Home Archive by category ರಾಜಕೀಯ (Page 17)

ಬಿಜೆಪಿ ಟಿಕೆಟ್ ಸಿಕ್ಕಿದೆ ಆದರೆ ಸ್ಪರ್ಧಿಸುವುದಿಲ್ಲ : ಭೋಜಪುರಿ ನಟ, ಗಾಯಕ ಪವನ್ ಸಿಂಗ್

ಬಿಜೆಪಿಯವರ ನಂಬಿಕೆಗೆ ಅಭಾರಿ. ಆದರೆ ಅವರು ಟಿಕೆಟ್ ನೀಡಿದ್ದರೂ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಖ್ಯಾತ ಭೋಜಪುರಿ ನಟ, ಗಾಯಕ ಪವನ್ ಸಿಂಗ್ ಹೇಳಿದ್ದಾರೆ. ಬಿಜೆಪಿಯ ಲೋಕಸಭಾ ಸ್ಪರ್ಧಿಗಳ ಮೊದಲ ಪಟ್ಟಿಯಲ್ಲಿ ಪವನ್ ಸಿಂಗ್‌ರಿಗೆ ಅಸನ್ಸೋಲ್ ಟಿಕೆಟ್ ನೀಡಲಾಗಿದೆ. ಆದರೆ ಅವರು ನೇರ ರಾಜಕೀಯ ಪ್ರವೇಶ ಇಲ್ಲ ಎಂದಿದ್ದಾರೆ. ಬಿಜೆಪಿಯ ಮೊದಲ ಪಟ್ಟಿಯಲ್ಲಿ

ಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿನೋದ್ ತಾವ್ಡೆ ಸುದ್ದಿಗೋಷ್ಠಿ ನಡೆಸಿದ್ದು, ಈ ಬಾರಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಮೊದಲ ಪಟ್ಟಿಯಲ್ಲಿ  ಹಲವು ಪ್ರಮುಖರಿಗೆ ಟಿಕೆಟ್ ನೀಡಲಾಗಿದೆ. ಕಳೆದ 1 ದಶಕದಿಂದ ಪ್ರಧಾನಿ ಮೋದಿ ನೇತೃತ್ವದಲ್ಲಿ ಯಶಸ್ವಿ ಆಡಳಿತ ನಡೆಸಿದ್ದೇವೆ. ಈ ಬಾರಿ 400 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ

ಹಣವಂತರ ನಡುವಣ ಹೆಣವಂತ ಸಮುದಾಯ

ಭಾರತದಲ್ಲಿ ಅತೀ ಸಿರಿವಂತರ ಸಂಖ್ಯೆಯು 13,230ಕ್ಕೆ ಏರಿಕೆಯಾಗಿದೆ. 141 ಕೋಟಿ ಜನಸಂಖ್ಯೆಯ ದೇಶದಲ್ಲಿ ಇದು ದೊಡ್ಡ ಸಂಖ್ಯೆಯೇನೂ ಅಲ್ಲ. ಆದರೆ ಅಭಿವೃದ್ಧಿಶೀಲ ಹೆಸರು ಹಲಗೆ ಕಳಚಿಕೊಳ್ಳಲಾಗದ, 40 ಕೋಟಿಯಷ್ಟು ಬಡವರನ್ನು ಹೊಂದಿರುವ ಭಾರತದಲ್ಲಿ ಬಡವರ ಸಂಖ್ಯೆ ಇಳಿಸಲು ಸಾಧ್ಯವಾಗಿಲ್ಲ. ಬದಲಿಗೆ ಜನಸಂಖ್ಯೆ ಏರಿದಂತೆಯೇ ಬಡವರ ಸಂಖ್ಯೆಯೂ ಏರುತ್ತ ನಡೆದಿದೆ. 1970ನೇ ಇಸವಿಯಲ್ಲಿ ತಿಂಗಳಿಗೆ 300 ರೂಪಾಯಿ ಗಳಿಸುತ್ತಿದ್ದ ವ್ಯಕ್ತಿಯು ಈಗ ತಿಂಗಳಿಗೆ 13,000

