Home ಕರಾವಳಿ Archive by category ಬೆಳ್ತಂಗಡಿ (Page 17)

ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ಮಚ್ಚಿನ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ

ಬೆಳ್ತಂಗಡಿಯ ಬಿಜೆಪಿ ಪಕ್ಷದಿಂದ ಬೇಸತ್ತು, ಬಹಿರಂಗವಾಗಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಪಕ್ಷಕ್ಕೆ ಮಚ್ಚಿನ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕುಲಾಲ್ ಸಮುದಾಯದ ಮುಖಂಡರಾದ ಚಂದಪ್ಪ ಕುಲಾಲ್ ಅವರು ಮಾಜಿ ಶಾಸಕರಾದ ವಸಂತ ಬಂಗೇರರ ನೇತೃತ್ವದಲ್ಲಿ ಸೇರ್ಪಡೆಗೊಂಡಿದ್ದಾರೆ. ಮಡಂತ್ಯಾರನಲ್ಲಿ ನಡೆದ ಪಕ್ಷ ಸೇರ್ಪಡೆಯಲ್ಲಿ ಕಾಂಗ್ರೆಸ್ ಬೆಳ್ತಂಗಡಿ

ಬೆಳ್ತಂಗಡಿ : ಪಡಂಗಡಿಯಲ್ಲಿ ಬಿಜೆಪಿ ಸಾರ್ವಜನಿಕ ಪ್ರಚಾರ ಸಭೆ

ವಿಧಾನಸಭಾ ಚುನಾವಣೆಯ ಹಿನ್ನೆಲೆ ಪಡಂಗಡಿಯಲ್ಲಿ ನಡೆದ ಮೊದಲ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಹರೀಶ ಪೂಂಜಾ ಅವರು ಭಾಗಿಯಾಗಿ ಚಾಲನೆಯನ್ನು ನೀಡಿದರು. ಸಾರ್ವಜನಿಕ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ ಬೆಳ್ತಂಗಡಿ ಕ್ಷೇತ್ರ ಈಗ ರಾಜ್ಯಕ್ಕೆ ಮಾದರಿಯಾಗಿ ನಿಂತಿದೆ, ಅಭಿವೃದ್ಧಿಯ ಮಹಾಪರ್ವವೇ ನಡೆದಿದೆ. ಬೆಳ್ತಂಗಡಿಯನ್ನು ಮತ್ತಷ್ಟು ಬೆಳಗಲು ಕ್ಷೇತ್ರದ ಜನತೆ ಮತ್ತೊಂದು ಬಾರಿ ಹರೀಶ ಪೂಂಜಾ ಅವರನ್ನು

ಬಿಜೆಪಿ 140 ಸೀಟ್ ಗೆದ್ದು ಅಧಿಕಾರ ಹಿಡಿಯುವುದು ಖಚಿತ : ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್

ಬೆಳ್ತಂಗಡಿಯಲ್ಲಿ ಈ ಬಾರಿ ಸುಮಾರು 50 ಸಾವಿರಕ್ಕೂ ಹೆಚ್ಚಿನ ಅಂತರದಲ್ಲಿ ಹರೀಶ್ ಪೂಂಜ ರವರು ಗೆಲ್ಲಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ರವರು ಹೇಳಿದರು. ಅವರು ಬೆಳ್ತಂಗಡಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಬೂತ್ ಮಟ್ಟದಲ್ಲಿ ಕೂಡ ಜಾತಿ ಧರ್ಮ ಅನ್ನದೆ ಎಲ್ಲಾ ವರ್ಗದವರಿಗೂ ಸರಕಾರದ ಪ್ರತಿಯೊಂದು ಸವಲತ್ತುಗಳನ್ನು ತಲುಪಿಸುವ ಕಾರ್ಯ ಆಗಿದೆ,ಆದ್ದರಿಂದ ಅತ್ಯಂತ ಹೆಚ್ಚಿನ ಅಂತರದಲ್ಲಿ ಹರೀಶ್ ಪೂಂಜ ರವರು ಗೆಲ್ಲಲಿದ್ದಾರೆ.ಈ ಬಾರಿ ಬಿಜೆಪಿ

