐ ಮಂಗಳೂರು ಮತ್ತು ಉಡುಪಿ ಸಹಯೋಗದೊಂದಿಗೆ ಯುನಿಟಿ ಕಪ್ ಸೀಸನ್ -4 ನಗರದ ಪದವು ಹೈಸ್ಕೂಲ್ ಮೈದಾನದಲ್ಲಿ ನಡೆಯಿತು.
ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿರುವ ಬಿಎನ್‌ಐ ಸಂಸ್ಥೆ, ಉದ್ಯಮದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಬಿಡುವಿನ ಸಂದರ್ಭದಲ್ಲಿ ಕ್ರೀಡಾಕೂಟವನ್ನು ಆಯೋಜಿಸಿ, ಕ್ರೀಡೆಗೆ ಕೂಡ ಪ್ರೋತ್ಸಾಹ ನೀಡಿಕೊಂಡು ಬರುತ್ತಿದ್ದಾರೆ. ಅಂತೆಯೇ ಇಂದು ನಗರದ ಪದವು ಹೈಸ್ಕೂಲ್ ಮೈದಾನದಲ್ಲಿ ಯುನಿಟಿ ಕಪ್ ಸೀಸನ್-೪ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದಾರೆ. ಕ್ರಿಕೆಟ್ ಪಂದ್ಯಾಟಕ್ಕೆ ಗಣ್ಯರು ಚಾಲನೆ ನೀಡಿದರು.
ಮಂಗಳೂರು ಮತ್ತು ಉಡುಪಿಯ ಬಿಎನ್‌ಐನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಣೇಶ್ ಶರ್ಮಾ ಅವರು ಮಾತನಾಡಿ, ಬಿಎನ್‌ಐ ಯುನಿಟಿ ಕಪ್ ಸೀಸನ್-೪ ಆಯೋಜಿಸಿದ್ದೇವೆ. ಯುನಿಟಿ ಕಪ್ ಕೋಅರ್ಡಿನೇಟರ್‌ಗಳಾದ ರಾಘವೇಂದ್ರ ಮತ್ತು ಪ್ರಶಾಂತ್ ಅವರ ಸಹಕಾರದಲ್ಲಿ ಯುನಿಟಿ ಕಪ್ ಸೀಸನ್ 4 ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಈ ಸಂದರ್ಭದಲ್ಲಿ ಕೆನರಾ ಇನ್ಸಿಸ್ಟಿಟ್ಯೂಷನ್‌ನ ಸೆಕ್ರೆಟ್ರಿ ರಂಗನಾಥ್ ಭಟ್, ಮುಕುಂದ್ ಎಂಜಿಎಮ್ ರಿಯಾಲಿಟಿಯ ಮಹೇಶ್ ಶೆಟ್ಟಿ ಹಾಗೂ ಮಂಗಳೂರು ಮತ್ತು ಉಡುಪಿಯ ಬಿಎನ್‌ಐ ಸದಸ್ಯರುಗಳು ಉಪಸ್ಥಿತರಿದ್ದರು.
ಈ ಪಂದ್ಯಾಟದಲ್ಲಿ ಆದಿ, ಇನ್‌ಸ್ಪೈಯರ್, ಇನ್‌ಫಿನಿಟಿ, ಯುನಿಕ್, ವಜ್ರ ಮತ್ತು ಅಗ್ನಿ ತಂಡಗಳ ನಡುವೆ ಸೆಣೆಸಾಟ ನಡೆಯಲಿದೆ.
ಈ ಕ್ರೀಡಾಕೂಟಕ್ಕೆ ಮುಖ್ಯ ಪ್ರಾಯೋಜಕರಾಗಿ ಮುಕುಂದ್ ಎಮ್‌ಜಿಎಂ ರಿಯಾಲಿಟಿ ಸಹಕಾರವನ್ನು ನೀಡಿದ್ರೆ, ಸಹಪ್ರಾಯೋಜಕರಾಗಿ ಮಾಪೈ, ಬ್ರೈಟ್ ಸೋಲಾರ್ ಎನರ್ಜಿ ಸೊಲ್ಯೂಷನ್ಸ್, ಟ್ರೈ ಮೆರಾಯಿನ್ ಸರ್ವೀಸಸ್, ಆರ್‌ಮೊರ್ ಕಾರ್ಟನ್ಸ್ ಮತ್ತು ಸುಂದರಮ್ ಮೋಟಾರ್‍ಸ್ ಸಹಕಾರವನ್ನು ನೀಡುತ್ತಿದೆ.