ಮಾರ್ಚ್ 10ರಂದು ದೇಶದೆಲ್ಲೆಡೆ ರೈಲು ತಡೆ
ದಿಲ್ಲಿ : ಮಾರ್ಚ್ 10ರಂದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ದೇಶದ ಎಲ್ಲೆಡೆ ರೈಲು ತಡೆ ನಡೆಸಲಾಗುತ್ತದೆ ಎಂದು ದಿಲ್ಲಿ ಚಲೋ ಪ್ರತಿಭಟನೆಯ ರೈತರು ತಿಳಿಸಿದ್ದಾರೆ.
ಸಂಯುಕ್ತ ಕಿಸಾನ್ ಸಂಘಟನೆ ಕೂಟವು ಈ ಬಗೆಗೆ ಹೇಳಿಕೆ ನೀಡಿದ್ದು, ಎಲ್ಲರೂ ಸಹಕರಿಸಬೇಕು ಎಂದು ಕೇಳಿಕೊಂಡಿದ್ದಾರೆ.
ರೈತ ಸಂಘಟನೆಯವರು ಮಾರ್ಚ್ 6ರಂದು ದಿಲ್ಲಿ ಮುತ್ತಿಗೆ ಹಾಕುವುದಾಗಿಯೂ ಹೇಳಿದೆ. ಮೋದಿಯವರ ಸರಕಾರವು ರೈತರ ಚಳವಳಿ ಹೊಸಕುವುದು ಸಾಧ್ಯವಿಲ್ಲ ಎಂದು ಟಿಕಾಯತ್ ತಿಳಿಸಿದ್ದಾರೆ.