ಮಾ.30ರಂದು ಕರಿಯರ್ ಎಕ್ಸ್‌ಪ್ಲೋರೇಷನ್ ಕಾರ್ಯಾಗಾರ
ಯೆನೆಪೋಯ ಡೀಮ್ಡ್ ಟು ಬಿ ಯುನಿವರ್ಸಿಟಿಯ ಡಿಸೈನ್ ವಿಭಾಗದ ವತಿಯಿಂದ ಕರಿಯರ್ ಎಕ್ಸ್‌ಪ್ಲೋರೇಷನ್ ಮಾರ್ಚ್ 30ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಅರುಣ್ ಎ ಭಾಗವತ್ ತಿಳಿಸಿದ್ದಾರೆ.
ಅವರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ದ್ವಿತೀಯ ಪಿಯುಸಿ ಆದ ನಂತರ ಮುಂದೇನು ಎಂಬ ಬಗ್ಗೆ ಕಾರ್ಯಾಗಾರ ನಡೆಯಲಿದೆ. ಯೆನೆಪೋಯ ಸಂಸ್ಥೆ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಪಿಯು ಪ್ರಾಚಾರ್ಯರದ ಸಂಘದ ಮಾಜಿ ಅಧ್ಯಕ್ಷರಾದ ಕೆ.ಎನ್ ಗಂಗಾಧರ್ ಆಳ್ವಾ, ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಂತ್ ಪೈ, ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಪ್ರೊಪೇಸರ್ ಮತ್ತು ಹೆಚ್‌ಒಡಿ ಡಾ. ಸಕೀನಾ ನಾಸಿರ್, ಐಎಸ್‌ಡಿಸಿ ಮ್ಯಾನೇಜರ್ ದೀಪಾಲಿ ಶೆಣೈ, ಡಿಸೈನ್ ವಿಭಾಗದ ಸಾಕ್ಷಾ ಪಿ. ಶೆಟ್ಟಿ, ಐಸಿಡಿಸಿ ಸಹಾಯಕ ಮ್ಯಾನೇಜರ್ ಭರತ್ ಎನ್.ಕೆ. ಉಪಸ್ಥಿತರಿದ್ದರು.