Home ಕರಾವಳಿ Archive by category ಮಂಗಳೂರು (Page 56)

ಜೆಸಿಬಿಗೆ ಬೈಕ್ ಡಿಕ್ಕಿ, ಸವಾರ ಸ್ಥಳದಲ್ಲೇ ಮೃತ್ಯು

ಉಡುಪಿ: ಜೆಸಿಬಿಗೆ ಬೈಕ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.ಮೃತ ಸವಾರನನ್ನು ನಾಯರ್ ಕೋಡು ನಿವಾಸಿ ಪ್ರತ್ಯಕ್ಷ ಶೆಟ್ಟಿ (21 ) ಎಂದು ಗುರುತಿಸಲಾಗಿದೆ. ತಮ್ಮನನ್ನು ಶಾಲೆಗೆ ಬಿಡಲು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಹಿಂಬದಿ ಸವಾರ ಸಹೋದರ ಪ್ರೀತಿಶ್ ಸಣ್ಣ ಪುಟ್ಟ ಗಾಯದೊಂದಿಗೆ

ವಿದ್ಯುತ್ ಗೋಪುರ ಬಿದ್ದು ಸಾಣೂರು ಗ್ರಾಮ ಹೊತ್ತಿ ಉರಿಯುವ ಭೀತಿ

ಕಾರ್ಕಳ: ಸುಮಾರು ಒಂದು ವರ್ಷದಿಂದ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮೂಲಕ 169 ಹೆದ್ದಾರಿ ಮಂಗಳೂರಿನ ನಂತೂರಿನಿಂದ ಕಾರ್ಕಳ ಬೈಪಾಸ್ ವರೆಗೆ ಬರುವ ಚತುಷ್ಟದ ರಸ್ತೆ ಕಾಮಗಾರಿ ಬಹಳ ವೇಗವಾಗಿ ನಡೆಯುತ್ತಿದ್ದು ಆದರೆ ಸಾಣೂರು ಗ್ರಾಮಸ್ಥರಿಗೆ ಈ ಹೆದ್ದಾರಿ ಕಾಮಗಾರಿಕೆ ಒಂದು ಶಾಪವಾಗಿ ಕಾಡುತ್ತಿದೆ. ಈ ಹೆದ್ದಾರಿ ಕಾಮಗಾರಿಗೆ ಪರಿಣಾಮವಾಗಿ ಸಾಣೂರುಪೇಟೆಯಲ್ಲಿ ಕೃತಕ ನೆರೆ ಶಾಲೆ ಬಳಿ ಇರುವ ಗುಡ್ಡ ಕುಸಿತ, ಶಾಲಾ ಆವರಣ ಗೋಡೆ ಕುಸಿತ ಬಸ್ ನಿಲ್ದಾಣ ಸ್ಥಳಾಂತರ, ನೂರಾರು

ಕನ್ಸರ್ವೇಟಿವ್ ಪಕ್ಷಕ್ಕೆ ಇತಿಹಾಸದಲ್ಲೇ ಕಡಿಮೆ ಸ್ಥಾನ ಬ್ರಿಟನ್ನಿನಲ್ಲಿ ಲೇಬರ್ ಪಕ್ಷ ಬಹುಮತದೊಡನೆ ಅಧಿಕಾರಕ್ಕೆ

ಬ್ರಿಟನ್ನಿನಲ್ಲಿ ಆಳುವ ಕನ್ಸರ್ವೇಟಿವ್ ಪಕ್ಷವು 14 ವರುಷಗಳ ಬಳಿಕ ಅಧಿಕಾರ ಕಳೆದುಕೊಂಡುದಲ್ಲದೆ ಇತಿಹಾಸದಲ್ಲೇ ಅತಿ ಕಡಿಮೆ ಸ್ಥಾನಗಳನ್ನು ಪಡೆಯಿತು. ಲೇಬರ್ ಪಕ್ಷದ 61ರ ಕೀರ್ ಸ್ಟಾರ್ಮರ್ ಹೊಸ ಪ್ರಧಾನಿ. ಅವರು ಗೆಲುವಿನ ಬಳಿಕ ಕಿಂಗ್ ಚಾರ್ಲ್ಸ್ 3 ಅವರನ್ನು ಭೇಟಿಯಾಗಿ ಸರಕಾರ ರಚನೆಯ ಹಕ್ಕು ಮಂಡಿಸಿದರು. ಲೇಬರ್ ಪಕ್ಷವು 412, ಕನ್ಸರ್ವೇಟಿವ್ ಪಕ್ಷ 121, ಲಿಬರಲ್ ಡೆಮೊಕ್ರಟಿಕ್ ಪಕ್ಷ 71, ಇತರ ಸಣ್ಣ ಪಕ್ಷಗಳು 33 ಮತ್ತು ಪಕ್ಷೇತರರು 11 ಮಂದಿ 650 ಬಲದ

