Home Posts tagged highcourt

ಉಚ್ಚಿಲ ಕ್ಷೇತ್ರಕ್ಕೆ ಹೈಕೋರ್ಟ್ ಜಡ್ಜ್ ವಿಶ್ವಜಿತ್ ಶೆಟ್ಟಿ ಭೇಟಿ

ಹೈಕೋರ್ಟ್ ಜಡ್ಜ್ ವಿಶ್ವಜಿತ್ ಶೆಟ್ಟಿ ಅವರು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಳದ ವತಿಯಿಂದ ಪೂರ್ಣ ಕುಂಭದೊಂದಿಗೆ ಬರಮಾಡಿಕೊಳ್ಳಲಾಯಿತು. ನಾಡೋಜ ಡಾ. ಜಿ. ಶಂಕರ್ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷರಾದ ಶ್ರೀ ಗಿರಿಧರ್ ಸುವರ್ಣ, ಶ್ರೀ ಮನೋಹರ್ ಶೆಟ್ಟಿ ’ ಸಾಯಿರಾಧ’, ಸಂತೋಷ್ ಶೆಟ್ಟಿ

ಮೂಡುಬಿದಿರೆ ಮಾರುಕಟ್ಟೆ ಕಟ್ಟಡ ವಿವಾದ : ಆ.8 ಕ್ಕೆ ವಿಚಾರಣೆ

ಮೂಡುಬಿದಿರೆ: ಕಳೆದ ಕೆಲ ವರ್ಷಗಳಿಂದ ಮೂಡುಬಿದಿರೆ ನೂತನ ಮಾರುಕಟ್ಟೆ ಕಟ್ಟಡ ವಿವಾದವು ಹೈಕೋರ್ಟ್ ನಲ್ಲಿದ್ದು ಇದರ ವಿಚಾರಣೆಯನ್ನು ಮತ್ತೆ ಆ.8 ಕ್ಕೆ ಮುಂದೂಡಿದೆ.ಸಂರಕ್ಷಿತ ಸ್ಮಾರಕ ಪ್ರದೇಶದ ವ್ಯಾಪ್ತಿಯಲ್ಲಿ ಹೊಸ ಮಾರುಕಟ್ಟೆ ಕಟ್ಟಡ ನಿರ್ಮಾಣ ಮಾಡುವ ಮೂಡುಬಿದಿರೆ ಪುರಸಭೆಯ ಕ್ರಮವನ್ನು ಪ್ರಶ್ನಿಸಿ ಜೈಸನ್ ಮಾರ್ಷಲ್ ಸುವಾರಿಸ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಮಾರುಕಟ್ಟೆ ಕಟ್ಟಡ ನಿರ್ಮಾಣ ಅನುಮತಿಯನ್ನು ತಿರಸ್ಕರಿಸಿದ

ಶಾಸಕ ಹರೀಶ್ ಪೂಂಜಾರನ್ನು ಬಂಧಿಸದಂತೆ ಸರ್ಕಾರಕ್ಕೆ ತಾಕೀತು ಮಾಡಿದ ಉಚ್ಚ ನ್ಯಾಯಾಲಯ

ಸುಳ್ಳು ಕೇಸ್ ದಾಖಲಿಸಿ ಉದ್ದೇಶಪೂರ್ವಕವಾಗಿ ದ.ಕ. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರ ಬಂಧನ ನಡೆದಿದೆ. ಆತ ಅಮಾಯಕ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜಾ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ನಡೆದ ಘಟನೆಗಳ ಬಗ್ಗೆ ಅವರ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ ಮೊಕದ್ದಮೆ ವಿಚಾರವಾಗಿ ಜೂ೦೭ ರಂದು ಪ್ರಕರಣವನ್ನು ಕೈಗೆತ್ತಿಕೊಂಡ ಹೈಕೋರ್ಟ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್

ಬೆಂಗಳೂರು : ಬೋರ್ಡ್ ಎಕ್ಸಾಂಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ 5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಅನುಮತಿ ನೀಡಿದೆ.ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಅಧಿಸೂಚನೆಗಳನ್ನು ರದ್ದುಪಡಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ರದ್ದುಪಡಿಸಿದೆ. ಈ ಕುರಿತಂತೆ

ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಬಿಜೆಪಿಗೆ

ಕಲ್ಕತ್ತಾ ಹೈಕೋರ್ಟಿನ ನ್ಯಾಯಮೂರ್ತಿ ಗಂಗೋಪಾಧ್ಯಾಯರು ನ್ಯಾಯಾಲಯ ಬಿಟ್ಟು, ಬಿಜೆಪಿಯ ರಾಜಕೀಯ ಮಾಡಲು ಹೊರಟಿದ್ದಾರೆ. ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿ ಇದೆ ಎಂದರೆ ಅದು ಪೂರ್ಣ ಸುಳ್ಳಲ್ಲ.ಭಾರತದ ಪ್ರಜಾಪ್ರಭುತ್ವ ಹಲವು ಅಪಾಯಗಳಿಂದ ಪಾರಾಗಿ ಬಂದಿದೆ. ಆದರೆ ಪ್ರಜಾಪ್ರಭುತ್ವದ ಹೆಸರಲ್ಲೇ ನಿರಂಕುಶ ಅಧಿಕಾರದ ಅಮಲು ಈಗ ಸ್ಪಷ್ಟವಾಗಿದೆ. ಅದಾನಿ, ಅಂಬಾನಿ ಮಂದಿ ಪ್ರಧಾನಿ ಕಚೇರಿಯಲ್ಲಿ ಧಾರಾಳವಾಗಿ ಸಿಗುತ್ತಾರೆ. ಜಾರಿ ನಿರ್ದೇಶನಾಲಯ ಪ್ರತಿಪಕ್ಷಗಳನ್ನು ಮಾತ್ರ

