Home Archive by category ಕರಾವಳಿ (Page 27)

ಪುತ್ತೂರು: ಕರ್ನಾಟಕ ಪೊಲೀಸ್ ರನ್: ಮಾದಕ ದ್ರವ್ಯಗಳ ದುಷ್ಪರಿಣಾಮದ ಜಾಗೃತಿ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವದ ಅಂಗವಾಗಿ ಕರ್ನಾಟಕ ಪೊಲೀಸ್ ರನ್ – 2024 ಕಾರ್ಯಕ್ರಮಕ್ಕೆ ಪುತ್ತೂರಿನಲ್ಲಿ ದರ್ಬೆ ಬೈಪಾಸ್ ವೃತ್ತದಿಂದ ನಗರ ಪೊಲೀಸ್ ಠಾಣೆಯ ತನಕದ ಪೊಲೀಸ್ ರನ್ ಗೆ ದ.ಕ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ ಬಿ ರಿಷ್ಯಂತ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ

ಮಂಗಳೂರು: ವಿವಿಧ ಫ್ಲೇವರ್‌ ಗಳ ಟೇಸ್ಟಿ ಐಸ್‌ ಕ್ರೀಂಗಳಿಗೆ ಪ್ರಸಿದ್ಧಿ ಪಡೆದ ಅಪ್ಸರಾ

ಅಪ್ಸರಾ ಐಸ್‌ಕ್ರೀಂ ವಿವಿಧ ಫ್ಲೇವರ್‌ಗಳ ಮೂಲಕ ಗ್ರಾಹಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ಮಂಗಳೂರಿನಲ್ಲಿ ಶಾಖೆಗಳನ್ನು ತೆರೆಯುವ ಮೂಲಕ ಜನಪ್ರಸಿದ್ಧಿಯನ್ನು ಪಡೆಯುತ್ತಿದೆ. ಅಪ್ಸಾರಾ ಐಸ್‌ಕ್ರೀಂ 1971 ರಲ್ಲಿ ದಕ್ಷಿಣ ಮುಂಬೈನ ವಾಲ್ಕೇಶ್ವರದಲ್ಲಿ ತನ್ನ ಮೊದಲ ಪಯಾಣವನ್ನು ಆರಂಭಿಸಿದ್ದು, ನಂತರ ದಿನಗಳಲ್ಲಿ ಅಂಗಡಿ, ಮದುವೆ ಕಾರ್ಯಕ್ರಮಗಳು ಮತ್ತು ಇತರ ಕಾರ್ಯಕ್ರಮಗಳಿಗೆ ಮಾರಾಟ ಮಾಡುವ ಮೂಲಕ ತನ್ನ ವ್ಯಾಪಾರ ವೃದ್ಧಿಯನ್ನು ಮುಂದುವರೆಸಿದರು. ಮುಂಬೈನ

ತೆಂಗಿನಕಾಯಿ ಸಂಗ್ರಹಿಸಲು ನದಿಗೆ ಹೋಗಿದ್ದ ವ್ಯಕ್ತಿ ಸಾವು

ಬಜಪೆ : ನಂದಿನಿ ನದಿಯಲ್ಲಿ ತೆಂಗಿನಕಾಯಿ ಸಂಗ್ರಹಿಸಲು ಹೋಗಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ನದಿಗೆ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಕಟೀಲು ಸಮೀಪದ ಕಲ್ಲಕುಮೇರು ಎಂಬಲ್ಲಿ ನಡೆದಿದೆ‌. ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಗ್ರಾಮದ ನಂದಾವರ ಕೊಪ್ಪಳ ನಿವಾಸಿ ಅಶೋಕ (54) ಎಂಬವರು ಕೆಲಸದ ನಿಮಿತ್ತ ಕಟೀಲು ಬಳಿಯ ಸಂಬಂಧಿಕರ ಮನೆಯಲ್ಲಿ ವಾಸವಿದ್ದವರು ಶುಕ್ರವಾರ ಸಂಜೆ ನಂದಿನಿ ನದಿಯಲ್ಲಿ ಬರುವ ತೆಂಗಿನಕಾಯಿಗಳನ್ನು ಸಂಗ್ರಹಿಸಲು ತೆರಳಿದ್ದ ವೇಳೆ ಆಯ ತಪ್ಪಿ

