Home ಕರಾವಳಿ Archive by category ಕಾಸರಗೋಡು (Page 2)

ಮಂಜೇಶ್ವರ: ಮೂಡಂಬೈಲ್ ದಡ್ಡಂಗಡಿ ತರವಾಡು ಟ್ರಸ್ಟ್‌ನವರು ನೂತನವಾಗಿ ನಿರ್ಮಿಸಿದ ಶ್ರೀ ನಾಗದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಾಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಜೇಶ್ವರ ಮೂಡಂಬೈಲ್ ದಡ್ಡಂಗಡಿ ತರವಾಡು ಟ್ರಸ್ಟ್‌ನ ದಡ್ಡಂಗಡಿ ಕುಟುಂಬಸ್ಥರು ನೂತನವಾಗಿ ನಿರ್ಮಿಸಿದ ಶ್ರೀ ನಾಗದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಏಪ್ರಿಲ್ 10 ಮತ್ತು 11ರಂದು ನಡೆಯಲಿದೆ. ನಾಗದೇವರ ಪುನರ್ ಪ್ರತಿಷ್ಟ  ಬ್ರಹ್ಮಕಲಶದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ದಡ್ಡಂಗಡಿ ಶ್ರೀಮಹಾ ವಿಷ್ಣು ದೇವಸ್ಥಾನದಲ್ಲಿ ದೇವರ ಮಹಾ ಪೂಜೆಯ ಬಳಿಕ

ಮಧೂರು ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವಕರಿಗೆ ಪೊಲೀಸ್ ರಕ್ಷಣೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ

ಕೊಚ್ಚಿ: ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಾರ್ಚ್ 27ರಿಂದ ಏಪ್ರಿಲ್ 7ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆ ಹಾಗೂ ಸಂಬಂಧಿತ ಧಾರ್ಮಿಕ ವಿಧಿವಿಧಾನಗಳನ್ನು ಸುರಕ್ಷಿತವಾಗಿ ನಡೆಸಲು ವಿಶೇಷ ಪೊಲೀಸ್ ಭದ್ರತೆ ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ದೇವಸ್ಥಾನ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ನೇತೃತ್ವದಲ್ಲಿ ಉತ್ಸವಕ್ಕೆ ವ್ಯಾಪಕ ಸಿದ್ಧತೆ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ಪೊಲೀಸ್

ಮಂಜೇಶ್ವರ: ವ್ಯಕ್ತಿಯೋರ್ವನನ್ನು ಇರಿದು ಕೊಲೆ

ಮಂಜೇಶ್ವರ : ವ್ಯಕ್ತಿಯೋರ್ವನನ್ನು ಕಡಿದು ಕೊಲೆ ಮಾಡಿದ ಘಟನೆ ಮಂಜೇಶ್ವರದ ಉಪ್ಪಳದಲ್ಲಿ ನಡೆದಿದೆ. ಕಣ್ಣೂರು ಪಯ್ಯನ್ನೂರು ನಿವಾಸಿ ಹಾಗೂ ಉಪ್ಪಳ ಮೀನು ಮಾರುಕಟ್ಟೆ ಸಮೀಪದ ಫ್ಲಾಟಿನ ನೌಕರನಾಗಿರುವ ಸುರೇಶ್ ಕುಮಾರ್ (48) ಸಾವನ್ನಪ್ಪಿದ ದುರ್ದೈವಿ. ಮಂಗಳವಾರ ರಾತ್ರಿ ಉಪ್ಪಳ ಮೀನು ಮಾರುಕಟ್ಟೆ ಪರಿಸರದಲ್ಲಿ ಈ ದುಷ್ಕೃತ್ಯ ನಡೆದಿದೆ. ಘಟನೆಗೆ ಸಂಬಂಧಿಸಿ ಉಪ್ಪಳ ಫತ್ವಾಡಿ ಕಾರ್ಗಿಲ್ ನಿವಾಸಿ ಸವಾದ್( 23) ಎಂಬಾತನನ್ನು ಮಂಜೇಶ್ವರ ಪೊಲೀಸರು  ವಶಕ್ಕೆ ತೆಗೆದಿದ್ದಾರೆ.

