Home ಕರಾವಳಿ Archive by category ಪುತ್ತೂರು (Page 40)

ಪುತ್ತೂರು : ನವ ವಿವಾಹಿತೆ ಆತ್ಮಹತ್ಯೆ

ಪುತ್ತೂರು :  ನವ ವಿವಾಹಿತೆಯೊಬ್ಬರು ಪತಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲ್ಲೂಕಿನ ಮಾಡನ್ನೂರು ಗ್ರಾಮದ ಸಾಂತ್ಯ ಎಂಬಲ್ಲಿ ನಡೆದಿದೆ. ಸಾಂತ್ಯ ನಿವಾಸಿ ಜಯಪ್ರಕಾಶ್ ಅವರ ಪತ್ನಿ ವೈಶಾಲಿ (26) ಆತ್ಮಹತ್ಯೆ ಮಾಡಿಕೊಂಡವರು. ಜಯ ಪ್ರಕಾಶ್‌ ಹಾಗೂ ವೈಶಾಲಿ ಮದುವೆ 7 ತಿಂಗಳ ಹಿಂದೆ ನಡೆದಿತ್ತು, ಶನಿವಾರ ಸಂಜೆ ಪತಿಯ

ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಪಿಎಫ್‍ಐ, ಎಸ್‍ಡಿಪಿಐ ಮುಖಂಡರ ಮನೆ ಮೇಲೆ ದಾಳಿ

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ರಾಜ್ಯದ ಹಲವೆಡೆ ಪಿಎಫ್‍ಐ, ಎಸ್ಡಿಪಿಐ ಮುಖಂಡರ ಮನೆಗಳ ಮೇಲೆ ಎನ್‍ಐಎ ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದು, ಮೂವರನ್ನು ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಕನ್ನಡ, ಮೈಸೂರು, ಹುಬ್ಬಳ್ಳಿ ಸೇರಿದಂತೆ ಹಲವಡೆ ನಿಷೇಧಿತ ಪಿಎಫ್‍ಐ ಸಂಘಟನೆಯ ಮುಖಂಡರ ಮನೆಗಳ ಮೇಲೆ ಎನ್‍ಐಎ ಅಧಿಕಾರಿಗಳು ಇಂದು ಮುಂಜಾನೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಅಪೂರ್ವ ಗೋಕುಲ್‍ದಾಸ್ ರಚಿಸಿದ ಕಾಂತಾರ ಸಿನಿಮಾದ ಪಂಜುರ್ಲಿ ಚಿತ್ರ

ಸುಳ್ಯ ತಾಲೂಕಿನ ವಿದ್ಯಾರ್ಥಿನಿ ಅಪೂರ್ವ ಗೋಕುಲ್‍ದಾಸ್ ರಚಿಸಿರುವ ಪಂಜುರ್ಲಿ ದೈವದ ಚಿತ್ರ ಎಲ್ಲರ ಗಮನ ಸೆಳೆದಿದೆ. ರಿಷಬ್ ಶೆಟ್ಟಿ ನಿರ್ದೇಶನದ ಕನ್ನಡ ಚಲನ ಚಿತ್ರ ಕಾಂತಾರದಲ್ಲಿ ಮೂಡಿ ಬಂದ ಪಂಜುರ್ಲಿ ದೈವದ ಚಿತ್ರವನ್ನು ಅಪೂರ್ವ ಗೋಕುಲ್‍ದಾಸ್ ಮನಮೋಹಕವಾಗಿ ರಚಿಸಿ ಮೆಚ್ಚಿಗೆ ಗಳಿಸಿದ್ದಾಳೆ. ಅಪೂರ್ವ ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ ಕೆ.ಗೋಕುಲ್‍ದಾಸ್ ಅವರ ಪುತ್ರಿ. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಎಂಟನೇ ತರಗತಿಯ