ಅಡ್ಡ ಮತದಾನ ಬಿಜೆಪಿಗೆ ಭರ್ಜರಿ ಲಾಭ

ಹದಿನೈದು ರಾಜ್ಯಗಳ 66 ರಾಜ್ಯ ಸಭಾ ಸ್ಥಾನಗಳಿಗೆ ವಿಧಾನ ಸಭೆಯಿಂದ ನಡೆದ ಚುನಾವಣೆಯಲ್ಲಿ ಬಿಜೆಪಿಯು ಒಟ್ಟು 30 ಸ್ಥಾನ ಗೆದ್ದು 45 ಶೇಕಡಾಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡಿದೆ. ಆದರೆ ಇದರಲ್ಲಿ 6 ಸ್ಥಾನಗಳನ್ನು ಅದು ವಶೀಲಿಬಾಜಿಯಿಂದ, ಖರೀದಿಯಿಂದ, ಹಿಂದಿನ ಬಾಗಿಲಿನಿಂದ ತನ್ನದಾಗಿಸಿಕೊಂಡಿದೆ ಎನ್ನುವುದು ಹಲವರ ಆರೋಪವಾಗಿದೆ. ಆರು ವರುಷ ಸದಸ್ಯಾವಧಿಯ ರಾಜ್ಯ ಸಭೆಯ ಮೂರನೇ ಒಂದು ಭಾಗದ ಸದಸ್ಯರು ಪ್ರತಿ ಎರಡು ವರುಷಕ್ಕೊಮ್ಮೆ

ದಿಲ್ಲಿ: ಮೈತ್ರಿ, ಸೀಟು ಹಂಚಿಕೆ ಬಗೆಗೆ ಸ್ಪಷ್ಟನೆ

ದಿಲ್ಲಿಯ ದಿಲ್ಲಿ ಪಶ್ಚಿಮ, ದಿಲ್ಲಿ ದಕ್ಷಿಣ, ದಿಲ್ಲಿ ಪೂರ್ವ ಮತ್ತು ನವದೆಹಲಿ ಈ ನಾಲ್ಕು ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ. ಈಶಾನ್ಯ ದಿಲ್ಲಿ, ವಾಯುವ್ಯ ದಿಲ್ಲಿ ಮತ್ತು ಚಾಂದಿನಿ ಚೌಕ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಯಿತು.ಎಎಪಿಯವರೂ ಇದ್ದ ಮಾಧ್ಯಮ ಮಾತುಕತೆಯಲ್ಲಿ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಮಾಹಿತಿ ನೀಡಿದರು.ಗುಜರಾತಿನ 26ರಲ್ಲಿ 24ಕಡೆ ಕಾಂಗ್ರೆಸ್

ವಿಜಯವಾಡಾದಲ್ಲಿ ಕಾಂಗ್ರೆಸ್ ಪ್ರತಿಭಟನೆ : ವೈ. ಎಸ್. ಶರ್ಮಿಳಾ ಬಂಧನ

ಜಿಲ್ಲಾ ಆಯ್ಕೆ ಸಮಿತಿಯಿಂದ ಶಿಕ್ಷಕರ ನೇಮಕಾತಿ ಪಟ್ಟಿ ಆಗಿದ್ದರೂ ಸಚಿವಾಲಯವು ಆ ಪಟ್ಟಿ ತಡೆ ಹಿಡಿದಿರುವುದರ ವಿರುದ್ಧ ವಿಜಯವಾಡಾದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಈ ವೇಳೆ ಎಪಿಸಿಸಿ ಅಧ್ಯಕ್ಷೆ ವೈ. ಎಸ್. ಶರ್ಮಿಳಾ ಮತ್ತಿತರರನ್ನು ಪೋಲೀಸರು ವಶಕ್ಕೆ ಪಡೆದರು.ಮನೆಗೆ ಹೋದರೆ ಗೃಹ ಬಂಧನಕ್ಕೆ ಒಳಪಡಿಸಬಹುದು ಎಂದು ರಾತ್ರಿ ಕಾಂಗ್ರೆಸ್ ಕಚೇರಿಯಲ್ಲೇ ಮಲಗಿದ್ದ ಶರ್ಮಿಳಾ ಅವರು ಬೆಳಿಗ್ಗೆ ನೇರ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದರು. ಶರ್ಮಿಳಾ ಅವರು ಆಂಧ್ರದ

ರೈತ ಶುಭಕರಣ್ ಸಿಂಗ್ ಸಾವು : ದಿಲ್ಲಿ ಹರಿಯಾಣ ಗಡಿಯಲ್ಲಿ ಕೊಲೆ : ಸೂಕ್ತ ಪರಿಹಾರಕ್ಕೆ ರೈತರ ಆಗ್ರಹ

21ರ ಪ್ರಾಯದ ಶುಭಕರಣ್ ಸಿಂಗ್ ಎರಡು ಎಕರೆ ಹೊಲ ಹೊಂದಿದ್ದಾನೆ. ತಂಗಿಯ ಮದುವೆಗಾಗಿ ಸಾಲ ಮಾಡಿದ್ದ. ಈಗ ರೈತರ ಚಳವಳಿಯಲ್ಲಿ ದಿಲ್ಲಿ ಹರಿಯಾಣ ಗಡಿಯಲ್ಲಿ ಸರಕಾರದ ರೈತ ಚಳವಳಿ ಹತ್ತಿಕ್ಕುವ ಹೋರಾಟದಲ್ಲಿ ಬಲಿಯಾಗಿದ್ದಾನೆ.ಪಂಜಾಬದ ಭಟಿಂಡಾ ಜಿಲ್ಲೆಯ ಬಾಲೋಕ್ ಗ್ರಾಮದ ಯುವಕ ರೈತನಿವನು. ಈಗ ಪೋಲೀಸರ ದಾಳಿಯಲ್ಲಿ ರೈತರ ಪ್ರಕಾರ ಕೊಲೆಯಾಗಿದ್ದಾನೆ. ಸರಕಾರ ಸರಿಯಾದ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿರುವ ರೈತ ನಾಯಕರು ತಾವೇ ಒಂದಷ್ಟು ಸಣ್ಣ ಪ್ರಮಾಣದಲ್ಲಿ ಪರಿಹಾರ ಒಟ್ಟು

ದಿಲ್ಲಿ ಲೋಕ ಸಭಾ ಕ್ಷೇತ್ರ : ಕಾಂಗ್ರೆಸ್ ಎಎಪಿ ಮೈತ್ರಿ ಹಂಚಿಕೆ : ಎಎಪಿ 4, ಕಾಂಗ್ರೆಸ್ 3 ಕಡೆ ಸ್ಪರ್ಧೆ

ದಿಲ್ಲಿ ಲೋಕಸಭಾ ಕ್ಷೇತ್ರಗಳ ಬಗೆಗೆ ಇಂಡಿಯಾ ಮೈತ್ರಿಕೂಟದ ಅಂಗ ಪಕ್ಷಗಳಾದ ಎಎಪಿ ಮತ್ತು ಕಾಂಗ್ರೆಸ್ ಪಕ್ಷಗಳು ಇಂದು ಒಡಂಬಡಿಕೆಗೆ ಬಂದವು. ಅದರಂತೆ ದಿಲ್ಲಿಯ 7 ರಲ್ಲಿ 4 ಕಡೆ ಎಎಪಿ ಮತ್ತು 3 ಕಡೆ ಕಾಂಗ್ರೆಸ್ ಪಕ್ಷಗಳು ಸ್ಪರ್ಧಿಸಲಿವೆ.ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರೀವಾಲ್ ಅವರು ಈ ಬಗೆಗೆ ಒಡಂಬಡಿಕೆ ಮಾಡಿಕೊಂಡು ದಿಲ್ಲಿಯಲ್ಲಿ ಮಾಹಿತಿ ನೀಡಿದ್ದಾರೆ. ಅವರ ಮಾತಿನಂತೆ ದಿಲ್ಲಿ ಪೂರ್ವ ಮತ್ತು

