Home ಕರಾವಳಿ Archive by category ಕಾಸರಗೋಡು (Page 15)

ಬಿರುವೆರ್ ಕುಡ್ಲ ಪೈವಳಿಕೆ ಘಟಕ ಲೋಕಾರ್ಪಣೆ

ನೂತನವಾಗಿ ಲೋಕಾರ್ಪಣೆಯಾದ ಬಿರುವೆರ್ ಕುಡ್ಲ( ರಿ) ಪೈವಳಿಕೆ ಘಟಕ ಕಾಸರಗೋಡು ಜಿಲ್ಲೆ ಇದರ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭವು ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಯಿಕಟ್ಟೆಯಲ್ಲಿ ಅದ್ದೂರಿಯಾಗಿ ನಡೆಯಿತು. ಇದರ ಸಲುವಾಗಿ ಶ್ರೀ ಮಹಾಗಣಪತಿ ದೇವರಿಗೆ ಗಣಹೋಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಫ್ರೆಂಡ್ಸ್

ತಲಪಾಡಿಯಿಂದ ಕಾಸರಗೋಡಿವರೆಗೆ ಷಟ್ಪಥ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣ

ಮಂಜೇಶ್ವರ: ತಲಪ್ಪಾಡಿಯಿಂದ ಕಾಸರಗೋಡುವರೆಗಿನ ಷಟ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ತಲಪ್ಪಾಡಿ ಕಾಸರಗೋಡು ರಸ್ತೆಯ ಚಿತ್ರಣವೇ ಬದಲಾಗುತ್ತಿದೆ. ರಸ್ತೆ ಬದಿಯ ಹಳೆಯ ಕಟ್ಟಡಗಳು ನೆಲಸಮಗೊಂಡು ರಸ್ತೆ ನಿರ್ಮಾಣ ಬಹುತೇಕ ಪೂರ್ಣಗೊಂಡಿರುವುದರಿಂದ ಇಲ್ಲಿ ಹೊಸ ಪ್ರಯಾಣದ ಅನುಭವವಾಗುತ್ತಿದೆ. ವಿವಿಧೆಡೆ ಕಾಮಗಾರಿ ಮುಗಿದ ಭಾಗಗಳನ್ನು ಪ್ರಯಾಣಿಕರಿಗೆ ಮುಕ್ತಗೊಳಿಸಿ ಸರ್ವೀಸ್ ರಸ್ತೆಗಳ ಮೂಲಕ ವಾಹನಗಳನ್ನು ಸಾಗಿಸಲಾಗುತ್ತಿದೆ.ತೂಮಿನಾಡುವರೆಗಿನ

ಕಾಸರಗೋಡು ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ  ತುಳು ಲಿಪಿ ನಾಮಫಲಕ ಅನಾವರಣ

ಅನಂತಪುರದ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ  ತುಲು ಲಿಪಿ ನಾಮಫಲಕದ ಅನಾವರಣ ಮಾಡಲಾಯಿತು. ದೇವಸ್ಥಾನದ ತುಲು ಲಿಪಿ ನಾಮಫಲಕದ ಉದ್ಘಾಟನೆಯನ್ನು ಅನಂತಪುರ ಕ್ಷೇತ್ರದ ಆಡಳಿತ ಮುಖ್ಯಸ್ಥರಾದ ಉದಯಕುಮಾರ್ ಗಟ್ಟಿ ಇವರು ನೆರವೇರಿಸಿದರು. ಕಾರ್ಯಕ್ರಮಕ್ಕೆ  ಜೈ ತುಲುನಾಡು (ರಿ.) ಸಂಘಟನೆಯ ಉಪಾಧ್ಯಕ್ಷರಾದ ಹರಿಕಾಂತ್ ಸಾಲ್ಯಾನ್ ಕಾಸರಗೋಡು ಇವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ತುಳು ವರ್ಲ್ಡ್ (ರಿ.) ಮಂಗಳೂರು ಇದರ ಅಧ್ಯಕ್ಷರು

ಮೂಸೋಡಿಯಲ್ಲಿ ಪ್ರಯೋಜನಕ್ಕಿಲ್ಲದ ಮೀನುಗಾರಿಕಾ ಬಂದರು

ಮಂಜೇಶ್ವರ: ಮೂಸೋಡಿಯಲ್ಲಿ ನಿರ್ಮಾಣವಾಗಿರುವ ಮಂಜೇಶ್ವರ ಮೀನುಗಾರಿಕಾ ಬಂದರು ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಉಪಯೋಗ ಶೂನ್ಯವಾಗಿರುವುದಾಗಿ ಮೀನು ಕಾರ್ಮಿಕರು ದೊರಿದ್ದಾರೆ. ಇದು ಉದ್ಘಾಟನೆಯಾಗಿ ಎರಡು ವರ್ಷ ಕಳೆದರೂ ಬೋಟ್‍ಗಳು, ಸಣ್ಣ ದೋಣಿಗಳು ಪ್ರವೇಶಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವುದಾಗಿ ಮಿನು ಕಾರ್ಮಿಕರು ಆರೋಪಿಸುತಿದ್ದಾರೆ.ಮೀನುಗಾರಿಕಾ ಬಂದರು ನಿರ್ಮಾಣ ಕಾಮಗಾರಿ 2014 ಕ್ಕೆ ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಉದ್ಘಾಟಿಸಿದ್ದರು.

