ಮೂಡುಬಿದಿರೆ: ಆಳ್ವಾಸ್ ಆಂಗ್ಲಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ವಿರಾಟ್ ಕೃಷ್ಣ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ಸೂಚನೆಯಂತೆ ಕಬ್,ಬುಲ್ ಬುಲ್,ಸ್ಕೌಟ್ಸ್, ಗೈಡ್ಸ್, ರೋವರ್ಸ್,ರೇಂಜರ್ಸ್ ವಿದ್ಯಾರ್ಥಿಗಳಿಗೆ ಆಜಾದಿ ಕಾ ಅಮೃತ್ ಮಹೋತ್ಸವ ಎಂಬ ಶೀರ್ಷಿಕೆಯಲ್ಲಿ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ
ಮೂಡುಬಿದಿರೆ: ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪಿಯು ಕಾಲೇಜಿನ ಮನೋಜ್ ಎನ್ 690 ಅಂಕ ಪಡೆಯುವ ಮೂಲಕ ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 54ನೇ ರ್ಯಾಂಕ್ ಗಳಿಸಿದ್ದಾರೆ. ರಾಹುಲ್ ಜಿ.ಪಾಟೀಲ್ 39ನೇ ರ್ಯಾಂಕ್ ಹಾಗೂ ನರಸೇಗೌಡ ಬಿ.ಎಂ 85ನೇ ರ್ಯಾಂಕ್ ಗಳಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 600 ಕ್ಕಿಂತ ಅಧಿಕ ಅಂಕಗಳನ್ನ 31
ಮೂಡುಬಿದಿರೆ: ಮಾರೂರು ಗ್ರಾಮದಲ್ಲಿ 36 ಫಲಾನುಭವಿಗಳ ಪೈಕಿ 30 ಫಲಾನುಭವಿಗಳಿಗೆ ನಿವೇಶನ ಹಂಚಿಕೆಯಾಗಿ ಉಳಿದ 6 ಫಲಾನುಭವಿಗಳ ಅರ್ಜಿಯನ್ನು ತಡೆಹಿಡಿದ ಮಂಗಳೂರಿನ ಹೌಸಿಂಗ್ ಕನ್ಸಲ್ಟೆಂಟ್ ಅಧಿಕಾರಿ ಗಿರೀಶ್ ಅವರನ್ನು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡು ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಿಕೊಡುವಂತೆ ಸೂಚಿಸಿದರಲ್ಲದೆ ಈ ವಿಷಯವನ್ನು ನೀವು ಕೂಡ ಫಾಲೊಅಪ್ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಇಂದು ಅವರಿಗೆ
ಮೂಡುಬಿದಿರೆಯ ನಿತ್ಯ ಸಹಾಯ ಮಾತಾ ದೇವಾಲಯ ಗಂಟಾಲ್ ಕಟ್ಟೆ ಇಲ್ಲಿ ಮೊಂತಿ ಫೆಸ್ತ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಚರ್ಚಿನ ಧರ್ಮಗುರು ರೆ/ಫಾ ರೊನಾಲ್ಡ್ ಡಿ’ಸೋಜಾ ಹಾಗೂ ಅತಿಥಿ ಧರ್ಮಗುರು ರಾಕೇಶ್ ಅವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಹಬ್ಬದ ಸಂದೇಶವನ್ನು ನೀಡಿದರು. ನಂತರ ಮನೆ ಮನೆಗೆ ಭತ್ತವನ್ನು ನೀಡಲಾಯಿತು. ಧರ್ಮಗುರು ರಾಕೇಶ್ ಮಥಾಯಿಸ್ ಭಾಗವಹಿಸಿದ್ದರು.
ಮೂಡುಬಿದಿರೆ : ತಾಲೂಕಿನ ವಾಲ್ಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ವಾಲ್ಪಾಡಿ ಗ್ರಾಮದಲ್ಲಿ ಶ್ರೀ ರಾಜಂದೈವ ಮತ್ತು ಬ್ರಹ್ಮ ಬೈದರ್ಕಳ ದೈವಸ್ಥಾನ ಇಲ್ಲಿ ಮಂಗಳವಾರ ಕೊಡಮಣಿತ್ತಾಯ ಮತ್ತು ಕುಕ್ಕಿನಂತ್ತಾಯ ದೈವಗಳಿಗೆ ಸೋಣದ ಕೋಲ ನಡೆಯಿತು. ಸುಮಾರು 105 ವರ್ಷಗಳ ಇತಿಹಾಸವಿರುವ ಈ ದೈವಸ್ಥಾನವನ್ನು ಏಳ್ನಾಡು ಗುತ್ತಿನವರು ಕಟ್ಟಿ ಬೆಳೆಸಿದ್ದರು. ನಂತರ ನಾಗಣ್ಣ ಹೆಗ್ಡೆ ಅವರ ಅವರ ನೇತೃತ್ವದಲ್ಲಿ ಪುನರ್ ನಿರ್ಮಾಣಗೊಂಡಿದ್ದು ಕಳೆದ 10 ವರ್ಷಗಳಿಂದ ಇಲ್ಲಿ ಸೋಣದ ಕೋಲ