ಕುತ್ತಾರು ದೆಕ್ಕಾಡು ಕೊರಗಜ್ಜನ ಆದಿಸ್ಥಳಕ್ಕೆ ನಟ ದರ್ಶನ್ ಭೇಟಿ

ಉಳ್ಳಾಲ : ಕುತ್ತಾರು ದೆಕ್ಕಾಡುವಿನ ಕೊರಗಜ್ಜ  ಆದಿತಳಕ್ಕೆ ಡಿ ಬಾಸ್  ದರ್ಶನ್  ಸಹಿತ ಹಲವು ನಟರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.  ಈ ಸಂದರ್ಭ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಂಗಳೂರಿಗೆ ಸುಮಾರು ಸಲ ಬಂದಿದ್ದೆ ಆದರೆ ಕುತ್ತಾರಿಗೆ ಬರೋದಕ್ಕೆ ಆಗ್ಲಿಲ್ಲ. ಕುತ್ತಾರು ಏನು ಡಿಫರೆನ್ಸ್ ಇಲ್ಲ ಎಲ್ಲಾ ದೇವಸ್ಥಾನ ಒಂದೇ. ಎಲ್ರು ಹೇಳ್ತಾಯಿದ್ರು ಈ ಕ್ಷೇತ್ರದ ಬಗ್ಗೆ ಹಾಗಾಗಿ ಭೇಟಿ ನೀಡಿ ಪ್ರಾರ್ಥಿಸಿದ್ದೆನೆ ಎಂದರು. ಈ ಸಂದರ್ಭ ಹಾಸ್ಯ ನಟ ಚಿಕ್ಕಣ್ಣ,

ಮಂಗಳೂರು: ಜನಪ್ರಗತಿಯ ಪಂಜು ಪುಸ್ತಕ ಬಿಡುಗಡೆ: ಕುವೆಂಪು ಬಂಟಮಲೆ ಪ್ರಶಸ್ತಿ ಪ್ರದಾನ ಸಮಾರಂಭ

ಮಂಗಳೂರಿನ ಬಲ್ಮಠದ ಸಹೋದಯ ಹಾಲ್‌ನಲ್ಲಿ ಕರ್ನಾಟಕ ಅಧ್ಯಯನ ಕೇಂದ್ರ ಮತ್ತು ಬಂಟಮಲೆ ಅಕಾಡೆಮಿ ಗುತ್ತಿಗಾರು, ಸುಳ್ಯ ಅವರ ವತಿಯಿಂದ ಜನಪ್ರಗತಿಯ ಪಂಜು ಎಂಬ ಪುಸ್ತಕ ಬಿಡುಗಡೆ ಮತ್ತು ಕುವೆಂಪು ಬಂಟಮಲೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸದ್ಯ 95ರ ಪ್ರಾಯದವರಾದ ಕನ್ನಡ ಪತ್ರಿಕೋದ್ಯಮದ ಹಿರಿಯರು ಮತ್ತು ಒಂದು ಕಾಲದಲ್ಲಿ ತಮ್ಮ ತೀಕ್ಷ್ಣ ಪತ್ರಿಕೋದ್ಯಮಕ್ಕೆ ಪ್ರಸಿದ್ಧರಾಗಿದ್ದ ಕಲ್ಲೆ ಶಿವೋತ್ತಮರಾವ್ ಅವರ ಬಗೆಗೆ ಹೊರ ಬಂದ ಕೃತಿಯಿದು. 60-70ರ ದಶಕದಲ್ಲಿ