ಕಾಸರಗೋಡು: ಸಹಾಯದ ನಿರೀಕ್ಷೆಯಲ್ಲಿ ಪ್ರಶಾಂತ್ ರೈ ಕುಟುಂಬ

ಕಾಸರಗೋಡಿನ ಬದಿಯಡ್ಕ ನಿವಾಸಿ ಪ್ರಶಾಂತ್ ರೈ ಅವರು, ಲಿಂಪೋಮ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ತಗುಲಲಿದೆ. ಇದೀಗ ಬಡ ಕುಟುಂಬ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.ಪ್ರಶಾಂತ್ ರೈ ಅವರು ವೃತ್ತಿಯಲ್ಲಿ ಅಧ್ಯಾಪಕರಾಗಿದ್ದು, ಇವರು ಹಲವು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇದವರಿಗೆ 35ರಿಂದ 40 ಲಕ್ಷ ಖರ್ಚು ತಗುಲಿದೆ. ಇನ್ನು ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಸೂಚಿಸಿದ್ದು, 70ರಿಂದ 75 ಲಕ್ಷ

ಮಂಜೇಶ್ವರ: ಕುಂಬಳೆಯಲ್ಲಿ ಕಾರು ಅಪಘಾತ : ಮಹಿಳೆ ಸಾವು

ಮಂಜೇಶ್ವರ: ಸೋಮವಾರ ಮಧ್ಯಾಹ್ನ ಮಟ್ಟಂ ಶಿರಿಯಾ ಬಳಿ ನಡೆದ ವಾಹನ ಅಪಘಾತದಲ್ಲಿ ಗಾಯಗೊಂಡ 62 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ ಕಾಇಾಂಗಾಡಿನ ಕೊವ್ವಲ್ಪಳ್ಳಿ ಮಾನ್ಯಾಟ ವಿಷ್ಣುಮೂರ್ತಿ ದೇವಸ್ಥಾನದ ಬಳಿ ನಿವಾಸಿ ನಫೀಸ (62) ಸಾವನ್ನಪ್ಪಿದ ದುರ್ದೈವಿ. ಅಪಘಾತದಲ್ಲಿ ತೀವ್ರ ಗಾಯಗೊಂಡ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡ ಇತರ ನಾಲ್ಕು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಮಂಜೇಶ್ವರ : ಜ.19ರಿಂದ ಜ.24ರವರೆಗೆ ಶ್ರೀ ಕ್ಷೇತ್ರ ಸಂತಡ್ಕ ಮಾಡದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ವಾರ್ಷಿಕ ಜಾತ್ರಾ ಮಹೋತ್ಸವ

ಮಂಜೇಶ್ವರ ಕುಳೂರು ಸಂತಡ್ಕದ ಶ್ರೀ ಅರಸು ಸಂಕಲ ದೈವ ಕ್ಷೇತ್ರ ಶ್ರೀ ಕ್ಷೇತ್ರ ಸಂತಡ್ಕ ಮಾಡದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಜ.19ರಿಂದ ಜ.24ರವರೆಗೆ ನಡೆಯಲಿದೆ. ಜ.19ರಿಂದ ಜ.22ರವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಜ.23, 24ರಂದುವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಲಿದೆ. ಜ.16ರಂದು ಗೊನೆಮುಹೂರ್ತ, ಜ.19ರಂದು ಹೊರೆಕಾಣೀಕೆ ಮೆರವಣಿಗೆ, ಧಾರ್ಮಿಕ ಸಭೆ, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ ಜ.19ರಂದು ಸ್ವಯಂ ಸೇವಕರ ಬೃಹತ್ ಸಮಾವೇಶ

ಕಾಸರಗೋಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವೆಯ ಪೂರ್ವಭಾವಿಯಾಗಿ ಜ.19ರಂದು ಸಂಜೆ 3 ಗಂಟೆಗೆ ಸ್ವಯಂ ಸೇವಕರ ಬೃಹತ್ ಸಮಾವೇಶವು ನಡೆಯಲಿದೆ. ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದ ಪರಿಸರದಲ್ಲಿ ಸ್ವಯಂ ಸೇವಕರ ಬೃಹತ್ ಸಮಾವೇಶ ನಡೆಯಲಿದೆ. ಉತ್ಸವದ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಲಿಚ್ಚಿಸುವ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿ

ಕಾಸರಗೋಡು: ಅನಾರೋಗ್ಯದಿಂದ ಬಳಲುತ್ತಿರುವ ಮೇಘಶ್ಯಾಮ್ ಚಿಕಿತ್ಸೆಗೆ ಬೇಕಾಗಿದೆ ದಾನಿಗಳ ಸಹಾಯಹಸ್ತ

ಕಾಸರಗೋಡಿನ ಬಳ್ಳೂರು ರಾಮಚಂದ್ರ ಅಚಾರ್ಯರ ಮಗ ಮೇಘಶ್ಯಾಮ ಎಂಬವರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಇವರು ಮಂಗಳೂರು ವಜ್ರಹಿಲ್ಸ್ ಕದ್ರಿ ರಸ್ತೆಯ ಮಂಗಳಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.ಇವರಿಗೆ ತುರ್ತು ಶಸ್ತ್ರಕ್ರಿಯೆ ನಡೆಸಲು 8.5 ಲಕ್ಷ ರೂ. ಅಗತ್ಯವಿದೆಯೆಂದು ವೈದ್ಯರು ತಿಳಿಸಿದ್ದಾರೆ. ಈ ಮೊತ್ತವನ್ನು ಭರಿಸಲು ಕುಟುಂಬದ ಸದಸ್ಯರಿಗೆ ಸಾಧ್ಯವಾಗದ ಕಾರಣ

ಮಂಜೇಶ್ವರ: ಹೊತ್ತಿ ಉರಿದ ಎಂಎಫ್ ಫ್ರೇಂ ವರ್ಕ್ ಪ್ಲೈವುಡ್ ಕಾರ್ಖಾನೆ: ಭಾರೀ ಪ್ರಮಾಣದ ಸಾಮಾಗ್ರಿಗಳು ನಾಶ

ಮಂಜೇಶ್ವರ: ಮಂಜೇಶ್ವರ ಬಟ್ಟಿ ಪದವಿನಲ್ಲಿ ಕಾಯಾಚರಿಸುತ್ತಿರುವ ಎಂ ಎಫ್ ಫ್ರೇಂ ವರ್ಕ್ ಕಾರ್ಖಾನೆಯಲ್ಲಿ ಶನಿವಾರ ಸಂಜೆ ವೇಳೆಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಇದರ ಪರಿಣಾಮವಾಗಿ, ಕಾರ್ಖಾನೆ ಬಹುತೇಕ ಹೊತ್ತಿ ಉರಿದು ಭಾರೀ ಪ್ರಮಾಣದ ಸಾಮಾಗ್ರಿಗಳು ನಾಶಗೊಂಡಿದೆ. ಮಾಹಿತಿ ಅರಿತು ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕದಳ ಹಾಗೂ ಸ್ಥಳೀಯರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ಸುಗೊಂಡಿದ್ದಾರೆ.ಮಂಗಳೂರು ನಿವಾಸಿಗಳಾದ ಎಕೆ ನಿಯಾಸ್ ಹಾಗೂ ಅನಿಲ್ ಕುಮಾರ್ ರವರ

ಮಂಜೇಶ್ವರ: ಪೆರಿಯ ಜೋಡಿ ಕೊಲೆ ಪ್ರಕರಣದಲ್ಲಿ ಸಿಪಿಐಎಂ ಮಾಜಿ ಶಾಸಕ ಸೇರಿದಂತೆ 14 ಆರೋಪಿಗಳು ತಪ್ಪಿತಸ್ಥರೆಂದು ತೀರ್ಪು

ಮಂಜೇಶ್ವರ: ಪೆರಿಯ ಜೋಡಿ ಕೊಲೆ ಪ್ರಕರಣದಲ್ಲಿ ಸಿಪಿಐಎಂ ಮಾಜಿ ಶಾಸಕ ಕೆವಿ ಕುಂಞಿರಾಮನ್ ಸೇರಿದಂತೆ 14 ಆರೋಪಿಗಳು ತಪ್ಪಿತಸ್ಥರೆಂದು ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ. ಮೊದಲನೇ ಆರೋಪಿಯಾಗಿ ಸಿಪಿಎಂ ನೇತಾರರಾದ ಎ. ಪೀತಾಂಬರನ್, ಎರಡನೇ ಆರೋಪಿಯಾಗಿ ಸಜಿ ಸಿ ಜಾರ್ಜ್ ಎಂಬ ಸಜಿ, ಮೂರನೇ ಆರೋಪಿಯಾಗಿ ಕೆ.ಎಂ. ಸುರೆಶ್, ನಾಲ್ಕನೇ ಆರೋಪಿಯಾಗಿ ಕೆ ಅನಿಲ್ ಕುಮಾರ್ ಎಂಬ ಅಬು, ಐದನೇ ಆರೋಪಿಯಾಗಿ ಜಿಜಿನ್, ಆರನೇ ಆರೋಪಿಯಾಗಿ ಶ್ರೀರಾಗ್ ಎಂಬ ಕೂಟು, ಏಳನೇ ಆರೋಪಿಯಾಗಿ