ತಮಿಳುನಾಡು ಸೇರದ ಜಯಲಲಿತಾ ಚಿನ್ನಾಭರಣ

ಕರ್ನಾಟಕದ ವಶ ಇರುವ ದಿವಂಗತ ಜಯಲಲಿತಾರಿಗೆ ಸೇರಿದ ಚಿನ್ನಾಭರಣಗಳನ್ನು ತಮಿಳುನಾಡು ಸರಕಾರಕ್ಕೆ ಒಪ್ಪಿಸುವುದಕ್ಕೆ ಹೈಕೋರ್ಟ್ ಮಧ್ಯಾವಧಿ ತಡೆ ನೀಡಿತು. ಇವುಗಳಲ್ಲಿ ಹೆಚ್ಚಿನ ಆಭರಣಗಳು ನನ್ನ ಅಜ್ಜಿ ನಟಿ ಸಂಧ್ಯಾರಿಗೆ ಸೇರಿದ್ದು ಎಂದು ಜಯಲಲಿತಾರ ಸಹೋದರನ ಮಗಳು ಜೆ. ದೀಪಾ ತಕರಾರು ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಪಿ. ಎಂ. ನವಾಜ್ ಅವರು ಚಿನ್ನಾಭರಣ ಹಸ್ತಾಂತರಕ್ಕೆ ತಾತ್ಕಾಲಿಕ ತಡೆ ನೀಡಿದರು.

ಗೌರಿ ಲಂಕೇಶ್ ಕೊಲೆ ಆರೋಪಿ ನಾಯಕ್‌ಗೆ ನೋಟೀಸು

ಗೌರಿ ಲಂಕೇಶ್ ಕೊಲೆ ಆರೋಪಿ ಎನ್. ಮೋಹನ್ ನಾಯಕ್ ಹೈಕೋರ್ಟಿನಲ್ಲಿ ಜಾಮೀನು ಪಡೆದಿದ್ದುದರ ಸಿಂಧುತ್ವ ಪ್ರಶ್ನಿಸಿದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಆರೋಪಿ ನಾಯಕ್‌ಗೆ ನೋಟೀಸು ನೀಡಿತು. ಹೈಕೋರ್ಟ್ 2023ರ ಡಿಸೆಂಬರ್ 7ರಂದು ಮೋಹನ್ ನಾಯಕ್‌ಗೆ ಜಾಮೀನು ನೀಡಿತ್ತು. ಕೂಡಲೆ ಗೌರಿ ತಂಗಿ ಕವಿತಾ ಲಂಕೇಶ್ ಸುಪ್ರೀಂನಲ್ಲಿ ಪ್ರಶ್ನಿಸಿದ್ದರು. ಆ ಸಂಬಂಧ ಜನವರಿಯಲ್ಲಿ ಆರೋಪಿಗೆ ಸುಪ್ರೀಂ ಕೋರ್ಟ್ ನೋಟೀಸು ನೀಡಿತ್ತು. ರಾಜ್ಯ ಸರಕಾರವೂ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ

ದೆಹಲಿ : ಹೈಕೋರ್ಟ್‌ಗೆ ಮುಖ್ಯ ನ್ಯಾಯಾಧೀಶರಾಗಿ ಗುಜರಾತಿನ ಎನ್. ವಿ. ಅಂಜಾರಿಯಾ ನೇಮಕ

ಇದೇ ಫೆಬ್ರವರಿ 24ರಂದು ನಿವೃತ್ತರಾಗುವ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಕನ್ನಡಿಗರೆ ಆದ ದಿನೇಶ್ ಕುಮಾರ್ ಅವರ ಜಾಗಕ್ಕೆ ಎನ್. ವಿ. ಅಂಜಾರಿಯಾ ಅವರನ್ನು ನೇಮಕ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ಮುಖ್ಯ ನ್ಯಾಯಮೂರ್ತಿ ಆಯ್ಕೆಯನ್ನು ಸೂಚಿಸಿದೆ. ಗುಜರಾತ್ ರಾಜ್ಯದವರಾದ ಎನ್. ವಿ. ಅಂಜಾರಿಯಾ ಅವರು ಸದ್ಯ ಗುಜರಾತ್ ಹೈಕೋರ್ಟಿನಲ್ಲಿ ನ್ಯಾಯಾಧೀಶರಾಗಿ ಇದ್ದಾರೆ.