Home ಕರಾವಳಿ Archive by category ಸುಳ್ಯ (Page 12)

ಸುಳ್ಯ ಪದವು:ಮರದ ದಿಮ್ಮಿ ಮೈಮೇಲೆ ಬಿದ್ದು ವ್ಯಕ್ತಿ ಮೃತ್ಯು

ಸುಳ್ಯಪದವು: ಮನೆಯ ಸಮೀಪ ಮರದದಿಮ್ಮಿಯನ್ನು ವಾಹನಕ್ಕೆ ಲೋಡ್ ಮಾಡುತ್ತಿರುವಾಗ ಮರದ ದಿಮ್ಮಿ ಮೈ ಮೇಲೆ ಬಿದ್ದು ಪಡುವನ್ನೂರು ಗ್ರಾಮದ ಸುಳ್ಯ ಪದವು ಬಟ್ಟ್ಯಂಗಳ ನಿವಾಸಿ ಗೋಪಾಲಕೃಷ್ಣ ಎಂಬವರು ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ. ತನ್ನ ಮನೆಯ ಸಮೀಪ ಇರುವ ಮಾವಿನ ಮರದ ದಿಮ್ಮಿಗಳನ್ನು ಜೆಸಿಬಿ ಮೂಲಕ ಟಿಪ್ಪರ್ ವಾಹನಕ್ಕೆ ಲೋಡ್ ಮಾಡಲಾಗಿತ್ತು. ಟಿಪ್ಪರ್ ವಾಹನದ

ಕಡಬ : ವಿದ್ಯುತ್ ಲೈನ್‍ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಲೈನ್‍ಮ್ಯಾನ್ ಸಾವು

ವಿದ್ಯುತ್ ಕಂಬವೇರಿದ್ದ ಲೈನ್ ಮ್ಯಾನ್ ಓರ್ವರು ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಕಡಬದಲ್ಲಿ ನಡೆದಿದೆ. ಕಡಬ ಮೆಸ್ಕಾಂ ಲೈನ್‍ಮ್ಯಾನ್ ಬಾಗಲಕೋಟೆ ಮೂಲದ ದ್ಯಾಮಣ್ಣ ದೊಡ್ಮನಿ ಮೃತಪಟ್ಟವರು. ಕಡಬದ ಮುಳಿಮಜಲು ಸಮೀಪದ ಕಾಯರಡ್ಕ ಎಂಬಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯನ್ನು ಕಂಡು ಕಂಬವೇರಿದ್ದ ಲೈನ್ ಮ್ಯಾನ್ ಗೆ ವಿದ್ಯುತ್ ಶಾಕ್ ಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ

ಕಾಲು ಸೇತುವೆ ನಿರ್ಮಿಸಿ ಹಳ್ಳಿ ಮನಸ್ಸುಗಳನ್ನು ಬೆಸೆದ ಯುವ ತೇಜಸ್ಸು ತಂಡ

     ಸುಳ್ಯ ತಾಲೂಕಿನ ನಾರ್ಣಕಜೆಯ “ಯುವ ತೇಜಸ್ಸು” ಯುವಕರ ತಂಡವೊಂದು ಸುಮಾರು 20ಕ್ಕೂ ಹೆಚ್ಚು ಮನೆಗಳ ಸಂಪರ್ಕಿಸಬೇಕಾದ ರಸ್ತೆಯಲ್ಲಿ ಕಬ್ಬಿಣದ ಶಾಶ್ವತ ಕಾಲುಸಂಕ ನಿರ್ಮಿಸಿಕೊಡುವುದರ ಮೂಲಕ ಆ ಹಳ್ಳಿ ಜನರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ನಾರ್ಣಕಜೆಯಿಂದ ಪೈಲಾರು ಕಡೆ ಸಂಪರ್ಕಿಸಬಹುದಾದ ರಸ್ತೆಯಲ್ಲಿ ಅಡ್ಡಲಾಗಿ ಹೊಳೆ ಹರಿದು ಹೋಗುವ ಕಾರಣ ಈ ಭಾಗದ ಜನ ಮಳೆಗಾಲದಲ್ಲಿ ಮರದ ಕಾಲುಸಂಕ ಅಥವಾ ಸುತ್ತು ಬಳಸಿ ಕಿಲೋಮೀಟರ್ ಗಟ್ಟಲೆ ನಡೆದು ಹೋಗಬೇಕಾದ