ಮುಡಿಪು: ಕಾರು ಢಿಕ್ಕಿ: ಗಲ್ಫ್ ಉದ್ಯೋಗಿ ಸಾವು

ಮುಡಿಪು : ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಮುಡಿಪು ಜಂಕ್ಷನ್‌ನಲ್ಲಿ ಸಂಭವಿಸಿದೆ. ಬಂಟ್ವಾಳ  ಕರೋಪಾಡಿ ನಿವಾಸಿ ಸಿದ್ದಿಖ್ 48)  ಮೃತಪಟ್ಟವರು. ಗಲ್ಫ್  ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದ ಅವರು  ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಸದ್ಯ ದೇರಳಕಟ್ಟೆ ಫ್ಲಾಟ್ ನಲ್ಲಿ ನೆಲೆಸಿರುವ ಸಿದ್ದೀಖ್ ಶುಕ್ರವಾರದ ಜುಮಾ ನಮಾಝ್ ಅನ್ನು ಕರೋಪಾಡಿ ಮಸೀದಿಯಲ್ಲಿ ನಡೆಸಿದ್ದರು. ಅಲ್ಲಿಂದ ವಾಪಸ್ಸು ದೇರಳಕಟ್ಟೆಗೆ ಬರುವ

ಮೂಡುಬಿದಿರೆ :ಮಿಥುನ್ ರೈ ಭಾವಚಿತ್ರವಿದ್ದ ಫ್ಲೆಕ್ಸ್‌ಗೆ ಹಾನಿ

ಮೂಡುಬಿದಿರೆ: ಮೂಡುಬಿದಿರೆಯಲ್ಲಿ ನಡೆಯಲಿರುವ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಸ್ವಾಗತ ಕೋರಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ಮೂಡುಬಿದಿರೆ ಪರಿಸರದಲ್ಲಿ ಹಾಕಿರುವ ಫ್ಲೆಕ್ಸ್‌ಗಳನ್ನು ಯಾರೋ ದುಷ್ಕರ್ಮಿಗಳು ಹರಿದು ಹಾಕಿದ್ದಲ್ಲದೆ ಮಿಥುನ್ ರೈ ಪೋಟೋಕೆ ಹಾನಿ ಮಾಡಿದ್ದಾರೆ.   ಈ ಬಗ್ಗೆ  ಕಾಂಗ್ರೆಸ್ ಮುಖಂಡರು ಮೂಡುಬಿದಿರೆ  ಠಾಣೆಗೆ ದೂರು ನೀಡಿ  ಫ್ಲೆಕ್ಸ್

ಮಂಗಳೂರು: ಮಾ.11ರಂದು ಮಣ್ಣಗುಡ್ಡದಲ್ಲಿ ಅಪ್ಸರಾ ಐಸ್‌ಕ್ರೀಂನ ಶಾಖೆ ಶುಭಾರಂಭ

ಮಂಗಳೂರಿನ ಮಣ್ಣಗುಡ್ಡದಲ್ಲಿ ಅಪ್ಸರಾ ಐಸ್‌ಕ್ರೀಂನ ಮತ್ತೊಂದು ಶಾಖೆಯು ಮಾರ್ಚ್ 11ರಂದು ಶುಭಾರಂಭಗೊಳ್ಳಲಿದೆ. ಈಗಾಗಲೇ ಖ್ಯಾತಿಯನ್ನು ಪಡೆದಿರುವ ಕಾಮಾಕ್ಷಿ ವೇಂಚರ್ಸ್‌ನ ಅಪ್ಸರಾ ಐಸ್‌ಕ್ರೀಂ ಐಸ್‌ಕ್ರೀಂ ಪ್ರೀಯರ ನೆಚ್ಚಿನ ಶಾಖೆಯಾಗಿದೆ. ವಿವಿಧ ಫ್ಲೇವರ್‌ಗಳ ಟೇಸ್ಟಿ ಐಸ್‌ಕ್ರೀಂಗಳಿಗೆ ಜನಪ್ರಸಿದ್ಧಿಯನ್ನು ಪಡೆದಿದೆ. ಇದೀಗ ನಗರದ ಮಣ್ಣಗುಡ್ಡದ ಲೋಟಸ್ ದಾಮ್‌ನ ನೆಲಮಹಡಿಯಲ್ಲಿ ಅಪ್ಸರಾ ಐಸ್‌ಕ್ರೀಂನ ಶಾಖೆಯು ಮಾರ್ಚ್ 11ರಂದು ಬೆಳಿಗ್ಗೆ 11 ಗಂಟೆಗೆ

