Home ಕರಾವಳಿ Archive by category ಪುತ್ತೂರು (Page 42)

“ಕೋಟಿ-ಚೆನ್ನಯ” ಹೆಸರಿನಲ್ಲಿ ಬಸ್ ನಿಲ್ದಾಣ

ಪುತ್ತೂರು: ಇನ್ಮುಂದೆ ಪುತ್ತೂರು ಕೆಎಸ್‌ಆರ್‌ಟಿಸಿಗೆ ಬಸ್‌ ನಿಲ್ದಾಣಕ್ಕೆ ತುಳುನಾಡಿನ ಅವಳಿ ವೀರಪುತ್ರರ ಹೆಸರಿನಲ್ಲಿ “ಕೋಟಿ-ಚೆನ್ನಯ” ಬಸ್ ನಿಲ್ದಾಣ ಎಂಬುದಾಗಿ ನಾಮಕರಣ ಮಾಡಲು ಸರ್ಕಾರದ ಅನುಮೋದನೆ ನೀಡಿದೆ. ಈ ಹಿಂದೆ ಪಡುಮಲೆ ಕೋಟಿ ಚೆನ್ನಯ್ಯ ಸಂಚಲನ ಟ್ರಸ್ಟ್‌ ನಿಯೋಗದಿಂದ ಶಾಸಕ ಸಂಜೀವ ಮಠಂದೂರು ಅವರಿಗೆ ಈ ಬಗ್ಗೆ ಮನವಿ ನೀಡಲಾಗಿತ್ತು.ಈ ಪ್ರಸ್ತಾವನೆಯನ್ನು

ಪುತ್ತೂರಿನ ಹೊರವಲಯದ ಪೋಳ್ಯ ಬಸ್ ತಂಗುದಾಣದಲ್ಲಿ ಗಾಂಜಾ ನಶೆಯಲ್ಲಿ ಅನುಚಿತ ವರ್ತನೆ.ಆರೋಪಿಯ ಬಂಧನ.

ಪುತ್ತೂರು: ಮಾದಕ ದ್ರವ್ಯ ಗಾಂಜಾ ನಶೆಯಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಪುತ್ತೂರು ನಗರ ಪೊಲೀಸ್ ಠಾಣೆ ಎಸ್.ಐ ಶ್ರೀಕಾಂತ್ ರಾಥೋಡ್ ಅವರು ಬಂಧಿಸಿದ ಘಟನೆ ನಡೆದಿದೆ. ಕಬಕ ಗ್ರಾಮದ ಕಲ್ಲಂದಡ್ಕ ನಿವಾಸಿ ಉಮ್ಮರ್ ಫಾರೂಖ್ (36ವ) ಬಂಧಿತ ಆರೋಪಿ. ಎಸ್.ಐ ಶ್ರೀಕಾಂತ್ ರಾಥೋಡ್ ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕಬಕ ಗ್ರಾಮದ ಪೋಳ್ಯ ಸಾರ್ವಜನಿಕ ಬಸ್ ತಂಗುದಾಣದಲ್ಲಿ ವ್ಯಕ್ತಿಯೋರ್ವ ಅನುಚಿತವಾಗಿ ವರ್ತಿಸುತ್ತ

ಉಪ್ಪಿನಂಗಡಿಯ ಪೊಲೀಸ್ ಠಾಣೆಯ ಎದುರಿನಲ್ಲೇ ಕಳ್ಳರ ಕೈಚಳಕ

ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿದ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.ಉಪ್ಪಿನಂಗಡಿಯ ಲಕ್ಷ್ಮೀ ಸ್ಟೋರ್ ನ ಷಟರ್ ಮುರಿದು ಒಳನುಗ್ಗಿರುವ ಕಳ್ಳರು ಸುಮಾರು 40 ಸಾವಿರ ರೂಪಾಯಿ ನಗದು ಹಾಗೂ ಸೊತ್ತುಗಳನ್ನು ದೋಚಿದ್ದಾರೆ. ಬಸ್ ನಿಲ್ದಾಣ ಬಳಿಯ ಸೆಲ್ ಸೈಟ್ ಮೊಬೈಲ್ ಶಾಪ್ ಗೆ ನುಗ್ಗಿದ ಕಳ್ಳರು 5 ಸಾವಿರ ರೂಪಾಯಿ ನಗದು ದೋಚಿದ್ದಾರೆ. ಬ್ಯಾಂಕ್ ರಸ್ತೆಯಲ್ಲಿರುವ ಕಾಮತ್ ಕೋಲ್ಡ್ ಹೌಸ್ ಗೆ

