ಬೈಂದೂರು: ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಹುಟ್ಟೂರ ಸನ್ಮಾನ
ಬೈಂದೂರಿನ ಬವಳಾಡಿ- ಗಂಟಿಹೊಳೆಯ ವಿವೇಕಾನಂದ ಯುವಕ ಮಂಡಳಿಯ ಆಶ್ರಯದಲ್ಲಿ 14ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕÀ ಗುರುರಾಜ್ ಗಂಟಿಹೊಳೆ ಅವರಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ ನಡೆಯಿತು.
ಗುರುರಾಜ್ ಗಂಟಿಹೊಳೆ ಯವರು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬವಳಾಡಿಯಲ್ಲಿಯೂ, ಪ್ರೌಢ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪುಂದದಲ್ಲಿಯೂ ಹಾಗೂ ಕಾಲೇಜು ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ನಾವುಂದದಲ್ಲಿ ಪೂರೈಸಿರುತ್ತಾರೆ. ನಂತರದ ದಿನಗಳಲ್ಲಿ ಉನ್ನತ ಶಿಕ್ಷಣವನ್ನು ಕೆ.ಪಿ.ಟಿ ಮಂಗಳೂರಿನಲ್ಲಿ ಪೂರೈಸಿ, ಡಿಪ್ಲೋಮಾ ಇಲೆಕ್ಟಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದರು
. ಬಾಲ್ಯದಿಂದಲೇ ಸೇವಾ ಮನೋಭಾವನೆಯೊಂದಿಗೆ ದೇಶಾಭಿಮಾನವನ್ನು ಬೆಳಸಿಕೊಂಡು ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಸೇವೆ ಮಾಡುವುದರ ಮೂಲಕ ಸಮಾಜದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಅವರು 1995ರಲ್ಲಿ ಸಮಾಜ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಸರಿ ಸುಮಾರು 10 ವರ್ಷಗಳ ಕಾಲ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದಾರೆ.
ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡಲು “ಮಾ ಎಂಬ ಸೇವಾ ಟ್ರಸ್ಸನ್ನು ತೆರೆದಿರುತ್ತಾರೆ, ಹಾಗೆಯೇ ಬಡವರ ಆರೋಗ್ಯ ದೃಷ್ಟಿಯಿಂದಲೂ ಮೆಡಿಕಲ್ ಕ್ಯಾಂಪಗಳನ್ನು ಮಾಡಿ ಜನಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬಂದಿರುತ್ತಾರೆ. ಮಾತ್ರವಲ್ಲದೇ ಬವಳಾಡಿಯಲ್ಲಿ “ಶಿವನು” ಹೆಸರಿನ ಗೇರು ಬೀಜ ಪ್ಯಾಕ್ಟರಿಯನ್ನು ಹಾಗೂ ಭಟ್ಟರ ಬೆಣ್ಣೆ ಹಾಗೂ ಕುರುಬದಲ್ಲಿ ಗೇರಾ ವಾಯು ಪ್ರಾಪ್ತಿಯನ್ನು ಸ್ಥಾಪಿಸುವುದರ ಮೂಲಕ ಸಾವಿರಾರು ಜನರಿಗೆ ಉದ್ಯೋಗವನ್ನು ಕೂಡ ಕಲ್ಪಿಸಿರುತ್ತಾರೆ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿರುವ ಗುರುರಾಜ್ ಗಂಟಿಹೊಳೆ ಅವರಿಗೆ ವಿವೇಕಾನಂದ ಯುವಕ ಮಂಡಳಿ ಬವಳಾಡಿ ಗಂಟಿಹೊಳೆ 14ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭದಲ್ಲಿ ಅವರನ್ನು ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ವಿವಿಧ ಗಣ್ಯರು, ಅಧ್ಯಕ್ಷರು ಕಾರ್ಯದರ್ಶಿ ಮತ್ತು ಸರ್ವ ಸದಸ್ಯರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.