ಬಿಜೆಪಿಯು ನಮ್ಮ ಹಣ ಕದಿಯುತ್ತಿದೆ : ಕೆ. ಸಿ. ವೇಣುಗೋಪಾಲ್

ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ಹಾಗೂ ಕಾಂಗ್ರೆಸ್ಸಿನ ಬ್ಯಾಂಕ್ ಖಾತೆಗಳಿಂದ ಆದಾಯ ತೆರಿಗೆ ಇಲಾಖೆಯು 65.89 ಕೋಟಿ ರೂಪಾಯಿ ಕತ್ತರಿಸಿಕೊಳ್ಳುತ್ತಿದೆ ಇದು ಬಿಜೆಪಿ ಕದಿಯುತ್ತಿರುವ ಹಣ ಎಂದು ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್ ಆಪಾದಿಸಿದರು.ನಾವು ಕೇಂದ್ರದಲ್ಲಿ ಆಳುತ್ತಿದ್ದಾಗ ಬಿಜೆಪಿ ವಿಷಯದಲ್ಲಿ ನಾವು ಹೀಗೆ ಎಂದೂ ಹೀಗೆ ನಡೆದುಕೊಂಡಿಲ್ಲ. ಬಿಜೆಪಿಯು ರಾಜಕೀಯ ಪಕ್ಷವಾಗಿ ಎಂದೂ ತೆರಿಗೆ ಕಟ್ಟಿಲ್ಲ. ಆದರೆ ನಮ್ಮ ಖಾತೆಗೆ ತೆರಿಗೆ ಎನ್ನುತ್ತಿದೆ. ಯಾರು

ರೈತರ ಖಾತೆ ನಿರ್ಬಂಧಿಸಲು ಆದೇಶ :ಒಲ್ಲೆ ಎಂದ ಎಕ್ಸ್ ಪೋಸ್ಟ್ ಸಂಸ್ಥೆ

ದಿಲ್ಲಿ : ರೈತರ ದಿಲ್ಲಿ ಚಲೋ ಚಳವಳಿಗೆ ಸಂಬಂಧಿಸಿದಂತೆ ಪೋಸ್ಟ್ ಮಾಡುತ್ತಿರುವ 177 ರೈತರ ಎಕ್ಸ್ ಪೋಸ್ಟ್ ಖಾತೆಗಳನ್ನು ನಿರ್ಬಂಧಿಸುವಂತೆ ಒಕ್ಕೂಟ ಬಿಜೆಪಿ ಸರಕಾರದ ಐಟಿ ಸಚಿವಾಲಯ ಹೇಳಿದ್ದು ಆ ಕೋರಿಕೆಯನ್ನು ಸೋಶಿಯಲ್ ಮೀಡಿಯಾ ನೆಟ್‌ವರ್ಕ್ ಎಕ್ಸ್ ಪೋಸ್ಟ್ ಸಂಸ್ಥೆ ಮಾನ್ಯ ಮಾಡಿಲ್ಲ.ಹಿಂದಿನ ಟ್ವಿಟರ್ ಎಕ್ಸ್ ಪೋಸ್ಟ್ ರೂಪ ತಾಳಿದ ಮೇಲೆ ಅದರ ಪೋಸ್ಟ್‌ಗಳು ಹೆಚ್ಚೆಚ್ಚು ಜನಪರ ಹೋರಾಟಗಳ ಪರ ಆಗತೊಡಗಿದೆ ಎನ್ನುವುದು ಕೆಲವರ ಅಂಬೋಣ. ಎಲೆಕ್ಟ್ರಾನಿಕ್ ಮತ್ತು ಮಾಹಿತಿ