Home ಕರಾವಳಿ Archive by category ಮೂಡಬಿದರೆ (Page 56)

ಅಶ್ವತ್ಥನಾರಾಯಣ ಹೇಳಿಕೆ ವಿರುದ್ಧ ಕ್ರಮಕ್ಕೆ ಮಾಜಿ ಸಚಿವ ಅಭಯಚಂದ್ರ ಜೈನ್ ಒತ್ತಾಯ

ಮೂಡುಬಿದಿರೆ: ಉನ್ನತ ಶಿಕ್ಷಣ ಸಚಿವ ಡಾ.ಸಿ ಅಶ್ವತ್ಥನಾರಾಯಣ ಅವರು ಮಂಡ್ಯದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಟಿಪ್ಪುಸುಲ್ತಾನನ್ನು ಹೊಡೆದು ಹಾಕಿದಂತೆ ಹೊಡೆದು ಹಾಕಬೇಕು ಎಂದಿರುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮತ್ತು ರಾಷ್ಟ್ರಪತಿಯವರು ಮುಖ್ಯಮಂತ್ರಿಗೆ ಸೂಚನೆ ನೀಡಬೇಕು ಎಂದು ಮಾಜಿ ಸಚಿವ

ಮೂಡುಬಿದಿರೆ : ಮಗುವಿನ ಮೇಲೆ ಬೀದಿನಾಯಿ ದಾಳಿ

ಮೂಡುಬಿದಿರೆಯ ಸಮುದಾಯ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದ ಬಳಿ ಇಂಜೆಕ್ಷನ್ ತೆಗೆದುಕೊಳ್ಳಲು ಕುರ್ಚಿಯಲ್ಲಿ ಕುಳಿತಿದ್ದ ಕೋಟೆಬಾಗಿಲಿನ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ.ಮಗುವಿನ ಕೆನ್ನೆ ಹಾಗೂ ಮುಖದ ಇತರ ಕಡೆ ನಾಯಿ ಕಚ್ಚಿ ಗಾಯಗೊಳಿಸಿದೆ. ಇಂಜೆಕ್ಷನ್ ಗಾಗಿ ಮಗುವನ್ನು ಕುರ್ಚಿಯಲ್ಲಿ ಕುಳ್ಳಿ ರಿಸಿ ಪಕ್ಕದಲ್ಲಿ ಮಗುವಿನ ತಂದೆ ಮಹಮ್ಮದ್ ಅಕ್ಬರ್ ಹಾಗೂ ತಾಯಿ ಇದ್ದರು. ಆಸ್ಪತ್ರೆಯ ಬಳಿ ಓಡಾಡುತ್ತಿದ್ದ

ಜೆಇಇ ಮೈನ್ ಪರೀಕ್ಷೆ : ಆಳ್ವಾಸ್ ಪಿ.ಯು ವಿದ್ಯಾರ್ಥಿಗಳಿಂದ ಸಾಧನೆ

ಮೂಡುಬಿದಿರೆ: ರಾಷ್ಟ್ರ ಮಟ್ಟದಲ್ಲಿ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಇಬ್ಬರು ವಿದ್ಯಾರ್ಥಿಗಳು 99 ಪರ್ಸೆಂಟೈಲ್‌ಗಿಂತ ಅಧಿಕ ಅಂಕ ಪಡೆದಿದ್ದಾರೆ. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಒಟ್ಟು 25 ಮಂದಿ 95 ಪರ್ಸೆಂಟೈಲ್‌ಗಿಂತ ಅಧಿಕ, 60 ಮಂದಿ 90 ಪರ್ಸೆಂಟೈಲ್‌ಗಿಂತ ಅಧಿಕ, ಹಾಗೂ 103 ಮಂದಿ 85 ಪರ್ಸೆಂಟೈಲ್‌ಗಿಂತ ಅಧಿಕ, ಫಲಿತಾಂಶ ಗಳಿಸಿದ್ದಾರೆ. ಶರತ್ ಸಂಗಮೆಶ್ ಬಿರದರ್ (99.23), ಪ್ರಧ್ಯುಮ್ನ ಭಟ್ (99.07), ಸಂಭವ್ ಪವರ್ (98.87),

ಸಿಎ ಫೌಂಡೇಶನ್ ಪರೀಕ್ಷೆ :ಉತ್ತಮ ಫಲಿತಾಂಶದೊಂದಿಗೆ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

