ಯಾವ ಮಗುವಿನಲ್ಲೂ ಬೇಧಭಾವ ಮಾಡದೆ ನಮ್ಮ ಮಗುವಿನಂತೆ ಪ್ರೀತಿ ತೋರಿಸಿ ಝೀರೋದಿಂದ ಹೀರೋ ಮಾಡುವ ಮಹತ್ತರ ಜವಾಬ್ಧಾರಿ ಪೂರ್ವ ಪ್ರಾಥಮಿಕ ಶಿಕ್ಷಕಿಯರ ಮೇಲಿದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವಂದನಾ ರೈ ಕಾರ್ಕಳ ಹೇಳಿದರು. ಅವರು ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಯಲ್ಲಿ ಜೇಸಿಐ ಬೆಳ್ಳಾರೆಯ ಆಶ್ರಯದಲ್ಲಿ ನಡೆದ ಜೇಸಿ ಸಪ್ತಾಹದಲ್ಲಿ ದಿ. ಗಂಗಾಧರ
ಪುತ್ತೂರು: ಸೆ.10ರ ಶನಿವಾರದಂದು ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಪುತ್ತೂರಿನಲ್ಲಿ ವಾಹನ ಜಾಥಾ ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರ ಇವುಗಳ ಆಶ್ರಯದಲ್ಲಿ ನಡೆದ ವಾಹನ ಜಾಥಾಕ್ಕೆ ನಗರದ ದರ್ಬೆ ಬೈಪಾಸ್‍ನ ಫಾ. ಪತ್ರಾವೋ ವೃತ್ತದಲ್ಲಿ ಚಾಲನೆ ನೀಡಲಾಯಿತು. ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ,
ದೇಶದ ಐಕ್ಯತೆಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷರು ವಯನಾಡು ಸಂಸದರು ರಾಹುಲ್ ಗಾಂಧೀಜಿಯವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 6 ತಿಂಗಳ ಕಾಲ ಸುಮಾರು 3574 ಕಿಮೀ ಭಾರತ ಐಕ್ಯತಾ ಯಾತ್ರೆ ಪಾದಯಾತ್ರೆ ಇಂದು ಕನ್ಯಾಕುಮಾರಿಯಿಂದ ಪ್ರಾರಂಭಗೊಂಡಿದೆ. ಈ ಯಾತ್ರೆಯ ಯಶಸ್ಸಿಗಾಗಿ ಸರ್ವ ಧರ್ಮಗಳ ಪ್ರಾರ್ಥನಾ ಕೇಂದ್ರಗಳಲ್ಲಿ ಪ್ರಾರ್ಥಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಡಿ ಕೆ ಶಿವಕುಮಾರ್ ಸೂಚನೆ ಮೇರೆಗೆ
ಮರದ ಕೊಂಬೆ ಕಡಿಯುವಾಗ ವಿದ್ಯುತ್ ತಗುಲಿ ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಕಡಬದಲ್ಲಿ ನಡೆದಿದೆ. ಕುಂತೂರು ಕಾಲಾಯಿಲ್ ನಿವಾಸಿ ಮನೋಜ್(43) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.ಮನೋಜ್ ಅವರು ಮರದ ಕೊಂಬೆಯೊಂದು ಕಡಿಯುವಾಗ 33 kv ವಿದ್ಯುತ್ ತಂತಿ ತಾಗಿ ದುರ್ಮರಣ ಸಂಭವಿಸಿದೆ. ಮನೋಜ್ ಮೃತದೇಹ ಮರದಲ್ಲೇ ನೇತಾಡುತ್ತಿತ್ತುಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಗೆ ತರಲಾಗಿದೆ.ಕಡಬ
ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಮನೆಯೊಳಗೆ ಮಲಗಿದ್ದ ಯಜಮಾನ ಜೀವಂತ ದಹನವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆಯೊಂದು ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಪರ್ಲಿಕಜೆ ಸುಧಾಕರ (47) ದುರ್ಘಟನೆಯಲ್ಲಿ ಸಾವಿಗೀಡಾದ ವ್ಯಕ್ತಿ. ಇಂದು ಬೆಳಿಗ್ಗೆ ಸುಧಾಕರರು ಮನೆಯಲ್ಲಿ ಮಲಗಿದ್ದು, ಪತ್ನಿ ಟ್ಯಾಪಿಂಗ್‌ಗೆಂದು ಹೋಗಿದ್ದರು. ಮಗಳು ಶಾಲೆಗೆ ತೆರಳಿದ್ದಳು. ಈ ಹೊತ್ತಿನಲ್ಲಿ ಬೆಂಕಿ ಮನೆಯ ಒಂದು