ಬೆಳ್ಳಾರೆಯಲ್ಲಿ ನೂತನ ಅಯ್ಯಂಗಾರ ಬೇಕರಿ ಉದ್ಘಾಟನೆ

ಉತ್ತಮ ಗುಣಮಟ್ಟದ ಹಾಗೂ ಶುಚಿ ರುಚಿಯಾದ ವಿವಿಧ ರೀತಿಯ ತಿಂಡಿ ತಿನಿಸುಗಳ ಮಾರಾಟ ಮಳಿಗೆ “ಎಂ, ಟಿ, ಆರ್. ಐಯ್ಯಂಗಾರ್ ಬೇಕರಿ & ಸ್ವೀಟ್ಸ್ ಬೆಳ್ಳಾರೆಯಲ್ಲಿ ಶುಭರಂಭಗೊಂಡಿದೆ. ಶುಭ ಸಮಾರಂಭಗಳಿಗೆ ಬೇಕಾದ ಬೇಕರಿ ಉತ್ಪನ್ನ ಮತ್ತು ಸ್ವೀಟ್ಸ್ ಹೋಲ್ ಸೇಲ್ ದರದಲ್ಲಿ ಲಭ್ಯ. ಇಂದೇ ಸಂಪರ್ಕಿಸಿ. ಎಂ, ಟಿ, ಆರ್. ಐಯ್ಯಂಗಾರ್ ಬೇಕರಿ & ಸ್ವೀಟ್ಸ್ ಬಸ್ ನಿಲ್ದಾಣದ ಎದುರುಗಡೆ ಬೆಳ್ಳಾರೆ ಮೊಬೈಲ್: 9844829959, 7795381568. ಸಂಪರ್ಕಿಸಬಹುದು.

ಪುತ್ತೂರಿನಲ್ಲಿ ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣ ಯೋಜನೆ

ಪುತ್ತೂರು:ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ಪುತ್ತೂರಿನಲ್ಲಿ ನಿರ್ಮಿಸುವ ಯೋಜನೆಯಿದ್ದು, ಈಗಾಗಲೇ ನಗರಸಭೆ ಈ ಕುರಿತು ಆಸಕ್ತಿ ವಹಿಸಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.ಅವರು ಪುತ್ತೂರು ನಗರಸಭೆ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಥೀಮ್ ಪಾರ್ಕ್ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನದ ರಥವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸ್ವಾಗತಿಸಿ, ಬಳಿಕ ನಟರಾಜ ವೇದಿಕೆಯಲ್ಲಿ ನಡೆದ ಸಭಾ

ಪುತ್ತೂರು : ಪುತ್ತೂರಿನಲ್ಲಿ ನ.13ರ ವರೆಗೆ ಕಾನೂನು ಅರಿವು-ನಾಗರಿಕ ಸಬಲೀಕರಣ ಅಭಿಯಾನ

ಪುತ್ತೂರು: ರಾಷ್ಟೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಅ. 31 ರಿಂದ ನ.13 ರ ವರೆಗೆ ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನದ ಮೂಲಕ ನಾಗರಿಕರ ಸಬಲೀಕರಣ ಅಭಿಯಾನವನ್ನು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ ಹಾಗು ಇತರ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಹಯೋಗದೊಂದಿಗೆ ನಡೆಸಲಾಗುವುದು. ಸಾರ್ವಜನಿಕರು ಈ ಅಭಿಯಾನದ ಪ್ರಯೋಜನ ಪಡೆಯುವಂತೆ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಹಾಗು

ಕಡಬ ; ದಲಿತ ಮಹಿಳೆಯ ಮಾನಭಂಗ ಯತ್ನ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು : ರಾಕೇಶ್ ರೈ ಕೆಡೆಂಜಿ

ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ದೋಳ್ಪಾಡಿ ಗ್ರಾಮದ ಕಟ್ಟ ಎಂಬಲ್ಲಿ ಬಟ್ಟೆ ವ್ಯಾಪಾರಿಗಳ ಸೋಗಿನಲ್ಲಿ ಬಂದ ಇಬ್ಬರು ದಲಿತ ಮಹಿಳೆಯ ಮಾನಭಂಗ ಯತ್ನ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ವಿರೋಧ ಪಕ್ಷಗಳು ಆರೋಪಿಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಹೇಳಿದರು. ಕಡಬದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಒಂಟಿ ಮಹಿಳೆ ಮನೆಯಲ್ಲಿ ಒಬ್ಬರೇ

