ಬಂಟ್ವಾಳ: ವ್ಯಕ್ತಿಯೋರ್ವರ ಚಿನ್ನದ ಸರ, ಹಣ ಕಸಿದು, ಹಲ್ಲೆ ನಡೆಸಿ, ಜೀವ ಬೆದರಿಕೆ
ವ್ಯಕ್ತಿಯೋರ್ವರು ತನ್ನ ಮೋಟಾರ್ ಸೈಕಲ್ ನಲ್ಲಿ ಕಛೇರಿಗೆ ಹೋಗುತ್ತಿರುವಾಗ, ಕಾರಿನಲ್ಲಿ ಬಂದ ಆರೋಪಿಗಳು ವ್ಯಕ್ತಿಯ ಕುತ್ತಿಗೆಯಲ್ಲಿದ್ದ 5 ಪವನ್ ಚಿನ್ನದ ಸರ, ಪರ್ಸ್ ನಲ್ಲಿದ್ದ ಹಣವನ್ನು ಕಸಿದುಕೊಂಡು ಅವ್ಯಾಚವಾಗಿ ಬೈದು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್‌ನಲ್ಲಿ ನಡೆದಿದೆ.
ಮಾಣಿ ಗ್ರಾಮ ಬಂಟ್ವಾಳ ನಿವಾಸಿ ಸ್ಟೀವನ್ ಆಲ್ವೀನ್ ಪಾಯಸ್ (೫೧) ಎಂಬುವರು ಮಾರ್ಚ್ ೫ರಂದು ಬೆಳಗ್ಗೆ, ಅವರ ಮೋಟಾರ್ ಸೈಕಲ್‌ನಲ್ಲಿ ಕಛೇರಿಗೆ ಹೋಗುತ್ತಾ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಜಂಕ್ಷನ್ ಗೆ ತಲುಪಿದಾಗ, ಕಾರಿನಲ್ಲಿ ಬಂದ ಆರೋಪಿಗಳಾದ ಮಲ್ವಿನ್ ಕಿಶೋರ್ ಮಾರ್ಟಿಸ್ ಮತ್ತು ಆತನ ಪತ್ನಿ ಶಾಂತಿ ಮಾರ್ಟಿಸ್ ಎಂಬವರು,ಆಲ್ವೀನ್ ರನ್ನು ತಡೆದು, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುತ್ತಾರೆ. ಬಳಿಕ ಆಲ್ವೀನ್‌ರ ಕುತ್ತಿಗೆಯಲ್ಲಿದ್ದ ೫ ಪವನ್ ಚಿನ್ನದ ಸರ(ಇದರ ಅಂದಾಜು ಮೌಲ್ಯ 2 ಲಕ್ಷ ರೂ) ಮತ್ತು ಪರ್ಸ್ ನಲ್ಲಿದ್ದ ೧೮,೦೦೦/- ರೂ ಹಣವನ್ನು ಕಸಿದುಕೊಂಡು ಅವ್ಯಾಚವಾಗಿ ಬೈದು ತೆರಳಿದ್ದಾರೆ.
ಘಟನೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