ಮಕ್ಕಳ ಚೆಸ್ ಕಾರ್ನಿವಾಲ್ 2024 : ಗೊನ್ಝಾಗ ಶಾಲೆಗೆ ದ್ವಿತೀಯ ಸ್ಥಾನ

ಮಂಗಳೂರಿನ ಡೆರೆಕ್ ಚೆಸ್ ಸ್ಕೂಲ್ ಇವರು ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಮಂಗಳೂರು ಇಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಕ್ಕಳ ಚೆಸ್ ಕಾರ್ನಿವಾಲ್ 2024 ಚೆಸ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಗೊನ್ಝಾಗ ಶಾಲೆಯ 5ನೇ ತರಗತಿಯ ವಿಹಾನ್ ಆದರ್ಶ ಲೋಬೊ, 6ನೇ ತರಗತಿಯ ಝರಾ ಖಾಜಿ, 2ನೇ ತರಗತಿಯ ಮಾರ್ಕ್ ಬ್ಲೇಸಿಯಸ್ ಡಿ’ಸೋಜಾ ಮತ್ತು 2ನೇ ತರಗತಿಯ ಮಾನ್ವಿ ಸಾಯಿ ಕುಡ್ವ ಉತ್ತಮ ಸಾಧನೆಗೈದಿದ್ದಾರೆ. ಸಂಸ್ಥೆ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ವಿಜೇತ ವಿದ್ಯಾರ್ಥಿಗಳನ್ನು ಅವರ ಸಾಧನೆಗಾಗಿ ಅಭಿನಂದಿಸಿದ್ದಾರೆ.