ಮಂಜೇಶ್ವರದ ಮರ್ಸಿ ಅಮ್ಮನವರ ದೇವಾಲಯದಲ್ಲಿ ಕ್ರಿಸ್ಮಸ್ ಸಹಮಿಲನ

ಮಂಜೇಶ್ವರ : ಯೇಸು ಕ್ರಿಸ್ತರ ಬೋಧನೆಗಳಾದ ಪರಸ್ಪರ ಕ್ಷೇಮ ಪ್ರೀತಿ ಕರುಣೆ ದಯೆ ಸಹನೆ ಸೇವೆಯಿಂದ ಬಾಳುವ ಮೂಲಕ ಶಾಂತಿ ಸೌಹಾರ್ದತೆ ಬಂಧುತ್ವ ಸಮಾಜದಲ್ಲಿ ನೆಲೆಗೊಳ್ಳಲಿ. ಪ್ರಮುಖವಾಗಿ ಮನುಕುಲದಲ್ಲಿ ಮನುಷ್ಯತ್ವದಿಂದ ಜೀವಿಸುವುದೇ ಧರ್ಮವಾಗಿದೆ ಮಾತ್ರವಲ್ಲದೆ ಇದುವೇ ಕ್ರಿಸ್ಮಸ್ ಸಂದೇಶವಾಗಿದೆ ಎಂದು ಮಂಜೇಶ್ವರ ಮರ್ಸಿ ಅಮ್ಮನ ದೇವಾಲಯದ ಧರ್ಮಗುರು ಎಡ್ವಿನ್ ಪಿಂಟೋ ಹೇಳಿದರು. ಮಂಜೇಶ್ವರ ಮರ್ಸಿ ಅಮ್ಮನವರ ಚರ್ಚ್ ಅಂಗಣದಲ್ಲಿ ಆಯೋಜಿಸಲಾದ ಕ್ರಿಸ್ಮಸ್ ಹಬ್ಬದ ಸಹಮಿಲನ

ಮಂಜೇಶ್ವರದ ಜೋಡುಕಲ್ಲಿನಲ್ಲಿ ಅಕ್ರಮ ಮರಳು ದಂಧೆ : 3 ಟಿಪ್ಪರ್ ಲಾರಿಗಳ ವಶ

ಮಂಜೇಶ್ವರ: ಜೋಡುಕಲ್ಲಿನ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಮಂಜೇಶ್ವರ ಪೊಲೀಸರು ನಡೆಸಿದ ದಾಳಿಯಲ್ಲಿ 3 ಟಿಪ್ಪರ್ ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅನಧಿಕೃತ ಮರಳಿನ ದಿಬ್ಬವನ್ನು ಕೆಡವಲಾಯಿತು. ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಂಜೇಶ್ವರ ಎಸ್ಸೈ ಅನ್ಸಾರ್ ರವರ ನೇತೃತ್ವದಲ್ಲಿ ದಾಳಿ ನಡೆದಿದೆ. ಮರಳು ಸಾಗಾಟಕ್ಕೆ ಬಂದಿದ್ದ ಮೂರು ಟಿಪ್ಪರ್ ಲಾರಿಗಳನ್ನು ವಶಕ್ಕೆ ತೆಗೆಯಲಾಗಿದೆ. ಮೂವರು ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅನಧಿಕೃತ

ಬದಿಯಡ್ಕದಲ್ಲೊಂದು ಮನಕಲಕುವ ದೃಶ್ಯ ಒಂದೇ ಕುಟುಂಬದ ಇಬ್ಬರು ಮಕ್ಕಳ ಕಿಡ್ನಿ ವೈಫಲ್ಯ : ನೆರವಿಗಾಗಿ ಮನವಿ