ಪುತ್ತೂರು : ಕಾಮಧೇನು ಗೋ ಶಾಲೆ ಪ್ರಾರಂಭೋತ್ಸವ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾಮಧೇನು ಗೋ ಶಾಲೆ ಪ್ರಾರಂಭೋತ್ಸವ ಮತ್ತು ಗೋ ಪೂಜೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಗಣಪತಿ ಹೋಮ ಸಂಜೆ ಗೋ ಪೂಜೆ ನಡೆಯಿತು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರ ನೇತೃತ್ವದಲ್ಲಿ ಗೋ ಪೂಜೆ ನಡೆಯಿತು. ಗೋವುಗಳನ್ನು ಶೃಂಗರಿಸಿ. ಗಂಧ ಪ್ರಸಾದವನ್ನು ಹಚ್ಚಿ, ಅದಕ್ಕೆ ದೋಸೆ, ಅವಲಕ್ಕಿ, ಬಾಳೆ ಹಣ್ಣುಗಳನ್ನು ನೀಡಲಾಯಿತು. ಗೋ ಪೂಜೆ ಸಭಾ ಕಾರ್ಯಕ್ರಮದಲ್ಲಿ ಗೋ ಸಮರ್ಪಣೆ

ಪುತ್ತೂರು : ಕಾಂತಾರ ಚಲನಚಿತ್ರ ವೀಕ್ಷಿಸಲಿರುವ ಕೋಟ ಶ್ರೀನಿವಾಸ ಪೂಜಾರಿ

ಜಿಲ್ಲೆ, ರಾಜ್ಯ, ದೇಶ ಮಾತ್ರವಲ್ಲದೆ ವಿದೇಶದಲ್ಲೂ ಮೆಚ್ಚುಗೆಗೆ ಪಾತ್ರವಾದ ಕನ್ನಡದ ಕಾಂತಾರ ಸಿನಿಮಾವನ್ನು ದೈವ ನರ್ತಕರು, ದರ್ಶನ ಪಾತ್ರಿಗಳೊಂದಿಗೆ, ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ವಿಭಿನ್ನವಾಗಿ ವೀಕ್ಷಿಸಲ್ಲಿದ್ದಾರೆ ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ನಿರ್ದೇಶನ ಮತ್ತು ನಟನೆಯಿಂದ ಮೂಡಿಬಂದ ತುಳುನಾಡಿನ ದೈವಾರಾಧನೆ, ಕಂಬಳ ಸಹಿತ ಕರಾವಳಿ ಸಂಸ್ಕೃತಿಯನ್ನು ಬಿಂಬಿಸುವ ಕಾಂತಾರ ಸಿನಿಮಾವನ್ನು

ಪುತ್ತೂರು : ಶಾಂತಾ ಪುತ್ತೂರು ಇವರಿಗೆ ಕೆಂಪಮ್ಮ ರಾಜ್ಯ ಪುರಸ್ಕಾರ

ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ನಡೆದ ನಗೆ ಹಬ್ಬ ,ಸಾಂಸ್ಕೃತಿಕ ಕಾರ್ಯಕ್ರಮ , ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ನಾಡಿನ ಮಹಿಳಾ ಸಾಧಕರಿಗೆ ನೀಡುವ ಕೆಂಪೇಗೌಡರ ತಾಯಿ ಕೆಂಪಮ್ಮ ನವರ ಹೆಸರಿನಲ್ಲಿ ನೀಡುವ ಕೆಂಪಮ್ಮ ರಾಜ್ಯ ಪ್ರಶಸ್ತಿ ಶಾಂತಾ ಪುತ್ತೂರು ರವರಿಗೆ ಶಿಕ್ಷಣ ಹಾಗೂ ಸಾಹಿತ್ಯ ಸೇವೆಗಾಗಿ ಲಭಿಸಿದೆ. ಶಾಂತಾ ಪುತ್ತೂರು ಶಿಕ್ಷಕಿಯಾಗಿದ್ದು ಪ್ರಸ್ತುತ ಸರಕಾರಿ ಪ್ರೌಢಶಾಲೆ ಕಬಕ ದಲ್ಲಿ ಸೇವೆಸಲ್ಲಿಸುತ್ತಿದ್ದಾರೆ.ಸ್ನಾತಕೋತ್ತರ ಪದವೀಧರರಾಗಿದ್ದು