ಮಂಗಳೂರು: ಜುಲೈ 7ರಂದು ಸರಳ ಕಾನೂನುಗಳ ಅರಿವಿಲ್ಲದೆ ಮೋಸ ಹೋಗದಿರಿ ಎಂಬ ಕಾನೂನು ಮಾಹಿತಿ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ

ಮಂಗಳೂರು: ಖ್ಯಾತ ವಕೀಲರು ಮತ್ತು ನೋಟರಿ ಆಗಿರುವ ಮೂಡಬಿದಿರೆ ಚೌಟರ ಅರಮನೆಯ ಡಾ.ಅಕ್ಷತಾ ಆದರ್ಶ್ ಅವರು ಬರೆದ ಸರಳ ಕಾನೂನುಗಳ ಅರಿವಿಲ್ಲದೆ ಮೋಸ ಹೋಗದಿರಿ ಎಂಬ ಕಾನೂನು ಮಾಹಿತಿ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮವು ಜುಲೈ 7ರಂದು ನಗರದ ಎಂ.ಜಿ ರಸ್ತೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ. ಜುಲೈ 7ರಂದು ಬೆಳಿಗ್ಗೆ 10.15ಕ್ಕೆ ಸರಿಯಾಗಿ ನಡೆಯಲಿರುವ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ

35ನೇ ಹಂತದ ಗೆಲುವು ಸಾಧಿಸಿ ದಾಖಲೆ ಬರೆದ ಕ್ಯಾವೆಂಡಿಶ್ ಬೆಲ್ಜಿಯಂನ ಲೆಜೆಂಡ್ ಎಡ್ಡಿ ಮೆರೆಕ್ಸ್ ದಾಖಲೆ ಪತನ

ಬ್ರಿಟನ್ನಿನ ಮಾರ್ಕ್ ಕ್ಯಾವೆಂಡಿಶ್ ಅವರು ಟೂರ್ ಡೆ ಫ್ರಾನ್ಸ್ ತುಳಿಬಂಡಿ ಸೈಕ್ಲಿಂಗ್‌ನಲ್ಲಿ 35ನೇ ಹಂತದ ಗೆಲುವು ಸಾಧಿಸಿ ದಾಖಲೆ ಬರೆದರು. 2021ರಲ್ಲಿ ಕ್ಯಾವೆಂಡಿಶ್ ಅವರು 34ನೇ ಹಂತ ಗೆಲುವು ಸಾಧಿಸಿ ಸೈಕ್ಲಿಂಗ್ ದಂತ ಕತೆ ಬೆಲ್ಜಿಯಂನ ಎಡ್ಡಿ ಮೆರೆಕ್ಸ್ ದಾಖಲೆ ಸರಿಗಟ್ಟಿದ್ದರು. ಈಗ ಮುರಿದು ದಾಖಲೆ ಬರೆದಿದ್ದಾರೆ. 5ನೇ ಹಂತದ ಸ್ಪ್ರಿಂಟ್ ಸೈಕ್ಲಿಂಗ್‌ನಲ್ಲಿ 69.4 ಕಿಲೋಮೀಟರ್ ವೇಗದಲ್ಲಿ ಬಂದ ಕ್ಯಾವೆಂಡಿಶ್ ಸೈಂಟ್ ವಲ್ಬಾಸ್‌ನಲ್ಲಿ ಕೈಯೆತ್ತಿ ತನ್ನ ದಾಖಲೆ

ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲದ ಪ್ರಮಾಣ ವಚನ ಕಾರ್ಯಕ್ರಮ

ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಪುತ್ತೂರು ಇಲ್ಲಿ 2024 2025 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲದ ಪ್ರಮಾಣ ವಚನ ಸ್ವೀಕಾರ ಮತ್ತು ಉದ್ಘಾಟನಾ ಸಮಾರಂಭವು ಶಾಲಾ ಸಭಾಂಗಣದಲ್ಲಿ ನೆರವೇರಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪುತ್ತೂರು ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ರವರು ಮಾತನಾಡಿ ಇಂದಿನ ಎಳೆಯರು ನಾಡಿನ ನಾಳಿನ ನಾಯಕರು. ಆ ನಿಟ್ಟಿನಲ್ಲಿ ಬಾಲ್ಯದಲ್ಲಿಯೇ ಅವರಿಗೆ ಪ್ರಜಾಪ್ರಭುತ್ವದ ನೈಜ

