Udupi : ಜೀವ ಜಂತುಗಳು ಕೂಡಾ ಗುರುಗಳಿಂದ ಸಾಯಬಾರದು ; ಚಾತುರ್ಮಾಸ್ಯ ವೃತದ ಮಹತ್ವ

ಉಡುಪಿ : ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಹಾಸನ ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಪರಮಪೂಜ್ಯ ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಅವರು ನಾಲ್ಕೂರು ಕಜ್ಕೆಯ ಶಾಖಾ ಮಠದಲ್ಲಿ ಜುಲೈ 3ರಿಂದ ಸೆಪ್ಟಂಬರ್ 29ರ ತನಕ 41ನೇ ಚಾತುರ್ಮಾಸ್ಯ ವೃತಾನುಷ್ಠಾನದ ಅಂಗವಾಗಿ ಪುರಪ್ರವೇಶ ಕಾರ್ಯಕ್ರಮ ನಡೆಯಿತು.
ಹೆಬ್ರಿ ಶ್ರೀ ವಿಶ್ವಕರ್ಮ ಸಮುದಾಯ ಭವನದಿಂದ ಹೊರಟು ಸಂತೆಕಟ್ಟೆ, ಕೆಂಜೂರು ಮೂಲಕ ಪುರಪ್ರವೇಶ ಮಾಡಿದರು. ಮಹಿಳಾ ಸಂಘದವರಿಂದ ಪೂರ್ಣಕುಂಭದ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಚಾತುರ್ಮಾಸ್ಯ ವೃತ ಸಮಿತಿ ಅಧ್ಯಕ್ಷ ಕಲ್ಗೋಳಿ ವಿಶ್ವನಾಥ ಆಚಾರ್ಯ ದಂಪತಿಗಳು ಪಾದಪೂಜೆ ನೆರವೇರಿಸಿದರು.
ಬಳಿಕ ಚಾತುರ್ಮಾಸ್ಯ ವೃತದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೂಡಬಿದರೆ ಎಸ್‍ಕೆಎಫ್ ಸಮೂಹದ ಆಡಳಿತ ನಿರ್ದೇಶಕ ಡಾ.ಜಿ.ರಾಮಕೃಷ್ಣ ಆಚಾರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಚಾತುರ್ಮಾಸ್ಯ ವೃತಾನುಷ್ಠಾನದ ಸಮಯದಲ್ಲಿ ಗುರುಗಳ ದರ್ಶನ ಮತ್ತು ಪೂಜೆಯಿಂದ ಉತ್ತಮ ಫಲ ಸಿಗುತ್ತದೆ. ಇಲ್ಲಿನ ಶ್ರೀ ಅನ್ನ ಪೂರ್ಣೇಶ್ವರೀ ದೇವಸ್ಥಾನದ ಕಾರ್ಯ ಕೂಡಾ ಇದೆ ಅವಧಿಯಲ್ಲಿ ನಡೆಯಲಿದ್ದು 2024 ಫೆಬ್ರವರಿಯಲ್ಲಿ ದೇವಿಯ ಪ್ರತಿಷ್ಠಾ ಕಾರ್ಯ ನಡೆಯಲಿದೆ ಎಂದರು.
ವೇಲಾಪುರಿ ವಿಶ್ವನಾಥ ಶರ್ಮ, ಮಾರಾಳಿ ಬಾಲಕೃಷ್ಣ ಕರಬ ಧಾರ್ಮಿಕ ಉಪನ್ಯಾಸ ನೀಡಿದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ, ಸ್ಥಳದಾನಿ ಕೃಷ್ಣಯ್ಯ ಶೆಟ್ಟಿ ಕಜ್ಕೆ, ಶ್ರೀಧರ ಕಾಮತ್ ಕಜ್ಕೆ, ದೇವಸ್ಥಾನ ನಿರ್ಮಾಣ ಸಮಿತಿಯ ಹೆಬ್ರಿ ರಾಜೇಶ ಆಚಾರ್ಯ, ನಾಲ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ ನಾಯ್ಕ್, ನಿವೃತ್ತ ಶಿಕ್ಷಕ ಕರುಣಾಕರ ಶೆಟ್ಟಿ ಕಜ್ಕೆ, ಸಹಕಾರಿ ಧಿರೀಣ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ಗೋಕುಲ ಆಚಾರ್ಯ ಇನ್ನಿತರು ಉಪಸ್ಥಿತರಿದ್ದರು.
