ಬೈಂದೂರು: ಅದ್ದೂರಿಯಾಗಿ ನಡೆದ ಹುಲಿ ಕೊಲ್ಲುವ ವಿಶೇಷ ಕಾರ್ಯಕ್ರಮ

ಇತಿಹಾಸ ಪ್ರಸಿದ್ಧ ಬೈಂದೂರು ಬಂಕೇಶ್ವರಾ ಶ್ರೀ ಮಹಾಕಾಳಿ ಅಮ್ಮನವರ ದೇವಸ್ಥಾನದಲ್ಲಿ ಐತಿಹಾಸಿಕ ಹುಲಿ ಕೊಲ್ಲುವ ಕಾರ್ಯಕ್ರಮ ನಡೆಯಿತು.

ಬೈಂದೂರಿನ ಸುತ್ತಮುತ್ತಲಿನ ಜನರು ಮಹಾಕಾಳಿ ಅಮ್ಮನವರಿಗೆ ನವರಾತ್ರಿಯ ಸಂದರ್ಭದಲ್ಲಿ ಸೇವೆ ಹಾಗೂ ಹರಕೆಯ ರೂಪದಲ್ಲಿ ಹುಲಿ ವೇಷ ತೊಟ್ಟು ಕುಣಿಯುವ ಪರಿ ಹಿಂದಿನಿಂದ ನಡೆದುಕೊಂದು ಬಂದಿದೆ. ಮಕ್ಕಳು ದೊಡ್ಡವರು ಭೇದವಿಲ್ಲದೇ ದೇವರ ಹರಕ್ಕೆಯನ್ನು ಸಲ್ಲಿಸಿದರು.

ಬಳಿಕ ನವರಾತ್ರಿಯ ಕೊನೆಯ ದಿನವಾದ ವಿಜಯ ದಶಮಿಯಂದು ದೇವಿಯನ್ನು ಹುಲಿಯ ಕುಣಿತದ ಮೂಲಕ ಪುರ ಮೆರವಣಿಗೆಯನ್ನು ಮಾಡಿ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಹುಲಿಯನ್ನು ಕೊಲ್ಲುವ ಕಾರ್ಯಕ್ರಮ ಸಂಪ್ರದಾಯ ಹಿಂದಿನಿಂದ ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ.

ಕಾರ್ಯಕ್ರಮ ಕೊನೆಯಲ್ಲಿ ಗ್ರಾಮಸ್ಥರು ಹುಲಿ ವೇಷಕ್ಕೆ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿ, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.