ಸುಳ್ಯ. ಬೆಳ್ಳಾರೆ ಕಾಂಗ್ರೆಸ್ ವತಿಯಿಂದ ಬೆಳ್ಳಾರೆ ಯಲ್ಲಿ ವಿಜಯೋತ್ಸವ

ರಾಜ್ಯದಲ್ಲಿ ಇಂದು ಕಾಂಗ್ರೆಸ್ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಮತ್ತು ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹಾಗೂ ಎಂಟು ಜನ ಸಚಿವರಿಗೆ ಪ್ರಮಾಣವಚನ ವಿಜಯೋತ್ಸವ ಈ ಸಂದರ್ಭದಲ್ಲಿ ಸುನಿಲ್ ರೈ ಪುಡ್ಕಜೆ, ಹಮೀದ್ ಬೆಳ್ಳಾರೆ ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಹಾಗೂ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಭಾಗಿಯಾಗಿದ್ದರು

ಸುಳ್ಯ: ಜಿ.ಪಂ. ಮಾಜಿ ಸದಸ್ಯ ನವೀನ್ ಕುಮಾರ್ ರೈ ಹೊಳೆ ನೀರಿಗೆ ಬಿದ್ದು ಮೃತ್ಯು

ಬಿಜೆಪಿ ಮುಖಂಡ ಜಿ.ಪಂ. ಮಾಜಿ ಸದಸ್ಯ ನವೀನ್ ಕುಮಾರ್ ರೈ ಮೇನಾಲ ಅವರು ಹೊಳೆ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ತುದಿಯಡ್ಕ ಬಳಿ ಪಯಸ್ವಿನಿ ನದಿಗೆ ತನ್ನ ತೋಟಕ್ಕೆ ನೀರು ಸರಬರಾಜು ಮಾಡುವ ಪಂಪ್‌ನ ಪುಟ್ ವಾಲ್ ರಿಪೇರಿಗೆಂದು ಇಳಿದಿದ್ದ ಸಂದರ್ಭ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಮೃತದೇಹವನ್ನು ಮೇಲೆತ್ತಲಾಗಿದೆ ಎಂದು ಹೇಳಲಾಗಿದೆ. ಪಯಸ್ವಿನಿ ನದಿಗೆ ಅಳವಡಿಸಲಾದ ತನ್ನ ತೋಟಕ್ಕೆ ನೀರು ಸರಬರಾಜುಮಾಡುವ ಪಂಪ್‌ನ ಪುಟ್ ವಾಲ್

ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ, ಗುತ್ತಿಗಾರು ಪೇಟೆಯಲ್ಲಿ ಚುನಾವಣಾ ಪ್ರಚಾರ

ಭಾರತೀಯ ಜನತಾ ಪಾರ್ಟಿಯ ಚುನಾವಣಾ ಪ್ರಚಾರ ಪ್ರವಾಸದ ಸಲುವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ತಾಲೂಕಿನ ಗುತ್ತಿಗಾರು ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಗುತ್ತಿಗಾರು ಪೇಟೆಯಲ್ಲಿ ಪಕ್ಷದ ಪ್ರಮುಖರು, ಕಾರ್ಯಕರ್ತರು, ಸ್ಥಳೀಯರೊಂದಿಗೆ ತೆರಳಿ ಬಹಿರಂಗ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಹಿರಿಯರು, ಪ್ರಮುಖರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