ಮಂಜೇಶ್ವರ : ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿರುವ ಏತಡ್ಕ ವಳಕುಂಜದಲ್ಲಿ ವಾಸವಾಗಿರುವ ಜನಾರ್ಧನ ಎಂಬವರ ಇಬ್ಬರು ಮಕ್ಕಳು ನೂರಾರು ಕನಸುಗಳನ್ನು ಹೊತ್ತುಕೊಂಡು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ವಯಸ್ಸಿನಲ್ಲೇ ತನ್ನ ಎರಡೂ ಕಿಡ್ನಿ ವೈಫಲ್ಯಕ್ಕೊಳಗಾಗಿ ಖರ್ಚು ವೆಚ್ಚಕ್ಕೆ ಯಾವುದೇ ದಾರಿ ಇಲ್ಲದೆ ಚಿಕಿತ್ಸೆಗೆ ಹಾಗೂ ಸಂಬಂಧಿತ ಖರ್ಚು ವೆಚ್ಚಕ್ಕೆ ಉದಾರ ದಾನಿಗಳಿಂದ ಕುಟುಂಬ ನೆರವು ಯಾಚಿಸಿದೆ. ಕಳೆದ ಹಲವಾರು ವರ್ಷಗಳಿಂದ ಬೀಡಿ

ತ್ಯಾಜ್ಯ ಗುಂಡಿಗೆ ಬಿದ್ದು ಎರಡು ವರ್ಷ ಪ್ರಾಯದ ಬಾಲಕನ ಧಾರುಣ ಅಂತ್ಯ

ಮಂಜೇಶ್ವರ : ತ್ಯಾಜ್ಯ ಗುಂಡಿಗೆ ಬಿದ್ದು ಎರಡು ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿದ್ದಾನೆ. ಉಪ್ಪಳ ನಗರದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಸಮದ್ ಎಂಬವರ ಪುತ್ರ ಶೆಹಝಾದ್ (2) ಸಾವನ್ನಪ್ಪಿದ ದುರ್ದೈವಿ. ಬುಧವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿದೆ. ಶುಚೀಕರಣಕ್ಕಾಗಿ ತೆರೆದಿಟ್ಟ ಮನೆಯ ಅಂಗಳದ ಹಿಂಬಾಗದಲ್ಲಿರುವ ತ್ಯಾಜ್ಯ ಗುಂಡಿಗೆ ಬಾಲಕ ಆಟವಾಡುತ್ತಿರುವ ಮಧ್ಯೆ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಕೂಡಲೇ ಬಾಲಕನನ್ನು ಮೇಲಕ್ಕೆತ್ತಿ ಆಸ್ಪತೆಗೆ ಸಾಗಿಸಿದರೂ

ಕಾಲೇಜು ವಿದ್ಯಾರ್ಥಿನಿ ರೈಲ್ವೆ ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಡಪ್ಪುರದ ಸುರೇಂದ್ರರವರ ಪುತ್ರಿ ಅಂಜನಾ.ಎಸ್(22) ಮೃತಪಟ್ಟವರು.ರಾತ್ರಿ ಊಟ ಮಾಡಿ ಮಲಗಿದ್ದ ವಿದ್ಯಾರ್ಥಿನಿ ಬೆಳಿಗ್ಗೆ ಮನೆಯವರು ಎದ್ದಾಗ ನಾಪತ್ತೆಯಾಗಿದ್ದಳು.ಮನೆಯವರು ಹುಡುಕಾಡಿದಾಗ ಮನೆಯ ಪಕ್ಕದ ರೈಲು ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.ಸ್ಥಳಕ್ಕೆ ಕಾಸರಗೋಡು ನಗರ ಠಾಣಾ ಪೊಲೀಸರು ತೆರಳಿ ಮಹಜರು ನಡೆಸಿದ್ದಾರೆ‌.ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.ಇದು ಆತ್ಮಹತ್ಯೆಯ

ಮಂಜೇಶ್ವರ ಮತ್ತು ಉಪ್ಪಳ ಪರಿಸರದಲ್ಲಿ ಮಾದಕ ವಸ್ತು ಮಾರಾಟ : ಮೂವರನ್ನು ವಶಕ್ಕೆ ಪಡೆದ ಮಂಜೇಶ್ವರ ಪೊಲೀಸರು

ಉಪ್ಪಳ ಹಾಗೂ ಮಂಜೇಶ್ವರ ಪರಿಸರಗಳಲ್ಲಿ ವ್ಯಾಪಕವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ಪೊಲೀಸರು 18.2 ಗ್ರಾಂ ಎಂಡಿಎಂಎ ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ. ಉಪ್ಪಳ ಕೋಡಿವಯಲ್‍ನ ಮುಹಮ್ಮದ್ ಕಾಸಿಂ, ಮಂಜೇಶ್ವರ ಕುಂಜತ್ತೂರು ಬಾಚಲಿಕದ ಅಬ್ದುಲ್ ಸವಾಸ್ ಮತ್ತು ಉಪ್ಪಳ ಬಪೈತೊಟ್ಟಿಯ ಮುಹಮ್ಮದ್ ನಾಸೀರ್ ಬಂಧಿತ ಆರೋಪಿಗಳು.ಠಾಣಾಧಿಕಾರಿ ಎ.ಸಂತೋಷ್ ಕುಮಾರ್ ಮತ್ತು ಎಸ್‍ಐ ರಜಿತ್ ನೇತೃತ್ವದ