ಅಮೃತ ನಗರೋತ್ಥಾನ ಯೋಜನೆ : 15 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಯೋಜನೆಯ ಅಂದಾಜು ಪಟ್ಟಿ

ಪುತ್ತೂರು: ಅಮೃತ ನಗರೋತ್ಥಾನ ಯೋಜನೆಯಲ್ಲಿ ಈಗಾಗಲೇ ರೂ. 15 ಕೋಟಿ ಅಭಿವೃದ್ಧಿ ಯೋಜನೆಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ಉಳಿಕೆ 10 ಕೋಟಿಗೆ ಶೀಘ್ರ ಅಂದಾಜು ಪಟ್ಟಿ ತಯಾರಿಸಲಾಗುವುದು ಎಂದು ಪುತ್ತೂರು ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ತಿಳಿಸಿದ್ದಾರೆ. ನಗರಸಭೆ ಸಾಮಾನ್ಯ ಸಭೆಯು ಅಧ್ಯಕ್ಷ ಕೆ. ಜೀವಂಧರ್ ಜೈನ್ ಅಧ್ಯಕ್ಷತೆಯಲ್ಲಿ ನಡೆಯಿತು. ಹಾರಾಡಿ -ರೈಲ್ವೇ ನಿಲ್ದಾಣ ರಸ್ತೆಯನ್ನು 82 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಜಿಲ್ಲಾಧಿಕಾರಿಯವರ

ಕಡಬ : ರೈಲು ಇಂಜಿನ್ ಢಿಕ್ಕಿಯಾಗಿ ವ್ಯಕ್ತಿ ಗಂಭೀರ

ಕಡಬ: ರೈಲು ನಿಲ್ದಾಣದ ಬಳಿ ಆಕಸ್ಮಿಕವಾಗಿ ರೈಲು ಇಂಜಿನ್ ಢಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಡಬದ ಸುಬ್ರಹ್ಮಣ್ಯ ರೋಡ್ (ನೆಟ್ಟಣ) ನೆಟ್ಟಣದಲ್ಲಿ ನಡೆದಿದೆ. ಐತ್ತೂರು ಗ್ರಾಮದ ಓಟೆಕಜೆ ನಾಗಣ್ಣ ಗಂಭೀರ ಗಾಯಗೊಂಡ ವ್ಯಕ್ತಿ. ರೈಲು ಇಂಜಿನ್ ಢಿಕ್ಕಿಯಾದ ರಭಸಕ್ಕೆ ಒಂದು ಕಾಲು ಮತ್ತು ಒಂದು ಕೈ ತುಂಡಾಗಿದ್ದು ತುರ್ತು ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮಂಗಳೂರಿನಲ್ಲಿ

ಬೆಳ್ಳಾರೆಯಲ್ಲಿ ವೇದಾಮೃತ ಚಿಕಿತ್ಸಾಲಯ ಆರಂಭ

ಸುಳ್ಯ ತಾಲೂಕಿನ ಬೆಳ್ಳಾರೆಯ ಕೆಳಗಿನ ಪೇಟೆ ಸಿ.ಎ.ಬ್ಯಾಂಕಿನ ಹತ್ತಿರ ಹರ್ಷ ಕಾಂಪ್ಲೆಕ್ಸ್ ನಲ್ಲಿ ಡಾ| ಕಾವ್ಯಾ ಜೆ.ಎಚ್ ಅವರ ವೇದಾಮೃತ ಆಯುರ್ವೇದ ಚಿಕಿತ್ಸಾಲಯವು ಅ.10 ರಂದು ಇಂದು ಶುಭಾರಂಭಗೊಂಡಿದೆ ವೇದಾಮೃತ ಚಿಕಿತ್ಸಾಲಯದಲ್ಲಿ ಪ್ರಮುಖವಾಗಿ ಸೋರಿಯಾಸಿಸ್, ಏಕ್ಸಿಮಾ, ಮೊಡವೆ ಮುಂತಾದ ಚರ್ಮರೋಗಗಳು, ರುಮಾಟೈಡ್ ಆರ್ಥ್ರೈಟಿಸ್, ಆಸ್ಟಿಯೋ ಆರ್ಥ್ರೈಟಿಸ್, ಕತ್ತುನೋವು, ಸೊಂಟನೋವು, ಮಂಡಿನೋವು, ಪಾರ್ಶ್ವವಾಯು, ಬೆಲ್ಸ್ ಪಾಲ್ಸಿ, ಮಸ್ಕ್ಯುಲರ್ ದಿಸ್ಟ್ರೋಫಿ,

