*ಮಂಗಲ್ಪಾಡಿ: ಮುಟ್ಟಂ ನವೋದಯ ಮಿತ್ರ ವೃಂದದಿಂದ 32ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮ

ಮಂಗಲ್ಪಾಡಿ ಮುಟ್ಟಂ ನವೋದಯ ಮಿತ್ರ ವೃಂದದ ವತಿಯಿಂದ 32ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಮುಟ್ಟಂನಲ್ಲಿ ಜರುಗಿತು.







ಧಾರ್ಮಿಕ ಕಾರ್ಯಕ್ರಮದಂಗವಾಗಿ ಚಂದ್ರಶೇಖರ ನಾವಡ ಬಜಕೊಡ್ಲು ಅವರ ಪೌರೋಹಿತ್ಯದದಲ್ಲಿ ಬೆಳಿಗ್ಗೆ ಶ್ರೀ ಗಣಪತಿ ದೇವರ ವಿಗ್ರಹ ಪ್ರತಿಷ್ಠೆ, ಗಣಹೋಮ, ಪ್ರತಿಷ್ಠೆ ಪೂಜೆ, ಸಾಮೂಹಿಕ ಪ್ರಾರ್ಥನೆ ನೆರವೇರಿತು.
ಸೀರೆ ಶ್ರೀ ಶಂಕರನಾರಾಯಣ ಭಜನಾ ಸಂಘ ಶಿರಿಯ ವತಿಯಿಂದ ಮತ್ತು ಅಡ್ಕ ಶ್ರೀ ಭಗವತೀ ಮಹಿಳಾ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕರಾದ ಡಾ. ಗಿರಿಧರ್ ರಾವ್ ಎಂ.ಎಸ್. ಅವರು ವಹಿಸಿದ್ದರು.
ಪತ್ರಕರ್ತರು ಲೇಖಕರಾದ ರವಿ ನಾಯ್ಕಾಪು ಧಾರ್ಮಿಕ ಉಪನ್ಯಾಸ ನೀಡಿದರು. ಪ್ರತಿಭಾವಂತ ಊರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಅಂಬಾರು ಶ್ರೀ ಸದಾಶಿವ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕೃಷ್ಣ ಪೂಜಾರಿ ದೇರಂಬಳ, ಬಂಟರ ಸಂಘ ಮಂಗಲ್ಪಾಡಿ ಅಧ್ಯಕ್ಷರಾದ ಶ್ರೀಧರ್ ಶೆಟ್ಟಿ ಮುಟ್ಟಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.