ಮೂಡುಬಿದಿರೆ : ಪ್ರತಿಯೊಬ್ಬ ಮಗುವಿನಲ್ಲೂ ಅದರದ್ದೇ ಆದ ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಹೊರಗೆಳೆಯುವ ಪ್ರಯತ್ನವನ್ನು ಶಿಕ್ಷಕರು ಮಾಡಬೇಕಾಗಿದೆ. ನಮ್ಮ ಉಸಿರು ಇರುವವರೆಗೆ ನಾವು ವಿದ್ಯಾರ್ಥಿಗಳೇ. ಹಾಗಾಗಿ ನಾವು ನಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿದಾಗ ಸಮಾಜಕ್ಕೆ ಉತ್ತಮವಾದ ಕೊಡುಗೆಯನ್ನು ನೀಡಿದಂತ್ತಾಗುತ್ತದೆ. ಅಲ್ಲದೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಿಂದ ರಾಷ್ಟ್ರೀಯತೆಯ ಅರಿವು ಮೂಡಲು ಸಾಧ್ಯ ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್
ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಉತ್ತಮ ಆರೋಗ್ಯದ ದೃಷ್ಠಿಯಿಂದಲೋ ಅಥವಾ ಆರ್ಥಿಕವಾಗಿ ಹಿಂದುಳಿದುದರಿಂದ ಗ್ಲಾಸ್ ಅಥವಾ ಸ್ಟೀಲ್ ಲೋಟಗಳನ್ನು ತೆಗೆದುಕೊಳ್ಳಲು ಅಸಹಾಯಕರಾಗಿರುವುದರಿಂದಲೋ ಏನೋ ತೆಂಗಿನ ಗೆರಟೆಯಲ್ಲಿಯೇ ಚಹಾ, ನೀರು ಅಥವಾ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದರು. ನಂತರದ ದಿನಗಳಲ್ಲಿ ನಾವು ಅಭಿವೃದ್ಧಿ ಹೊಂದುತ್ತಿದ್ದಂತೆ ಪ್ಲಾಸ್ಟಿಕ್ ಲೋಟ, ಸ್ಟೀಲ್ ಲೋಟ ಮತ್ತು ಪೇಪರ್ ಲೋಟಗಳಿಗೆ ಮಾರು ಹೋದೆವು. ಆದರೆ ಇದೀಗ ಮತ್ತೆ ನಾವು ಹಿಂದಿನ ಕಾಲದತ್ತ ಮುಖ
ಮೂಡುಬಿದಿರೆ: ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ಬಡಗ ಮಿಜಾರು ಗ್ರಾಮದ ಬೇರಿಂಜೆಯ ಮನೆಯೊಂದಕ್ಕೆ ಮುಸುಕುಧಾರಿ ವ್ಯಕ್ತಿಗಳಬ್ಬರು ನುಗ್ಗಿ ತಲವಾರು ಝಳಪಿಸಿ ಮಹಿಳೆಯ ಕತ್ತಿನಲ್ಲಿದ್ದ ಸುಮಾರು 5 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ದರೋಡೆ ಮಾಡಿ ಪರಾರಿಯಾದ ಘಟನೆ ನಡೆದಿದೆ. ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ದುಡಿಯುತ್ತಿರುವ ಕಮಲ ಶೆಟ್ಟಿ ದರೋಡೆಗೊಳಗಾದ ಮಹಿಳೆ ಇವರ ಇಬ್ಬರು ಗಂಡು ಮಕ್ಕಳು ಮೃತಪಟ್ಟಿದ್ದು, ಪತಿ ಕಳೆದ ವರ್ಷ ನಿಧನ ಹೊಂದಿದ್ದರು.
ಮೂಡುಬಿದಿರೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್ ಉಪನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮೂಡುಬಿದಿರೆ ಮತ್ತು ಸಂತ ಥೋಮಸ್ ವಿದ್ಯಾ ಸಂಸ್ಥೆ ಆಲಂಗಾರು ಇವುಗಳ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ವಾಅಬಾಲ್ ಪಂದ್ಯಾಟವು ಆಲಂಗಾರು ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಿತು. ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ದೀಪ ಬೆಳಗಿಸಿ, ವಾಲಿಬಾಲ್‍ನ್ನು ರಿಬ್ಬನ್‍ನಿಂದ
ಮೂಡುಬಿದಿರೆ :ಪುರಸಭಾ ವ್ಯಾಪ್ತಿಯಲ್ಲಿ ಕಸದ ರಾಶಿ ಬೀಳುವುದನ್ನು ತಪ್ಪಿಸಲು ಹಾಗೂ ಯಾರು ಕಸವನ್ನು ತಂದು ಸುರಿಯುತ್ತಾರೆ ಎಂಬುದನ್ನು ಪತ್ತೆ ಹಚ್ಚಲು ಪುರಸಭೆಯ ವತಿಯಿಂದ ವಿವಿಧ ಕಡೆಗಳಲ್ಲಿ ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಆದರೆ ಸಿಸಿ ಕೆಮರಾದ ಬುಡದಲ್ಲಿಯೇ ಕಸದ ರಾಶಿ ತುಂಬುತ್ತಿದೆ. ಇದಕ್ಕೆ ಏನು ಕ್ರಮ ಕೈಗೊಳ್ಳುತ್ತೀರಿ ಈವರೆಗೆ ಯಾವ ಕ್ರಮವನ್ನು ಕೈಗೊಂಡಿದ್ದೀರಿ ಸಿಸಿ ಕೆಮರಾದ ಬಆಯೇ ಕಸದ ರಾಶಿ ಬೀಳುವುದಾದರೆ ಸಿಸಿ ಕೆಮರಾದ ಅಗತ್ಯವಿದೆಯೇ. ಪರಿಸರ




























