ಮಂಗಳೂರು|| ಬಿಎನ್‍ಐ ಇನ್‍ಸ್ಪೈಯರ್ ಚಾಪ್ಟರ್: ವಿಶೇಷ ಅತಿಥಿಯಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್
ಮಂಗಳೂರಿನ ಬಿಎನ್‍ಐ ಇನ್‍ಸ್ಪೈಯರ್ ಚಾಪ್ಟರ್‍ನ ವಾರದ ವಿಶೇಷ ಮೀಟಿಂಗ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ವಿಶೇಷ ಅತಿಥಿಯಾಗಿ ಆಗಮಿಸಿದ್ದು, ಬಿಎನ್‍ಐ ಇನ್‍ಸ್ಪೈಯರ್ ಚಾಪ್ಟರ್‍ನಲ್ಲಿರುವ ಉದ್ಯಮಿಗಳಿಗೆ ಉತ್ಸಾಹ ತುಂಬಿಸಿದರು.
ಮಂಗಳೂರಿನಲ್ಲಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಉದ್ಯಮಿಗಳಿಗಾಗಿಯೇ ಬಿಎನ್‍ಐ ಇನ್‍ಸ್ಪೈಯರ್ ಚಾಪ್ಟರ್ ಆರಂಭವಾಗಿದ್ದು, ಹೊಸ ಉದ್ಯಮಗಳ ಪರಿಚಯದ ಜೊತೆಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನಮನ್ನಣೆಯನ್ನು ಪಡೆದಿದ್ದಾರೆ. ವಾರದ ವಿಶೇಷ ಸಭೆಗೆ ಅತಿಥಿಗಳನ್ನು ಅಹ್ವಾನಿಸುತ್ತಾರೆ.
ಈ ವಾರದ ಸಭೆಗೆ ವಿಶೇಷ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಆಗಮಿಸಿದ್ದರು. ಇದೇ ವೇಳೆ ಮಾತನಾಡಿದ ಅವರು, ಬಿಎನ್‍ಐ ಇನ್‍ಸ್ಪೈಯರ್ ಚಾಪ್ಟರ್‍ನಲ್ಲಿರುವ ಉದ್ಯಮಿಗಳು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡು ತನ್ನದೇ ಆದ ಚಾಪನ್ನು ಮಂಗಳೂರಿನಲ್ಲಿ ಮೂಡಿಸಿದ್ದಾರೆ. ಎಲ್ಲಾ ಉದ್ಯಮಿಗಳ ಒಗ್ಗೂಡುವಿಕೆಯಿಂದ ಉದ್ಯಮಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಇದೇ ವೇಳೆ ಬಿಎನ್‍ಐ ಇನ್‍ಸ್ಪೈಯರ್ ಚಾಪ್ಟರ್ ವತಿಯಿಂದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭ ಬಿಎನ್‍ಐ ಇನ್‍ಸ್ಪೈಯರ್ ಚಾಪ್ಟರ್ ಲೀಡರ್‍ಶಿಪ್ ಟೀಮ್‍ನ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಸ್ವಾಗತಿಸಿದರು. ಲೀಡರ್‍ಶಿಪ್ ಟೀಮ್‍ನ ಉಪಾಧ್ಯಕ್ಷರಾದ ನಾಗೇಶ್ ಎಸ್. ಆಚಾರ್ಯ, ಕಾರ್ಯದರ್ಶಿ ಉಮಾನಾಥ್ ಹಾಗೂ ಬಿಎನ್‍ಐ ಇನ್‍ಸ್ಪೈಯರ್ ಚಾಪ್ಟರ್ ಸದಸ್ಯರುಗಳು ಪಾಲ್ಗೊಂಡಿದ್ದರು.