ಎಸ್.ಡಿ. ಎಮ್. ಕಾಲೇಜಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

ಉಜಿರೆ : ಮತದಾನದ ಅರಿವು ಮೂಡಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದು ಅಗತ್ಯವೆಂದು ಎಸ್.ಡಿ. ಎಮ್. ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ ಬಿ.ಎ ಅಭಿಪ್ರಾಯಪಟ್ಟರು. ಶ್ರೀ. ಧ. ಮಂ. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಆಯೋಜಿಸಿದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸದೃಢ ನಾಯಕನನ್ನು ಆಯ್ಕೆ ಮಾಡುವುದು ಪ್ರಜೆಗಳ ಕರ್ತವ್ಯ ಮತ್ತು ಹಕ್ಕು. ಮತದಾನ ದಿನವನ್ನು ರಜಾ ದಿನವೆಂದು ಭಾವಿಸದೇ ನಮ್ಮ ಹಕ್ಕನ್ನು ನಾವು ಚಲಾಯಿಸಬೇಕು,

ತಾಲೂಕಿನ ಅಭಿವೃದ್ದಿಯಲ್ಲಿ ಭ್ರಷ್ಟಾಚಾರ, ಸ್ಜಜನಪಕ್ಷಪಾತಕ್ಕೆ ಅವಕಾಶವಿಲ್ಲ- ರಕ್ಷಿತ್ ಶಿವರಾಂ ಭರವಸೆ

ಬೆಳ್ತಂಗಡಿ:- ಅಭಿವೃದ್ಧಿ ಹೆಸರಿನಲ್ಲಿ ಪ್ರತಿಯೊಂದು ಕಾಮಗಾರಿಗಳಲ್ಲೂ ಭ್ರಷ್ಟಾಚಾರ ನಡೆದಿದೆ. ತಾಲೂಕಿನಲ್ಲಿ ಮಿತಿ ಮೀರಿ ಟಿಂಬರ್ ಮಾಫಿಯಾ, ಅಕ್ರಮ ಮರಳು ಗಣಿಗಾರಿಕೆಯಿಂದ ರಾಜ್ಯದಲ್ಲೇ ಕೆಟ್ಟ ಹೆಸರು ಪಡೆದಿದೆ. ನೇತ್ರಾವತಿಯ ಒಡಲನ್ನೇ ಬಗೆದು ತಿನ್ನುತ್ತಿದ್ದಾರೆ. ತಾಲೂಕಿನಲ್ಲಿ ಕುಡಿಯುವ ನೀರಿಗೂ ಅಭಾವ ಬಂದಿರುವುದಕ್ಕೆ ಅಕ್ರಮ ಮರಳುಗಣಿಗಾರಿಕಯೇ ಕಾರಣ ಎಂದು ವಾಗ್ದಾಳಿ ನಡೆಸಿದ್ರು. ಈ ಬಾರಿ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕಾದ್ರೆ ಕಾಂಗ್ರೆಸ್ ಪಕ್ಷವನ್ನ

ಬೆಳ್ತಂಗಡಿ : ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಸಂವಾದ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಹಾಶಕ್ತಿಕೇಂದ್ರ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿಗಳಾದನರೇಂದ್ರ ಮೋದಿಯವರ ಕಾರ್ಯಕರ್ತರ ಜೊತೆ ಸಂವಾದ ಕಾರ್ಯಕ್ರಮ ದ ವೀಕ್ಷಣೆ ನಡೆಯಿತು. ನಾರಾವಿ, ಅಳದಂಗಡಿ, ಕುವೆಟ್ಟು, ಕಣಿಯೂರು, ಲಾಯಿಲ, ಉಜಿರೆ, ಧರ್ಮಸ್ಥಳ ಹಾಗೂನಗರ ಪಂಚಾಯತ್ ವ್ಯಾಪ್ತಿಯಲ್ಲಿ ಸಂವಾದದ ವೀಕ್ಷಣೆ ಮಾಡಲಾಯಿತು. ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಂಡಲ ಅಧ್ಯಕ್ಷ ಜಯಂತ

ಬೆಳ್ತಂಗಡಿ ಕ್ಷೇತ್ರದ ಶಾಸಕರು ಪ್ರಚಾರದ ಜೊತೆಗೆ ಹಣ ಹಂಚುತ್ತಿದ್ದಾರೆ : ಮಾಜಿ ಶಾಸಕ ವಸಂತ ಬಂಗೇರ ಅವರಿಂದ ಗಂಭೀರ ಆರೋಪ

