ದಿಲ್ಲಿ ಲೋಕ ಸಭಾ ಕ್ಷೇತ್ರ : ಕಾಂಗ್ರೆಸ್ ಎಎಪಿ ಮೈತ್ರಿ ಹಂಚಿಕೆ : ಎಎಪಿ 4, ಕಾಂಗ್ರೆಸ್ 3 ಕಡೆ ಸ್ಪರ್ಧೆ

ದಿಲ್ಲಿ ಲೋಕಸಭಾ ಕ್ಷೇತ್ರಗಳ ಬಗೆಗೆ ಇಂಡಿಯಾ ಮೈತ್ರಿಕೂಟದ ಅಂಗ ಪಕ್ಷಗಳಾದ ಎಎಪಿ ಮತ್ತು ಕಾಂಗ್ರೆಸ್ ಪಕ್ಷಗಳು ಇಂದು ಒಡಂಬಡಿಕೆಗೆ ಬಂದವು. ಅದರಂತೆ ದಿಲ್ಲಿಯ 7 ರಲ್ಲಿ 4 ಕಡೆ ಎಎಪಿ ಮತ್ತು 3 ಕಡೆ ಕಾಂಗ್ರೆಸ್ ಪಕ್ಷಗಳು ಸ್ಪರ್ಧಿಸಲಿವೆ.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರೀವಾಲ್ ಅವರು ಈ ಬಗೆಗೆ ಒಡಂಬಡಿಕೆ ಮಾಡಿಕೊಂಡು ದಿಲ್ಲಿಯಲ್ಲಿ ಮಾಹಿತಿ ನೀಡಿದ್ದಾರೆ. ಅವರ ಮಾತಿನಂತೆ ದಿಲ್ಲಿ ಪೂರ್ವ ಮತ್ತು ದಿಲ್ಲಿ ವಾಯುವ್ಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತದೆ. ಇನ್ನೊಂದು ಎಎಪಿ ಬಿಟ್ಟುಕೊಟ್ಟ ಕ್ಷೇತ್ರದಲ್ಲೂ ಕಾಂಗ್ರೆಸ್ ಸ್ಪರ್ಧಿ ಇರುತ್ತಾರೆ. ಇನ್ನೊಂದು ಕ್ಷೇತ್ರ ಚಾಂದ್ನಿ ಚೌಕ್ ಇಲ್ಲವೇ ನವದೆಹಲಿ ಅಲ್ಲವೇ ಪಶ್ಚಿಮ ದಿಲ್ಲಿ ಮೂರರಲ್ಲಿ ಒಂದು ಆಗಿರುತ್ತದೆ.
