14 ಮಂದಿ ಜನಪದಿಯರಿಗೆ ಕರ್ನಾಟಕ ಜನಪದ ಪರಿಷತ್ ಪ್ರಶಸ್ತಿ

ಮಾರ್ಚ್ 1ರಿಂದ 3 ರವರೆಗೆ ನಡೆಯುವ ಜಾನಪದ ಕಡಲೊತ್ಸವ -2024 ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಂದ 14 ಮಂದಿ ವಿವಿಧ ಕ್ಷೇತ್ರದ ಜನಪದ ಕಲಾವಿದರು, ದೈವನರ್ತಕರು, ಜನಪದ ಸಂಘಟಕರು ಹಾಗೂ ನಾಟಿ ವೈದ್ಯರುಗಳನ್ನು ಗುರುತಿಸಿ ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಮಾರ್ಚ್ 2 ಮತ್ತು 3 ರಂದು ಸಂಜೆ ನಡೆಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಈ ಕೆಳಗಿನಂತಿದೆ.

ಶ್ರೀ ದೊಡ್ಡಣ್ಣ ಬರಮೇಲು ಸುಳ್ಯ ಜಾನಪದ ಕ್ರೀಡಾ ಸಂಘಟಕರು, ಶ್ರೀಮತಿ ಭವಾನಿ ಪೆರ್ಗಡೆ ತೊಕೆಮನೆ, ಶ್ರೀ ಎ.ಕೇಪು ಅಜಿಲ ಸುಳ್ಯ ಜಾನಪದ ಕಲಾವಿದ, ಸದಾನಂದ ನಾರಾವಿ ಜಾನಪದ ಸಾಹಿತಿ, ಶ್ರೀ ಬೇಬಿ ಪೂಜಾರಿ ಪಿಲ್ಯ ಬೆಳ್ತಂಗಡಿ ನಾಟಿ ವೈದ್ಯರು ,  ಶ್ರೀಮತಿ ಕರ್ಗಿಶೆಡ್ತಿ, ಅಳದಂಗಡಿ , ಮೇರಿ ಜೋನ್ಕಡಬ ಜಾನಪದ ಸಂಘಟಕಿ ಮತ್ತು ಕಲಾವಿದೆ, ಬೀಪಾತುಮ್ಮ ಆತೂರು ಕೊಯಿಲ ತುಳು ಬ್ಯಾರಿ ಜಾನಪದ ಕಲಾವಿದೆ ಮತ್ತು ನಾಟಿ ವೈದ್ಯರು, ಶ್ರೀಮತಿ ಅಪ್ಪಿಶೆಟ್ಟಿ ಕಿನ್ನಿಗೋಳಿ, ಕಿಟ್ಟ ಮಲೆಕುಡಿಯ ಜಾನಪದ ಕಲಾವಿದರು, ಮೈಮ್ ರಮೇಶ್ ಮಂಗಳೂರು, ಶ್ರೀಮತಿ ವೆಂಕಮ್ಮ ಈಶ್ವರಮಂಗಳ ನಾಟಿವೈದ್ಯ, ಕರಿಯ ಅಜಿಲ ಕಡ್ಯ ಪುತ್ತೂರು ದೈವನರ್ತಕ, ಉಗ್ಗಪ್ಪ ಪೂಜಾರಿ ಮೂಡಬಿದಿರಿ ಜನಪದ ಸಾಹಿತಿ ಮತ್ತು ಪಾಡ್ದನ ಕಲಾವಿದ ಮೊದಲಾದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

Related Posts

Leave a Reply

Your email address will not be published.