ಮೂಡುಬಿದಿರೆ: ಸಿಎ ಫೌಂಡೇಶನ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಹಾಗೂ ಪದವಿ ಕಾಲೇಜು ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. ಆಳ್ವಾಸ್ ಶೇಕಡ 75.78 ಫಲಿತಾಂಶ ಗಳಿಸಿದೆ. ಆಳ್ವಾಸ್ ಕಾಲೇಜಿನ 128 ವಿದ್ಯಾರ್ಥಿಗಳಲ್ಲಿ 97 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದುಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿಗಳಾದ ಧನುಷ್, ಸನ್ನಿ ಲಾಯ್ಡ್ ಮಿರಾಂಡಾ, ಅಸ್ಟರ್ ಲೆನ್

ಮೂಡುಬಿದರೆ : ಧೂಳು ಬರುವ ಹಾಗೆ ವಾಹನ ಚಾಲಾಯಿಸಬೇಡ ಎಂದಾತನ ಕೊಲೆ

ಧೂಳು ಬರುವ ಹಾಗೆ ವಾಹನವನ್ನು ಚಲಾಯಿಸಬೇಡ ನಿಧಾನವಾಗಿ ಹೋಗೆಂದು ಹೇಳಿದ ವ್ಯಕ್ತಿಗೆ ಟಿಪ್ಪರ್ ಚಾಲಕ ರಾಡ್ ನಿಂದ ಹೊಡೆದು, ಟಿಪ್ಪರ್ ಚಲಾಯಿಸಿ ಕೊಲೆ ನಡೆಸಿದ್ದು, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಟೆಬಾಗಿಲಿನ ನಿವಾಸಿ ಫಯಾಝ್ (61) ಹತ್ಯೆಗೀಡಾದ ವ್ಯಕ್ತಿ. ಪಯಾಜ್ ಶುಕ್ರವಾರ ಕೋಟೆಬಾಗಿಲು ಮಸೀದಿಗೆ ನಮಾಝ್‍ಗೆ ತೆರಳುವ ಸಂಧರ್ಭ ಕೋಟೆಬಾಗಿಲು ನಿವಾಸಿ, ಟಿಪ್ಪರ್ ಚಾಲಕ ಹಾರೀಸ್ ಎಂಬಾತ ಅತೀ ವೇಗದಿಂದ ಟಿಪ್ಪರ್ ಚಲಾಯಿಸಿಕೊಂಡು

ಅಂತರ ವಿವಿ ಸೌತ್ ಈಸ್ಟ್ ಇಂಡಿಯಾ ವಲಯ ಯುವಜನ ಮೇಳ: ಆಳ್ವಾಸ್ ವಿದ್ಯಾರ್ಥಿಗಳ ಪಾರಮ್ಯ

ಮೂಡುಬಿದಿರೆ:ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯ ಹಾಗೂ ನವದೆಹಲಿ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿ ಆಶ್ರಯದಲ್ಲಿ ನಡೆದ 36ನೇ ಅಂತರ ವಿಶ್ವವಿದ್ಯಾಲಯ ಸೌತ್ ಈಸ್ಟ್ ಇಂಡಿಯಾ ವಲಯ ಯುವಜನ ಮೇಳದ ಏಕಾಂಕ ನಾಟಕ ಪ್ರಥಮ ಹಾಗೂ ಜಾನಪದ ನೃತ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಆಳ್ವಾಸ್ ಕಾಲೇಜು ರಾಷ್ಟç ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ಆಳ್ವಾಸ್ ಕಾಲೇಜು ತಂಡವು ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದೆ. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ

ಅನಾರೋಗ್ಯ ಪೀಡಿತರಿಗೆ ನೇತಾಜಿ ಬ್ರಿಗೇಡ್ ನಿಂದ ಸಹಾಯಹಸ್ತ

ಮೂಡುಬಿದಿರೆ : ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ಇದರ 10ನೇ ಸೇವಾ ಯೋಜನೆಯ ಅಂಗವಾಗಿ ಮೂಡುಬಿದಿರೆಯ ಶ್ರೀ ಪುರಾತನ ಆದಿಶಕ್ತಿ ಮಹಾದೇವಿ ದೇವಸ್ಥಾನದಲ್ಲಿಎರಡು ಕುಟುಂಬಗಳಿಗೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು”ರಕ್ತದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಮೂಡುಬಿದಿರೆಯ ಶ್ರೀಯಾ ಎಂಬ ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ಮತ್ತು ಬಂಟ್ವಾಳದಲ್ಲಿ ಪುಟಾಣಿ ಮಕ್ಕಳಾದ ರಶ್ಮಿತ್ ಹಾಗೂ ಶ್ರದ್ಧಾ ಎಂಬುವರ ಶ್ರದ್ಧಾಶ್ರಯ ಮನೆ ನಿರ್ಮಾಣಕ್ಕೆ” ತಲಾ

ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್(ರಿ.) ಮಿಜಾರು. ದ.ಕ ಕರ್ನಾಟಕ : ತುರ್ತು ಸೇವಾ ಯೋಜನೆ ಹಸ್ತಾಂತರ

ಬಂಟ್ವಾಳ ತಾಲೂಕಿನ ಮಡವು ನಿವಾಸಿಯಾಗಿರುವ ಯಾದವ ಪೂಜಾರಿ ಇವರಿಗೆ ಅಪಘಾತವಾಗಿ ಕೈ ಹಾಗೂ ಹೊಟ್ಟೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಈಗ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ(ICU) ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸೆಗೆ ನಮ್ಮ ತಂಡದಿಂದ 10,000/- ರೂಗಳ ಚೆಕ್ಕ್ ನ್ನುಶ್ರೀ ಗೋಪಾಲಕೃಷ್ಣ ದೇವಸ್ಥಾನ ಪುಂಜಾಲಕಟ್ಟೆ ಇಲ್ಲಿ ದೇವರ ಸನ್ನಿಧಿಯಲ್ಲಿ ಯಾದವ ಇವರ ಕುಟುಂಬದ ಪರವಾಗಿ ಸ್ವರ್ಣ ಸಂಜೀವಿನಿ ಮಡವು ತಂಡದ ಸ್ಥಾಪಕರಾದ ಸಚಿನ್ ಸುವರ್ಣ

ಆಳ್ವಾಸ್‌ನಲ್ಲಿ ಗಣರಾಜೋತ್ಸವ ಸಂಭ್ರಮ, ತ್ರಿವರ್ಣದಲ್ಲಿ ಮೂಡಿದ `ಇಂಡಿಯಾ’

ಮೂಡುಬಿದಿರೆ: 74ನೇ ಗಣರಾಜ್ಯೊತ್ಸವ ಪ್ರಯುಕ್ತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಪುತ್ತಿಗೆ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್.ವಿನಯ ಹೆಗ್ಡೆ ಧ್ವಜಾರೋಹಣಗೈದರು. ನಂತರ ಮಾತನಾಡಿದ ಅವರು ನಮ್ಮ ದೇಶದಲ್ಲಿ ಹಲವು ತಿದ್ದುಪಡಿಗಳು ಶಾಸಕಾಂಗದ ಸರಳ ಬಹುಮತದಲ್ಲಿ ಅಂಗೀಕೃತಗೊಳ್ಳುತ್ತಿವೆ. ಆ ತಿದ್ದುಪಡಿಗಳೂ ರಾಜಕೀಯ ಪಕ್ಷಗಳ ಉದ್ದೇಶ ಈಡೇರಿಕೆಗಾಗಿ ನಡೆಯುತ್ತಿವೆ. ಹೀಗಾಗಿ, ಅತ್ಯುತ್ತಮ

ಮುಂಡ್ಕೂರು : ಕಾರಿನೊಳಗಡೆ ಪೆಟ್ರೋಲ್ ಸುರಿದು ವ್ಯಕ್ತಿ ಆತ್ಮಹತ್ಯೆ

ಮುಂಡ್ಕೂರು ಗ್ರಾಮದ ಸಚ್ಚರೀಪೇಟೆ ಕುದ್ರೋಟ್ಟುವಿನಲ್ಲಿ ಕಾರಿನೊಳಗೆ ಪೆಟ್ರೋಲ್ ಸುರಿದು ವ್ಯಕ್ತಿ ಆತ್ಮಹತ್ಯೆ . ಕಾರಿನೊಳಗೆ ಪೆಟ್ರೋಲ್ ಸುರಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚರೀಪೇಟೆ ಕುದ್ರುಟ್ಟು ಎಂಬಲ್ಲಿ ನಡೆದಿದೆ.ಮುಂಡ್ಕೂರು ಗ್ರಾಮದ ಸಚ್ಚರೀ ಪೇಟೆ ಕುದ್ರುಟ್ಟು ನಿವಾಸಿ ಕೃಷ್ಣ ಸಫಲಿಗ 46 ವರ್ಷ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದು ತನ್ನ ಮಾರುತಿ ಒಮಿನಿ ಕಾರಿನ ಒಳಗೆ