ಪುತ್ತೂರು : ರಾಜ್ಯ ಮಟ್ಟದ ತ್ರೋಬಾಲ್ ಪಂದ್ಯಾಟ : ಪುತ್ತೂರಿನ ಬೆಥನಿ ಶಾಲೆಯ ವೈಗಾ ಎಂ ರಾಷ್ಟ್ರಮಟ್ಟಕ್ಕೆ

ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ ಇದರ ವತಿಯಿಂದ ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಪುತ್ತೂರು ಇಲ್ಲಿಯ ವೈಗಾ ಎಂ ಪ್ರಥಮ ಸ್ಥಾನವನ್ನು ಪಡೆದು
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ದರ್ಬೆ ಸುದರ್ಶನ್ ಎಂಟರ್ಪ್ರೈಸಸ್ ನ ಮಾಲಕರಾದ ಮನೋಜ್ ಟಿ ವಿ ಹಾಗೂ ಸಂಧ್ಯಾ ಎಂ ಇವರ ಪುತ್ರಿ.