ಕಡಬ: ಸುಳ್ಯ ಕ್ಷೇತ್ರದಲ್ಲಿ  ಕಾಂಗ್ರೆಸ್‌ಗೆ ಗೆಲುವು ನಿಶ್ಚಿತ: ಎಐಸಿಸಿ ಸದಸ್ಯ ಸುನಿಲ್ ಕೇದಾರ್

ಸುಳ್ಯ ವಿಧಾನಸಭಾ ಕ್ಷೇತ್ರ ದಲ್ಲಿನ ಅಭ್ಯರ್ಥಿ ಆಯ್ಕೆಯಲ್ಲಿನ ಗೊಂದಲಗಳು ಶಮನಗೊಂಡಿದ್ದು, ಪಕ್ಷದ ಎಲ್ಲಾ  ನಾಯಕರು ಹಾಗೂ ಕಾರ್ಯಕರ್ತರು ಜೊತೆಯಾಗಿದ್ದು, ಈ ಬಾರಿ ಸುಳ್ಯ ಕ್ಷೇತ್ರದಲ್ಲಿ  ಕಾಂಗ್ರೆಸ್ ಪಕ್ಷವು ಅತ್ಯದಿಕ ಮತಗಳಿಂದ ಗೆಲವು ಸಾದಿಸುವುದು ನಿಶ್ಚಿತ ಎಂದು ಸುಳ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ವೀಕ್ಷಕರಾಗಿ ಆಗಮಿಸಿರುವ ಮಹಾರಾಷ್ಟದ ಮಾಜಿ ಸಚಿವ, ಎಐಸಿಸಿ ಸದಸ್ಯ ಸುನಿಲ್ ಕೇದಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು. ಅವರು ಬುಧವಾರ  ಕಡಬ

ಕೆರೆಯ ಪಾಚಿ ತೆಗೆಯಲು ಹೋದ ಯುವಕ ಮೃತ್ಯು

ತೋಟದ ಕೆರೆಯಲ್ಲಿದ್ದ ಪಾಚಿ ತೆಗೆಯಲು ಹೋದ ಯುವಕ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ತಾಡಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಪಾಲ್ತಾಡಿ ಗ್ರಾಮದ ಕಾಪುತಮೂಲೆ ನಿವಾಸಿ ಮೋನಪ್ಪ ನಾಯ್ಕ ಎಂಬವರ ಪುತ್ರ ಗೋಪಾಲಕೃಷ್ಣ ಕೆ.(34) ಎಂದು ಗುರುತಿಸಲಾಗಿದೆ. ತೋಟದ ಕೆರೆಯಲ್ಲಿರುವ ಪಾಚಿಯನ್ನು ತೆಗೆಯಲು ಹೋದ ಪಿರ್ಯಾದಿದಾರರ ಗೋಪಾಲಕೃಷ್ಣ ಅವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಈಜು ಬಾರದೇ

ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಸಚಿವ ಎಸ್. ಅಂಗಾರ

ಅನಾರೋಗ್ಯದಿಂದ ಬಳಲುತ್ತಿದ್ದ ಸಚಿವ ಅಂಗಾರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಠರದ ಅಲ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬುಧವಾರ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರು ಆರೋಗ್ಯದಿಂದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಬೆಳ್ಳಾರೆಯಲ್ಲಿ ಬಿಜೆಪಿ ವತಿಯಿಂದ ರೋಡ್ ಶೋ

ಸುಳ್ಯ ಬಿಜೆಪಿ ಮಂಡಲ ಸಮಿತಿಯ ವತಿಯಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಪರವಾಗಿ ಬೆಳ್ಳಾರೆಯಲ್ಲಿ ರೋಡ್ ಶೋ ಹಾಗೂ ಸಾರ್ವಜನಿಕ ಸಭೆ ನಡೆಯಿತು. ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿಯಿಂದ ಆರಂಭಗೊಂಡು ಬೆಳ್ಳಾರೆಯ ಮುಖ್ಯ ಪೇಟೆಯಲ್ಲಿ ರೋಡ್ ಶೋ ನಢಯುತು. ಬಳಿಕ ಬಸ್ ನಿಲ್ದಾಣದ ಬಳಿಯಲ್ಲಿ ಸಾರ್ವಜನಿಕ ಚುನಾವಣಾ ಪ್ರಚಾರ ಸಭೆ ನಡೆಯಿತು. ಸಭೆಯಲ್ಲಿ ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ್ ಶೇಣವ, ಬಿಜೆಪಿ ದ.ಕ. ಜಿಲ್ಲಾ