ಬೆಳ್ತಂಗಡಿ ತಾಲೂಕು ಕಚೇರಿಗೆ ಶಾಸಕ ಹರೀಶ್ ಪೂಂಜಾ ದಿಢೀರ್ ದಾಳಿ

ಬೆಳ್ತಂಗಡಿ ತಾಲೂಕು ಕಚೇರಿಗೆ ಶಾಸಕ ಹರೀಶ್ ಪೂಂಜಾ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಾಲೂಕು ಕಚೇರಿ ಅಧಿಕಾರಿಗಳು ಕಡತ ವಿಲೇವಾರಿ ಮಾಡಲು ಜನರನ್ನು ಸತಾಯಿಸುತ್ತಿದ್ದರು. ಆದ್ದರಿಂದ ಶಾಸಕರು ಕಚೇರಿ ದಿಢೀರ್ ಅಂತಾ ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ತಾಲೂಕು ಕಚೇರಿಗೆ ಆಗಮಿಸಿದ ಶಾಸಕ ಹರೀಶ್ ಪೂಂಜಾ, ಜನರ ಸಮಸ್ಯೆ ಆಲಿಸಿದ ಬಳಿಕ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಸೇರಿದಂತೆ ಇತರೆ ಅಧಿಕಾರಿಗಳನ್ನ ತರಾಟೆಗೆ

ಗಾಯಕ, ಸಮಾಜ ಸೇವಕ ಯುವರಾಜ್ ದೇವಾಡಿಗ ಇನ್ನಿಲ್ಲ

ದುಬೈಯ ಯುವ ಗಾಯಕ, ಸಮಾಜ ಸೇವಕ ಯುವರಾಜ್ ಕೆ ದೇವಾಡಿಗ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಯುವರಾಜ್ ಕೆ ದೇವಾಡಿಗ ಅವರು ಮಂಗಳೂರಿನ ಮಂದಾರಬೈಲ್ ನ ನಿವಾಸಿಯಾಗಿದ್ದು ಶಾರ್ಜದ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 2 ವರ್ಷಗಳ ಹಿಂದೆ ಇವರ ವಿವಾಹವು ಬಿಜೈ ಕಾಪಿಕಾಡಿನ ಪ್ರತಿಮಾ ಎಂಬುವವರ ಜೊತೆ ನಡೆದಿತ್ತು. ಯೌಟ್ಯೂಬ್ ಮತ್ತು ಫೇಸ್ಬುಕ್‌ನಲ್ಲಿ ಸ್ವರಬ್ರಾಮ್ಹರೀ ಎಂಬ ಚಾನೆಲ್ ಮುಖಾಂತರ ತಮ್ಮ ಹಾಡುಗಾರಿಕೆಯಿಂದ ಹಲವಾರು ಅಭಿಮಾನಿಗಳನ್ನು

ಅಕ್ರಮ ಗಣಿಗಾರಿಕೆಗೂ ನನಗೆ ಯಾವುದೇ ಸಂಬಂಧವಿಲ್ಲ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿಧರ್ ಶೆಟ್ಟಿ ಹೇಳಿಕೆ

ಬೆಳ್ತಂಗಡಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿಧರ ಶೆಟ್ಟಿ ಹೇಳಿದರು. ಅವರು ಬೆಳ್ತಂಗಡಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾನು ಆ ದಿನ ಕಲೆಂಜದಲ್ಲಿ ಇದ್ದು ನಮ್ಮ ಮನೆಗೆ ಪೊಲೀಸರು ಬಂದಾಗಲೇ ವಿಷಯ ತಿಳಿದಿದ್ದು ಕೂಡಲೇ ಪೊಲೀಸರಿಗೆ ಹಾಗೂ ತಹಶೀಲ್ದಾರರಿಗೆ ವಿಷಯ ಮನದಟ್ಟು ಮಾಡಿದ್ದೇನೆ. ಆದರೂ ಕೂಡ ರಾಜಕೀಯ ಒತ್ತಡದಿಂದ ನನ್ನ ಮೇಲೆ ಸುಳ್ಳು ದೂರು ದಾಖಲು ಮಾಡಲಾಗಿದೆ. ಇದಕ್ಕೆಲ್ಲ

ಬೆಳ್ತಂಗಡಿಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ರಾಹುಲ್ ಗಾಂಧಿಯವರಿಂದ ಹಿಂದೂ ಸಮಾಜಕ್ಕೆ ಅಪಮಾನ

ಲೋಕ ಸಭೆಯಲ್ಲಿ ರಾಹುಲ್ ಗಾಂಧಿ ಏನು ಮಾತಾಡಬೇಕು ಅದನ್ನು ಮಾತನಾಡದೆ ಸಮಸ್ತ ಹಿಂದೂ ಸಮಾಜವನ್ನು ಅಪಮಾನ ಮಾಡಿದ್ದಾರೆ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು. ಅವರು ಬೆಳ್ತಂಗಡಿಯಲ್ಲಿ ರಾಜ್ಯ ಸರ್ಕಾರದ ಬೆಲೆ ಏರಿಕೆ ಬಗ್ಗೆ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ ಹಾಲಿನ ದರ ಏರಿಕೆಯಾಗಿದ್ದು, ಬಡವರ ಮಕ್ಕಳ ಹೊಟ್ಟೆಗೆ ಹೊಡೆದಿದ್ದಾರೆ, ಇಡೀ ಕಾಂಗ್ರೆಸ್ ಪಕ್ಷದ ಶಾಸಕರು ಕಮಿಷನ್