ನೆಲ್ಯಾಡಿ ಪ್ರೊಫೆಷನಲ್ ಕೊರಿಯರ್ ನ ಶೆಬಿನ್ ನೇಣಿಗೆ ಶರಣು

ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಮೊರಂಕಲ ನಿವಾಸಿ ಶೆಬಿನ್ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಳೆದ ಕೆಲವು ವರ್ಷಗಳಿಂದ ನೆಲ್ಯಾಡಿ ಯಲ್ಲಿ ಪ್ರೊಫೆಷನಲ್ ಕೊರಿಯರನ್ನು ನಡೆಸುತ್ತಿದ್ದ ಇವರು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ರಾಜೇಶ್, ನೆಲ್ಯಾಡಿ ಹೊರಠಾಣೆಯ ಹೆಡ್ ಕಾನ್ಸ್ಟೇಬಲ್ ಬಾಲಕೃಷ್ಣ ಹಾಗೂ ಪೋಲಿಸ್

ಪಾಟ್ರಕೋಡಿ ಗಾಂಜಾ ಪ್ರಕರಣ:ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಪುತ್ತೂರು: ವರ್ಷದ ಹಿಂದೆ ಪಾಟ್ರಕೋಡಿಯಲ್ಲಿ ಪತ್ತೆಯಾದ ಭಾರಿ ಪ್ರಮಾಣದ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಪಾಟ್ರಕೋಡಿಯಲ್ಲಿ ಭಾರಿ ಪ್ರಮಾಣದ ಗಾಂಜಾ ಪ್ರಕರಣದಲ್ಲಿ ಪತ್ತೆ ಮಾಡಿದ ಪೆÇಲೀಸರು ಅರೋಪಿಗಳನ್ನು ಬಂಧಿಸಿದ್ದರು. ಈ ಪೈಕಿ 2ನೇ ಆರೋಪಿ ಕಾಸರಗೋಡು ಮಂಜೇಶ್ವರ ಹೊಸಂಗಡಿ ನಿವಾಸಿ ಮಹಮ್ಮದ್ ಶಫೀಕ್ ಅವರು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ

ಸುಳ್ಯ : ಗ್ರಾ.ಪಂ.ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸುವ ವಿರುದ್ದ ಆಕ್ರೋಶ

ರಾಜ್ಯ ಬಿಜೆಪಿ ಸರಕಾರವು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸ್ಥಳೀಯ ಆಡಳಿತಕ್ಕೆ ಒತ್ತು ನೀಡಿ ಪಂಚಾಯತ್ ರಾಜ್ ವ್ಯವಸ್ಥೆಗೆ ನೀಡಲಾಗಿದ್ದ ಅಧಿಕಾರವನ್ನು ಮೊಟಕುಗೊಳಿಸಲು ಮುಂದಾಗಿದೆ. ಈ ತಿದ್ದುಪಡಿಯನ್ನು ರಾಜ್ಯ ಸರಕಾರ ಗ್ರಾ.ಪಂ.ಅಧ್ಯಕ್ಷರ ಅಧಿಕಾರ ಮೊಟಕು ಗೊಳಿಸುವ ವಿರುದ್ದ ಸುಳ್ಯ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುಳ್ಯದ ಪ್ರಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕಾಂಗ್ರೆಸ್

ಬೆಳ್ಳಾರೆ : ತಂಬಿನಮಕ್ಕಿಯಲ್ಲಿ ಬೈಕ್ ಗಳ ಪರಸ್ಪರ ಡಿಕ್ಕಿ

ಬೆಳ್ಳಾರೆ ‌ ಗ್ರಾಮದ ತಂಬಿನಮಕ್ಕಿ ಬಳಿ ನಿನ್ನೆ ರಾತ್ರಿ ಎರಡು ಬೈಕ್ ಗಳ ನಡುವೆ ಪರಸ್ಪರ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲೆ ಮೃತಪಟ್ಟ ಘಟನೆ ವರದಿಯಾಗಿದೆ. ಮೃತಪಟ್ಟ ವ್ಯಕ್ತಿ ಕೊಡಿಯಾಲದ ಗುತ್ತಿನಮನೆ ನಾರಾಯಣ ಎಂಬುದಾಗಿ ತಿಳಿದು ಬಂದಿದೆ.ಘಟನೆಯಿಂದ ಮತ್ತೋರ್ವರಾದ ಸುಜಿತ್ ಗುತ್ತಿನಮನೆ ಎಂಬುವವರು ಗಾಯಾಳಾಗಿ ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.