ಸಿಎಎ ಅಸಾಂವಿಧಾನಿಕ -ಅಭಿನವ್ ಚಂದ್ರಚೂಡ್

ಭಾರತೀಯ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಆಗಿರುವ ಡಿ. ವೈ. ಚಂದ್ರಚೂಡ್ ಅವರ ಮಗ ವಕೀಲರಾದ ಅಭಿನವ್ ಚಂದ್ರಚೂಡ್ ಅವರು ಕೊಲ್ಕತ್ತಾದಲ್ಲಿ ಮಾತನಾಡುತ್ತ ಸಿಎಎ ಅಸಾಂವಿಧಾನಿಕ ಎಂದು ಹೇಳಿದರು.

ವಕೀಲರಾದ ಅಭಿನವ್ ಅವರು ಸಂವಿಧಾನದ 14 ಮತ್ತು ಕೆಲವು ವಿಧಿಗಳನ್ನು ಉದಾಹರಿಸಿ ಸಿಎಎ ಸಂವಿಧಾನದ ಆಶಯಗಳಿಗೆ, ಸರ್ವರಿಗೆ ಸಮ ಬಾಳು ತತ್ವಕ್ಕೆ ವಿರುದ್ಧವಾದುದು ಎಂದು ಹೇಳಿದ್ದಾರೆ.

ಜ್ಯೂಗಳ ವಲಸೆ, ಪಾರಸಿಗಳ ವಲಸೆ ಭಾರತದಲ್ಲಿ ಅಲ್ಪ ಸ್ವಲ್ಪ ಇರುವ ಅವರ ಇರುವಿಕೆಗಳ ಕಾರಣವನ್ನು ಅಭಿನವ್ ವಿವರಿಸಿದರು.

1947ರ ಮಾರ್ಚ್ 1ರ ಬಳಿಕ ಪಾಕಿಸ್ತಾನದಿಂದ ಸಾಕಷ್ಟು ಹಿಂದೂ, ಸಿಖ್‌ಗಳು ಭಾರತಕ್ಕೆ ಬಂದರು. ಮುಖ್ಯವಾಗಿ 1948ರ ಆಗಸ್ಟ್ ಬಳಿಕ ಹೆಚ್ಚು ಮುಸ್ಲಿಮರು ಪಾಕಿಸ್ತಾನಕ್ಕೆ ಹೋದರು. ಅವರು ಬಿಟ್ಟು ಹೋದ ಆಸ್ತಿಯನ್ನು ಹಿಂದೂ, ಸಿಖ್ ಜನ ಹಂಚಿಕೊಂಡರು. ಅನಂತರ ವಾಪಾಸಾದ ಕೆಲವು ಮುಸ್ಲಿಮರಿಗೆ ಭಾರತದಲ್ಲಿ ಅವರ ಆಸ್ತಿ ಸಿಗಲಿಲ್ಲ. ನೆಹರೂ ಸರಕಾರವು ವರುಷಕ್ಕೆ 2000 ದಷ್ಟು ಮಂದಿಗೆ ಮಾತ್ರ ಹೊಸದಾಗಿ ಪೌರತ್ವ ನೀಡಲು ಸಾಧ್ಯ ಎಂದು ಸಂವಿಧಾನದ ರೀತ್ಯಾ ಹೇಳಿತು. ಒಟ್ಟಾರೆ ವಲಸೆ ಸಮಸ್ಯೆ ಮುಂದುವರಿದಿದೆ ಎಂದು ಅಭಿನವ್ ಚಂದ್ರಚೂಡ್ ಹೇಳಿದರು.

Related Posts

Leave a Reply

Your email address will not be published.