ಬಾರಕೂರು  : ಆಳುಪೋತ್ಸವ ನಡೆದಲ್ಲಿ ಕಾಡು ಪೊದೆಗಳ ರಾಜ್ಯ

ತುಳುನಾಡ ರಾಜಧಾನಿ ಆಗಿದ್ದ ದೇವಾಲಯಗಳ, ರಾಜ ಮಹಾರಾಜರುಗಳ  ಖ್ಯಾತಿಯ  ಬಾರಕೂರು  ಕೋಟೆಯಲ್ಲಿ 5 ವರ್ಷಗಳ ಹಿಂದೆ  ನಡೆದ ಅಳುಪೋತ್ಸವ ನಡೆದಿತ್ತು. ಅಲ್ಲಿ ಈಗ ಮುಳ್ಳು ಪೊದೆಗಳು ರಾಜ್ಯಭಾರ ನಡೆಸಿವೆ.  2019 ಜನವರಿ  25ರಿಂದ 27ರತನಕ  ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕನ್ನಡ  ಮತ್ತು  ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲಾಡಳಿತ  ಮತ್ತು ಸ್ಥಳಿಯ ಸಂಘ ಸಂಸ್ಥೆಗಳ ಸಹಕಾರದಲ್ಲಿ  ನಡೆದ ಅಳುಪೋತ್ಸವ  ಬಾರಕೂರಿನ  ಗತ ವೈಭವಕ್ಕೆ  ಸಾಕ್ಷಿಯಾಗಿತ್ತು. ಕೋಟೆಯ ಸುತ್ತ ಏರು

ಬಂಟ್ವಾಳ: ವ್ಯಕ್ತಿಯೋರ್ವರ ಚಿನ್ನದ ಸರ, ಹಣ ಕಸಿದು, ಹಲ್ಲೆ ನಡೆಸಿ, ಜೀವ ಬೆದರಿಕೆ

ವ್ಯಕ್ತಿಯೋರ್ವರು ತನ್ನ ಮೋಟಾರ್ ಸೈಕಲ್ ನಲ್ಲಿ ಕಛೇರಿಗೆ ಹೋಗುತ್ತಿರುವಾಗ, ಕಾರಿನಲ್ಲಿ ಬಂದ ಆರೋಪಿಗಳು ವ್ಯಕ್ತಿಯ ಕುತ್ತಿಗೆಯಲ್ಲಿದ್ದ 5 ಪವನ್ ಚಿನ್ನದ ಸರ, ಪರ್ಸ್ ನಲ್ಲಿದ್ದ ಹಣವನ್ನು ಕಸಿದುಕೊಂಡು ಅವ್ಯಾಚವಾಗಿ ಬೈದು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್‌ನಲ್ಲಿ ನಡೆದಿದೆ. ಮಾಣಿ ಗ್ರಾಮ ಬಂಟ್ವಾಳ ನಿವಾಸಿ ಸ್ಟೀವನ್ ಆಲ್ವೀನ್ ಪಾಯಸ್ (೫೧) ಎಂಬುವರು ಮಾರ್ಚ್ ೫ರಂದು ಬೆಳಗ್ಗೆ, ಅವರ ಮೋಟಾರ್ ಸೈಕಲ್‌ನಲ್ಲಿ ಕಛೇರಿಗೆ