ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಬಿಜೆಪಿಗೆ
ಕಲ್ಕತ್ತಾ ಹೈಕೋರ್ಟಿನ ನ್ಯಾಯಮೂರ್ತಿ ಗಂಗೋಪಾಧ್ಯಾಯರು ನ್ಯಾಯಾಲಯ ಬಿಟ್ಟು, ಬಿಜೆಪಿಯ ರಾಜಕೀಯ ಮಾಡಲು ಹೊರಟಿದ್ದಾರೆ.
ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿ ಇದೆ ಎಂದರೆ ಅದು ಪೂರ್ಣ ಸುಳ್ಳಲ್ಲ.
ಭಾರತದ ಪ್ರಜಾಪ್ರಭುತ್ವ ಹಲವು ಅಪಾಯಗಳಿಂದ ಪಾರಾಗಿ ಬಂದಿದೆ. ಆದರೆ ಪ್ರಜಾಪ್ರಭುತ್ವದ ಹೆಸರಲ್ಲೇ ನಿರಂಕುಶ ಅಧಿಕಾರದ ಅಮಲು ಈಗ ಸ್ಪಷ್ಟವಾಗಿದೆ. ಅದಾನಿ, ಅಂಬಾನಿ ಮಂದಿ ಪ್ರಧಾನಿ ಕಚೇರಿಯಲ್ಲಿ ಧಾರಾಳವಾಗಿ ಸಿಗುತ್ತಾರೆ. ಜಾರಿ ನಿರ್ದೇಶನಾಲಯ ಪ್ರತಿಪಕ್ಷಗಳನ್ನು ಮಾತ್ರ ಗುರಿಯಾಗಿಸಿಕೊಂಡಿದೆ.
ವಿದೇಶಗಳು ಭಾರತದ ಜನಸಂಖ್ಯೆ, ಅದರ ವ್ಯಾಪಾರ ಲಾಭದ ಹೊರತಾಗಿ ಬೇರೆ ರೀತಿಯ ಗೌರವ ನೀಡುವುದನ್ನು ಕುಗ್ಗಿಸಿವೆ. ಭಾರತದ ಅಧಿಕಾರಿಗಳು, ರಾಜಕಾರಣಿಗಳು ಪ್ರಜಾಪ್ರಭುತ್ವ ಬರುವುದಕ್ಕೆ ಹಿಂದಿನಿಂದಲೂ ಭ್ರಷ್ಟರು. ಈಗಿನ ಸಮಸ್ಯೆ ಮಾಧ್ಯಮ ಮತ್ತು ನ್ಯಾಯಾಂಗ ಅದರಲ್ಲಿ ಬಿದ್ದಿರುವುದು. ವಿಚಿತ್ರ ಎಂದರೆ ಯಾವುದೇ ಅನ್ಯಾಯಕ್ಕೆ, ಬೆಲೆಯೇರಿಕೆ ಅಂತಾವಕ್ಕೆ ಸಮಾಜವು ನಿರೋಧಕ ಶಕ್ತಿ ಬೆಳೆಸಿಕೊಂಡಿರುವುದು.