ಪುತ್ತೂರು: ಬೈಕೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಬಸ್‌ಗೆ ಡಿಕ್ಕಿಯಾದ ಘಟನೆ ಸೆ.3ರಂದು ರಾತ್ರಿ ಪರ್ಲಡ್ಕ ರಸ್ತೆಯಲ್ಲಿ ನಡೆದಿದ್ದು, ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ವೀರಮಂಗಲದ ಭರತ್‌ರಾಜ್ ಗೌಡ ಎಂಬವರು ಮೃತಪಟ್ಟಿದ್ದಾರೆ. ಪುತ್ತೂರು ಗಣೇಶೋತ್ಸವ ಶೋಭಾಯಾತ್ರೆಗೆಂದು ಬಂದಿದ್ದ ಕೊಳ್ತಿಗೆ ಪೆರ್ಲಂಪಾಡಿ ನಿವಾಸಿ ಜಯದೀಪ್ ಅವರ ಪುತ್ರ ಧನುಷ್(24ವ) ಮತ್ತು ವೀರಮಂಗಲ ಖಂಡಿಗ ಚಂದ್ರಶೇಖರ್ ಗೌಡ ಅವರ ಪುತ್ರ ಭರತ್ ರಾಜ್ ಗೌಡ(22ವ)ರವರು ಡ್ಯೂಕ್
ಕಡಬ ತಾಲೂಕಿನ ಗೋಳಿ ತೊಟ್ಟು ಗ್ರಾಮದ ಆರಂತಬೈಲು ಎಂಬಲ್ಲಿ ನಿನ್ನೆ ತಡರಾತ್ರಿ ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಗೆ ನುಗ್ಗಿದ ಕಳ್ಳರು 105 ಗ್ರಾಂ ಚಿನ್ನ ಹಾಗೂ 8 ಸಾವಿರ ರೂ ನಗದು ಸೇರಿ ಒಟ್ಟು 5.30 ಲಕ್ಷ ಮೌಲ್ಯದ ವಸ್ತುವನ್ನು ದೋಚಿ ಪರಾರಿಯಾಗಿದ್ದಾರೆ.ಮನೆಯ ಮಾಲೀಕ ರಮ್ಲತ್ ಹಾಗೂ ಅವರ ಪತ್ನಿ ಖತೀಜಮ್ಮ ರವರು ದುಬೈಯಿಂದ ಬರುವ ತಮ್ಮ ಪುತ್ರನನ್ನು ಕರೆ ತರಲು ನಿನ್ನೆ ಸಂಜೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ವಾಪಸ್ ತಡರಾತ್ರಿ ಮನೆಗೆ ಬಂದ […]
ಸುಳ್ಯ ತಾಲೂಕಿನ ಬೆಳ್ಳಾರೆಯ ಪೆರುವಾಜೆಯಲ್ಲಿ ಯತೀಶ್ ಕುಮಾರ್ ಪೆಲತಡ್ಕ ಮಾಲಕತ್ವದ ಅಕ್ಷಯ ಫಾರ್ಮ್ ಪ್ರೆಶ್ ಚಿಕನ್ ಸೆಂಟರ್ ಶುಭಾರಂಭಗೊಂಡಿತು. ಇಲ್ಲಿ ಬಾಯ್ಲರ್, ಟೈಸನ್ ಮತ್ತು ನಾಟಿ ಕೋಳಿಗಳು ರಖಂ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೆಚ್ಚಿನ
ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪುತ್ತೂರಿನ ವಿವೇಕಾನಂದ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಸ್ವಾಯತ್ತ ಕಾಲೇಜನ್ನು ಉದ್ಘಾಟಿಸಲು ಆ.30ರ ಮಂಗಳವಾರ ಬೆಳಿಗ್ಗೆ ಬಜ್ಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಪೋಲಿಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಣೆ, ಮಂಗಳೂರು ಮಹಾನಗರ
ಪುತ್ತೂರು: ಇನ್ನು ಮುಂದೆ ಬರುವ ದಿನಗಳಲ್ಲಿ ಹಬ್ಬಗಳ ವಾತಾವರಣ ಸಂದರ್ಭ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜನರಿಗೆ ಜಾಗೃತಿ ಮತ್ತು ಧೈರ್ಯ ತುಂಬುವ ನಿಟ್ಟಿನಲ್ಲಿ ಪುತ್ತೂರಿನ ನೂತನ ಡಿವೈಎಸ್ಪಿ ಡಾ| ವೀರಯ್ಯ ಹಿರೇಮಠ್ ಅವರು ಪುತ್ತೂರು ಪೇಟೆಯಲ್ಲಿ ಪೊಲೀಸ್ ಪಥ ಸಂಚಲನ ನಡೆಸಿದರು. ಪುತ್ತೂರು ದರ್ಬೆಯಿಂದ ಆರಂಭವಾದ ಪೊಲೀಸ್ ಪಥ ಸಂಚಲನ ಬೊಳುವಾರಿನಲ್ಲಿ ಸಮಾಪನಗೊಂಡಿತ್ತು. ಪುತ್ತೂರು ಡಿವೈಎಸ್ಪಿ ಡಾ| ವೀರಯ್ಯ ಹಿರೇಮಠ್, ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್




