ಬೆಳ್ತಂಗಡಿ ಕ್ಷೇತ್ರದ ಶಾಸಕರು ಬಿರುಸಿನ ಪ್ರಚಾರ ಕಾರ್ಯವನ್ನು ಮಾಡುತ್ತಿದ್ದಾರೆ. ಅದರ ಜೊತೆಗೆ ಹಣ ಹಂಚುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ವಸಂತ ಬಂಗೇರ ಅವರು ಆರೋಪಿಸಿದರು. ಅವರು ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಗಂಭೀರ ಆರೋಪ ಮಾಡಿದರು. ಅವರು ಪ್ರಚಾರ ಮಾಡುವ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯ ಕಾರಿನ ಹಿಂದೆ 4 ಕಾರುಗಳು ಬೆಂಗಾವಲಾಗಿ ಹೋಗುತ್ತಿದ್ದು ಅದರಲ್ಲಿ ಒಂದು ಕಾರಿನಲ್ಲಿ ಹಣ ಸಾಗಾಟ ಮಾಡುತ್ತಿದ್ದು ಇದನ್ನು ನಾನು

ಬೆಳ್ತಂಗಡಿ : ಮಾಜಿ ಸಚಿವ ಗಂಗಾಧರ ಗೌಡರಿಗೆ ಸಂಬಂಧಿಸಿದ ಮೂರು ಸ್ಥಳಗಳಿಗೆ ಐಟಿ ದಾಳಿ

ಮಾಜಿ ಸಚಿವ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಉಪಾಧ್ಯಕ್ಷರಾಗಿರುವ ಗಂಗಾಧರ ಗೌಡವರವರ ಮೂರು ಸ್ಥಳಗಳಿಗೆ ಏ.24 ರಂದು ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಪಕ್ಕದಲ್ಲಿರುವ ಮನೆ, ಲಾಯಿದಲ್ಲಿರುವ ಪ್ರಸನ್ನ ಇನ್ಸ್ಟಿಟ್ಯೂಷನ್ , ಇಂದಬೆಟ್ಟು ನಲ್ಲಿರುವ ಮನೆ ಮೇಲೆ ಇಂದು ಬೆಳಗ್ಗೆ ಇನೋವಾ ಕಾರಿನಲ್ಲಿ ಪೊಲೀಸರ ಜೊತೆ ಬಂದ ಐಟಿ ಅಧಿಕಾರಿಗಳು ಬಂದು ದಾಳಿ ಮಾಡಿದ್ದು. ಪರಿಶೀಲನೆ ಮುಂದುವರಿದಿದೆ.

ಕಲ್ಕುಡ ಮಹಿಮೆ’ ತುಳು ಭಕ್ತಿಗೀತೆ ವಿಡಿಯೋ ಆಲ್ಬಂ ಬಿಡುಗಡೆ

 ಕುತ್ಲೂರು ಗ್ರಾಮದ ಅರಸಕಟ್ಟೆ ಕೊಲಾನಿ ಎಂಬಲ್ಲಿನ ‘ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ ದೈವಸ್ಥಾನ’ದ ಕುರಿತಾಗಿ ಉಜಿರೆ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಟಿ.ಎನ್. ಕ್ರಿಯೇಷನ್ ಪ್ರಸ್ತುತಪಡಿಸಿರುವ, ವಜ್ರನಾಭ ಜೈನ್ ನಾರಾವಿ ನಿರ್ಮಾಣದ ‘ಕಲ್ಕುಡ ಮಹಿಮೆ’ ಕೊಲಾನಿದ ಸತ್ಯೊಲೆ ಸುಗಿಪು ತುಳು ಭಕ್ತಿಗೀತೆ ವಿಡಿಯೋ ಆಲ್ಬಂ ಎ.14ರಂದು ದೈವಸ್ಥಾನದಲ್ಲಿ ಬಿಡುಗಡೆಗೊಂಡಿತು. ಕ್ಷೇತ್ರದ ಕಲ್ಕುಡ, ಕಲ್ಲುರ್ಟಿ ಹಾಗೂ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಿಖಿಲ್ ಕುಮಾರಸ್ವಾಮಿ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.ನಂತರ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರನ್ನು ಮತ್ತು ಹರ್ಷೇಂದ್ರ ಕುಮಾರ್ ಅವರನ್ನು ಭೇಟಿ ಮಾಡಿ ಮಾಡಿದರು. ಇದೇ ವೇಳೆ ಮಾದ್ಯಮದೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬ ಶ್ರೀ ಮಂಜುನಾಥ ದೇವರ ಆರಾಧಕರು ಎಂದ ಅವರು, ಪಂಚರತ್ನ ಯೋಜನೆ ಬಗ್ಗೆ ರಾಜ್ಯದ ಜನತೆಯಲ್ಲಿ ಅರಿವು ಮೂಡಿದೆ.