ರೈತ ಶುಭಕರಣ್ ಸಿಂಗ್ ಸಾವು : ದಿಲ್ಲಿ ಹರಿಯಾಣ ಗಡಿಯಲ್ಲಿ ಕೊಲೆ : ಸೂಕ್ತ ಪರಿಹಾರಕ್ಕೆ ರೈತರ ಆಗ್ರಹ
21ರ ಪ್ರಾಯದ ಶುಭಕರಣ್ ಸಿಂಗ್ ಎರಡು ಎಕರೆ ಹೊಲ ಹೊಂದಿದ್ದಾನೆ. ತಂಗಿಯ ಮದುವೆಗಾಗಿ ಸಾಲ ಮಾಡಿದ್ದ. ಈಗ ರೈತರ ಚಳವಳಿಯಲ್ಲಿ ದಿಲ್ಲಿ ಹರಿಯಾಣ ಗಡಿಯಲ್ಲಿ ಸರಕಾರದ ರೈತ ಚಳವಳಿ ಹತ್ತಿಕ್ಕುವ ಹೋರಾಟದಲ್ಲಿ ಬಲಿಯಾಗಿದ್ದಾನೆ.
ಪಂಜಾಬದ ಭಟಿಂಡಾ ಜಿಲ್ಲೆಯ ಬಾಲೋಕ್ ಗ್ರಾಮದ ಯುವಕ ರೈತನಿವನು. ಈಗ ಪೋಲೀಸರ ದಾಳಿಯಲ್ಲಿ ರೈತರ ಪ್ರಕಾರ ಕೊಲೆಯಾಗಿದ್ದಾನೆ. ಸರಕಾರ ಸರಿಯಾದ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿರುವ ರೈತ ನಾಯಕರು ತಾವೇ ಒಂದಷ್ಟು ಸಣ್ಣ ಪ್ರಮಾಣದಲ್ಲಿ ಪರಿಹಾರ ಒಟ್ಟು ಮಾಡಿದ್ದಾರೆ.
ಶುಭಕರಣ್ ಕುಟುಂಬದ್ದು ದುರಂತ ಕತೆ. ಗದ್ದೆ ಕೆಲಸದ ತಾಯಿ ರೋಗದಿಂದ ಸತ್ತಿದ್ದಾರೆ. ದುಡಿಯುತ್ತಿದ್ದ ತಂದೆ ಮಾನಸಿಕ ಅಸ್ವಸ್ಥತೆಗೆ ಜಾರಿದ್ದಾರೆ. ಇತ್ತೀಚೆಗೆ ಸಾಲ ಮಾಡಿ ಒಬ್ಬ ತಂಗಿಯ ಮದುವೆ ಮಾಡಿದ್ದಾನೆ ಗುರುಕರಣ್; ಇನ್ನೊಬ್ಬ ತಂಗಿ ಈಗಿನ್ನೂ ಕಲಿಯುತ್ತಿರುವ ವಿದ್ಯಾರ್ಥಿ. ಈಗ ಕುಟುಂಬದ ಆಧಾರ ಕಂಬವೇ ಉರುಳಿದೆ.