ತಲಪಾಡಿಯಿಂದ ಕಾಸರಗೋಡಿವರೆಗೆ ಷಟ್ಪಥ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣ
ಮಂಜೇಶ್ವರ: ತಲಪ್ಪಾಡಿಯಿಂದ ಕಾಸರಗೋಡುವರೆಗಿನ ಷಟ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ತಲಪ್ಪಾಡಿ ಕಾಸರಗೋಡು ರಸ್ತೆಯ ಚಿತ್ರಣವೇ ಬದಲಾಗುತ್ತಿದೆ. ರಸ್ತೆ ಬದಿಯ ಹಳೆಯ ಕಟ್ಟಡಗಳು ನೆಲಸಮಗೊಂಡು ರಸ್ತೆ ನಿರ್ಮಾಣ ಬಹುತೇಕ ಪೂರ್ಣಗೊಂಡಿರುವುದರಿಂದ ಇಲ್ಲಿ ಹೊಸ ಪ್ರಯಾಣದ ಅನುಭವವಾಗುತ್ತಿದೆ. ವಿವಿಧೆಡೆ ಕಾಮಗಾರಿ ಮುಗಿದ ಭಾಗಗಳನ್ನು ಪ್ರಯಾಣಿಕರಿಗೆ ಮುಕ್ತಗೊಳಿಸಿ ಸರ್ವೀಸ್ ರಸ್ತೆಗಳ ಮೂಲಕ ವಾಹನಗಳನ್ನು ಸಾಗಿಸಲಾಗುತ್ತಿದೆ.ತೂಮಿನಾಡುವರೆಗಿನ ಷಟ್ಪಥಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ತೂಮಿನಾಡಿನಿಂದ ಕುಂಜತ್ತೂರಿನವರೆಗೆ ಪೂರ್ಣಗೊಂಡಿರುವ ಮೂರು ಪಥದ ರಸ್ತೆಯ ಇನ್ನೊಂದು ಬದಿಯ ಕಾಮಗಾರಿಯೂ ನಡೆಯುತ್ತಿದೆ. ಮಾಡದಿಂದ ಉದ್ಯಾವರದವರೆಗೆ ಒಂದೆಡೆ ಮೂರು ಪಥದ ಕಾಮಗಾರಿ ಮುಗಿದು ವಾಹನಗಳಿಗೆ ಸಾಗುವ ವ್ಯವಸ್ಥೆ ಕಲ್ಪಿಸಲಾಗಿದೆ.
ಮಂಜೇಶ್ವರದಿಂದ ಪೆÇಸೋಟ್‍ವರೆಗೆ ಷಟ್ಪಥದ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ಕೆಲವೇ ದಿನಗಳಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲು ಸಿದ್ಧತೆ ನಡೆಯುತ್ತಿದೆ. ಸೇತುವೆಯ ಸಮೀಪದಿಂದ ಹಿದಾಯತ್ ಬಜಾರ್‍ವರೆಗೆ ಮೂರು ಪಥಗಳು ಪೂರ್ಣಗೊಂಡು ವಾಹನಗಳು ಹಾದುಹೋಗಲು ಆರಂಭಗೊಂಡಿದೆ. ನಯಾಬಜಾರ್‍ನಿಂದ ಕುಕ್ಕಾರ್ ಸೇತುವೆವರೆಗೆ ಮೂರು ಪಥದ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಮುಟ್ಟಂ ಗೇಟ್‍ನಿಂದ ಶಿರಿಯಾವರೆಗೆ ಮೂರು ಪಥದ ರಸ್ತೆ ನಿರ್ಮಾಣ ಪೂರ್ಣಗೊಂಡಿದೆ. ಕುಂಬಳೆ ಪೆರುವಾಡ್ ಪಕ್ಕದ ರಸ್ತೆಯೊಂದು ಪೂರ್ಣಗೊಳ್ಳುವ ಹಂತದಲ್ಲಿದೆ. ಸಿಪಿಆರ್‍ಎಯಿಂದ ಎರಿಯಾಲ್‍ವರೆಗಿನ ಅಡ್ಡರಸ್ತೆ ಅಂತಿಮ ಹಂತದಲ್ಲಿದೆ.
ರಸ್ತೆಯ ಇಕ್ಕೆಡೆಗಳಲ್ಲೂ ತಲೆ ಎತ್ತಿರುವ ಗೋಡೆ ನಿರ್ಮಾಣದ ವಿರುದ್ಧ ಸ್ಥಳೀಯ ರಿಂದ ವ್ಯಾಪಾರಸ್ಥರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತದೆ. ವಿವಿಧೆಡೆ ಇರುವ ಶಾಲೆಗಳಿಗೆ ವಿದ್ಯಾರ್ಥಿಗಳು ಬರುವುದೇ ಕಷ್ಟವಾಗಿದೆ ಎಂಬ ದೂರುಗಳೂ ಇವೆ. ರಸ್ತೆ ನಿರ್ಮಾಣದ ಸ್ಥಳಗಳಲ್ಲಿ ವಿದ್ಯಾರ್ಥಿಗಳಿಗೆ ಅಪಾಯ ಕೂಡಾ ಕಟ್ಟಿಟ್ಟ ಬುತ್ತಿಯಂತಾಗಿದೆ. ಅದೇ ರೀತಿ ಕುಂಜತ್ತೂರು ಪೆÇಸೋಟ್‍ನಲ್ಲಿ ಅಂಡರ್‍ಪಾಸ್ ಕಾಮಗಾರಿ ಆರಂಭವಾಗಿದ್ದರೂ ವಾಹನಗಳು ದಾಟಲು ಸಾಧ್ಯವಾಗದಂತಹ ಅತಿ ಚಿಕ್ಕ ಅಂಡರ್‍ಪಾಸ್ ನಿರ್ಮಿಸುತ್ತಿರುವುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ.