Home ಕರಾವಳಿ Archive by category ಮಂಗಳೂರು (Page 72)

ಅನರ್ಕಲಿ ತುಳು ಸಿನಿಮಾದ “ನಾಲ್ ಪದಕುಲು” ಹಾಡು ಬಿಡುಗಡೆ

ಲಕುಮಿ ಸಿನಿ ಕ್ರಿಯೇಷನ್ಸ್‌ನ ಅನರ್ಕಲಿ ತುಳು ಸಿನಿಮಾದ ನಾಲ್ ಪದಕುಲು ಶೀರ್ಷಿಕೆಯ ಹಾಡು ಜಾಂಕರ್ ಮ್ಯೂಸಿಕ್ ಕರಾವಳಿ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿತು. ಅನರ್ಕಲಿ ತುಳು ಸಿನಿಮಾ ತುಳುನಾಡಿನ ವೇಷ, ಸಂಸ್ಕೃತಿಯನ್ನು ಆಧರಿಸಿ ಹೆಣೆದ ಕಥೆಯಾಗಿದೆ. ಕಟೀಲು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆದಿದ್ದು, ಇದರಲ್ಲಿ ನಾಲ್ಕು ಹಾಡುಗಳಿವೆ. ಅದರಲ್ಲಿ ನಾಲ್

ದೇರಳಕಟ್ಟೆ: ನಿಟ್ಟೆ ಇಮೇಜಿಂಗ್ ಟೆಕ್ನಾಲಜಿಯ 3ನೇ ರಾಷ್ಟ್ರೀಯ ಸಮ್ಮೇಳನ: ಎನ್‌ಸಿಎನ್‌ಐಟಿ-2024

ದೇರಳಕಟ್ಟೆ: ನಿಟ್ಟೆ ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ಆಂಡ್ ರೇಡಿಯಾಲಜಿ ವಿಭಾಗದ ಆಶ್ರಯದಲ್ಲಿ ಎನ್‌ಸಿಎನ್ ಐಟಿ-2024 ನಿಟ್ಟೆ ಇಮೇಜಿಂಗ್ ಟೆಕ್ನಾಲಜಿ ಇದರ ಮೂರನೇ ರಾಷ್ಟ್ರೀಯ ಸಮ್ಮೇಳನ ಕ್ಷೇಮ ಆಡಿಟೋರಿಯಂನಲ್ಲಿ ನಡೆಯಿತು. ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿ.ವಿ.ಯ ಉಪಕುಲಾಧಿಪತಿ  ವಿಶಾಲ್ ಹೆಗ್ಡೆ ಎನ್ ಸಿ ಎನ್ ಐಟಿ 2024  ನಿಟ್ಟೆ ಇಮೇಜಿಂಗ್ ಟೆಕ್ನಾಲಜಿ ಇದರ ಮೂರನೇ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿದರು.ಬಳಿಕ

ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ

ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ನೂತನ ಪಧಾದಿಕಾರಿಗಳ ಪದಗ್ರಹಣ ಸಮಾರಂಭ ಕಾವೂರಿನಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷ್ಷ ಸತೀಶ್ ಕುಂಪಲ ಅವರು, ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೩ ಲಕ್ಷಕ್ಕೂ ಅಂಕ ಮತಗಳಿಂದ ಜಯ ಗಳಿಸುವುದು ನಿಶ್ಚಿತ. ಇದಕ್ಕೆ ಕಾರ್ಯಕರ್ತರ ಪರಿಶ್ರಮದಿಂದ ಸಾಧ್ಯವಾಗುತ್ತದೆ ಎಂಬ ನಂಬಿಕೆಯಿದೆ ಎಂದರು. ಬಳಿಕ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್. ವೈ.

ಬಾರದ ಲೋಕಕ್ಕೆ ಮನೋಹರ ಪ್ರಸಾದ ಪಯಣ..

ಹಿರಿಯ ಪತ್ರಕರ್ತ, ಖ್ಯಾತ ನಿರೂಪಕ, ಮನೋಹರ ಪ್ರಸಾದ್ ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನವಭಾರತದಲ್ಲಿ ಪತ್ರಿಕಾರಂಗ ಪ್ರವೇಶಿಸಿದ್ದ ಅವರು, 1984ರಲ್ಲಿ ಉದಯವಾಣಿಯ ಮಂಗಳೂರು ವರದಿಗಾರರಾಗಿ ಪ್ರಸಿದ್ಧರಾದರು. ಆ ಬಳಿಕ ಪ್ರಧಾನ ವರದಿಗಾರರಾಗಿ, ಸುದ್ದಿ ವಿಭಾಗದ ಮುಖ್ಯಸ್ಥರಾಗಿ, ಸಹಾಯಕ ಸಂಪಾದಕರಾಗಿದ್ದರು. 2020ರಲ್ಲಿ ನಿವೃತ್ತಿ ಹೊಂದುವವರೆಗೆ 36ವರ್ಷ ಉದಯವಾಣಿ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದರು.

ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ

ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ಇನ್ವಿಕ್ತ ಕಾಮರ್ಸ್ ಅಸೋಸಿಯೇಷನ್ ಇದರ ವತಿಯಿಂದ ದ್ವಿತೀಯ ಮತ್ತು ತ್ರಿತೀಯ ಪದವಿ ವಿದ್ಯಾರ್ಥಿಗಳಿಗೆ “ಬ್ಯಾಂಕಿಂಗ್ ಹಾಗು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ” ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸ್ಮಾರ್ಟ್ ಕ್ಲಾಸ್ಸಸ್ ಅಕಾಡೆಮಿ ಇದರ ತರಬೇತುದಾರರಾದ ಡಾ.ಸರಸ್ವತಿಯವರು ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಹಾಗು ವಿವಿಧ ಸ್ಪರ್ಧಾತ್ಮಕ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಎಂ. ಬಿ. ಎ ಪದವಿ ಪರೀಕ್ಷೆಯಲ್ಲಿ ಪ್ರಥಮ Rank ಪಡೆದ ಉಷಾ ನಾಯಕ್

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಕಳೆದ 2023 ರ ಸಾಲಿನಲ್ಲಿ ನಡೆಸಿದ ಅಂತಿಮ ಎಂ. ಬಿ. ಎ ಪರೀಕ್ಷೆಯಲ್ಲಿ ಉಷಾ ನಾಯಕ್ ಇವರು ಪ್ರಥಮ Rank ಹಾಗೂ ನಗದು ಪುರಸ್ಕಾರವನ್ನು ಪಡೆದಿದ್ದಾರೆ.ಬಾಲ್ಯದಿಂದಲೂ ತಂದೆಯ ಆಸೆಯನ್ನು ನೆರವೇರಿಸ ಬೇಕೆಂಬ ಛಲ, ಸತತ ಪ್ರಯತ್ನ, ಆತ್ಮ ವಿಶ್ವಾಸ ಹೊಂದಿರುವ ಈಕೆ ನಗರದ ಕೆನರಾ ಕಾಲೇಜು ಹಾಗೂ ಸಂಧ್ಯಾ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ನಿರ್ವಹಣಾ ಶಾಸ್ತ್ರದ ಉಪನ್ಯಾಸಕಿಯಾಗಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.ಇವರು

ಮಕ್ಕಳ ಚೆಸ್ ಕಾರ್ನಿವಾಲ್ 2024 : ಗೊನ್ಝಾಗ ಶಾಲೆಗೆ ದ್ವಿತೀಯ ಸ್ಥಾನ

ಮಂಗಳೂರಿನ ಡೆರೆಕ್ ಚೆಸ್ ಸ್ಕೂಲ್ ಇವರು ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಮಂಗಳೂರು ಇಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಕ್ಕಳ ಚೆಸ್ ಕಾರ್ನಿವಾಲ್ 2024 ಚೆಸ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಗೊನ್ಝಾಗ ಶಾಲೆಯ 5ನೇ ತರಗತಿಯ ವಿಹಾನ್ ಆದರ್ಶ ಲೋಬೊ, 6ನೇ ತರಗತಿಯ ಝರಾ ಖಾಜಿ, 2ನೇ ತರಗತಿಯ ಮಾರ್ಕ್ ಬ್ಲೇಸಿಯಸ್ ಡಿ’ಸೋಜಾ ಮತ್ತು 2ನೇ ತರಗತಿಯ ಮಾನ್ವಿ ಸಾಯಿ ಕುಡ್ವ ಉತ್ತಮ ಸಾಧನೆಗೈದಿದ್ದಾರೆ. ಸಂಸ್ಥೆ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ

14 ಮಂದಿ ಜನಪದಿಯರಿಗೆ ಕರ್ನಾಟಕ ಜನಪದ ಪರಿಷತ್ ಪ್ರಶಸ್ತಿ

ಮಾರ್ಚ್ 1ರಿಂದ 3 ರವರೆಗೆ ನಡೆಯುವ ಜಾನಪದ ಕಡಲೊತ್ಸವ -2024 ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಂದ 14 ಮಂದಿ ವಿವಿಧ ಕ್ಷೇತ್ರದ ಜನಪದ ಕಲಾವಿದರು, ದೈವನರ್ತಕರು, ಜನಪದ ಸಂಘಟಕರು ಹಾಗೂ ನಾಟಿ ವೈದ್ಯರುಗಳನ್ನು ಗುರುತಿಸಿ ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಮಾರ್ಚ್ 2 ಮತ್ತು 3 ರಂದು ಸಂಜೆ ನಡೆಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಈ ಕೆಳಗಿನಂತಿದೆ.

ಮಂಗಳೂರು : ಫೆ.24ರಂದು ಕೆ.ಟಿ.ಗಟ್ಟಿ ಅವರಿಗೆ ನುಡಿ ನಮನ

ಮಂಗಳೂರು : ಇತ್ತೀಚೆಗೆ ನಿಧನರಾದ ಖ್ಯಾತ ಕಾದಂಬರಿಕಾರ , ಭಾಷಾ ತಜ್ಞ, ಶಿಕ್ಷಕ ಕೆ.ಟಿ.ಗಟ್ಟಿ ಅವರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ಫೆ.24 ರ ಶನಿವಾರ ಅಪರಾಹ್ನ ಗಂಟೆ 3.30ಕ್ಕೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ವೃತ್ತದ ಸಮೀಪ ಇರುವ ಮ್ಯಾಪ್ಸ್ ಕಾಲೇಜಿನಲ್ಲಿ ನಡೆಯಲಿದೆ.‌ಕೆ.ಟಿ.ಗಟ್ಟಿಯವರ ಅಭಿಮಾನಿಗಳು, ಸಾಹಿತ್ಯ, ಸಾಮಾಜಿಕ, ರಾಜಕೀಯ , ಶೈಕ್ಷಣಿಕ ಕ್ಷೇತ್ರದವರೆಲ್ಲರೂ ಜೊತೆಯಾಗಿ ಗೌರವಪೂರ್ಣ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತುಳು

ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ ಮಂಗಳೂರಿನ ಯುವಕರು

ಮಂಗಳೂರಿನ ಆರೂರು ಅರ್ಜುನ್ ರಾವ್ ಮತ್ತು ಸಹ-ಚಾಲಕ ಸತೀಶ್ ರಾಜಗೋಪಾಲ್ ಅವರು ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್ಸ್- 2023 ಆಗಿ ಹೊರಹೊಮ್ಮಿದರು. ಮಂಗಳೂರಿನ ಆರೂರು ಅರ್ಜುನ್ ರಾವ್ ಮತ್ತು ಸಹ-ಚಾಲಕ ಸತೀಶ್ ರಾಜಗೋಪಾಲ್ ಅವರು ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾದಿಂದ ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್ಸ್ – 2023 ಕಿರೀಟವನ್ನು ಪಡೆದರು.ಈ ಮಟ್ಟದ ಮೋಟಾರ್‌ಸ್ಪೋರ್ಟ್‌ನಲ್ಲಿ ಮಂಗಳೂರಿನ ಯುವಕನೊಬ್ಬ ಚಾಲಕರ ವಿಭಾಗದಲ್ಲಿ