ಮಂಗಳೂರು.ಫೆ.20. ಭಾರತ ಕಮ್ಯೂನಿಸ್ಟ್ ಪಕ್ಷದ ಕಡಬ ತಾಲೂಕಿನ ಉಪ ಕಾರ್ಯದರ್ಶಿ, ಪುತ್ತೂರು ತಾಲೂಕು ಬೀಡಿ ಲೇಬರ್ ಯೂನಿಯನ್(ಎಐಟಿಯುಸಿ) ನ ಜತೆ ಕಾರ್ಯದರ್ಶಿ ಸುಮಾರು 55 ವರ್ಷ ಪ್ರಾಯದ ರಮೇಶ್ ರೈ ಅವರು ಇಂದು ಮುಂಜಾನೆ ಆನೆ ದಾಳಿಯಿಂದ ಸ್ಥಳೀಯ ಯುವತಿ ರಂಜಿತಳನ್ನು ರಕ್ಷಿಸುವ ಸಲುವಾಗಿ ತಾವೇ ಸ್ವತಃ ಆನೆ ದಾಳಿಗೆ ತುತ್ತಾಗಿ ಗಂಭೀರ ಸ್ವರೂಪದ ಗಾಯಗೊಂಡು ಸ್ಥಳದಲ್ಲೇ
ಉಳ್ಳಾಲ: ಒಂಟಿ ಮಹಿಳೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ತಾನು ವಾಸವಿದ್ದ ಮನೆಯ ಅಡುಗೆಕೋಣೆಯಲ್ಲಿ ಪತ್ತೆಯಾಗಿರುವ ಘಟನೆ ಹರೇಕಳ ಸಮೀಪದ ದೇರಡ್ಕ ಎಂಬಲ್ಲಿ ನಡೆದಿದೆ.ಹರೇಕಳ ದೇರಡ್ಕ ನಿವಾಸಿ ಜೀನಿ ಡಿಸೋಜ ಎಂಬವರ ಪತ್ನಿ ಮಗ್ಗಿ ಮೊಂತೇರೊ (62) ಎಂಬವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಫೆ.16 ರಂದು ಪುತ್ರಿ ಮನೆಗೆ ಬಂದು ತಾಯಿ ಜತೆಗೆ ಮಾತನಾಡಿ ತೆರಳಿದ್ದರು. ಆನಂತರ ಮೂರು ದಿನಗಳಿಂದ ಮೊಬೈಲ್ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಪುತ್ರಿ ಮನೆಗೆ ಬಂದಾಗ
ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಬಲಿಯಾದ ಘಟನೆ ಕಡಬ ಸಮೀಪದ ಮೀನಾಡಿ ಎಂಬಲ್ಲಿ ಇಂದು ನಡೆದಿದೆ. ಹಾಲಿನ ಡೈರಿಗೆ ಕೆಲಸಕ್ಕೆ ಹೋಗುತ್ತಿದ್ದ ಸಿಬ್ಬಂದಿ ರಂಜಿತಾ ಹಾಗೂ ರಮೇಶ್ ರೈ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಸ್ಥಳದಲ್ಲಿ ಆಕ್ರೋಶಿತ ಸಾರ್ವಜನಿಕರು ಗಲಾಟೆ ಮಾಡಿದ್ದು ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ವಾರದ ಹಿಂದೆ ಮರ್ದಾಳದ ಯುವಕನೊಬ್ಬ ಫೇಸ್ಬುಕ್ ನಲ್ಲಿ ಕಾಡಾನೆ ದಾಳಿ ಬಗ್ಗೆ ವಿಡಿಯೋ
ಅಸೈಗೋಳಿ ಕೆ ಎಸ್ ಆರ್ ಪಿಯ ಏಳನೇ ಬೆಟಾಲಿಯನ್ ನ ನೂತನ ಬ್ಯಾಚ್ ನ ಪೊಲೀಸ್ ಪೇದೆ ಬಾಡಿಗೆ ರೂಮಿನಲ್ಲಿ ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಅಸೈಗೋಳಿ ಸೈಟ್ ನಲ್ಲಿ ಇಂದು ಸಂಜೆ ಬೆಳಕಿಗೆ ಬಂದಿದೆ. ಬೆಳಗಾಂ ನಿವಾಸಿ ವಿಮಲನಾಥ ಜೈನ್ (28) ಆತ್ಮಹತ್ಯೆ ಮಾಡಿಕೊಂಡವರು. ತಿಂಗಳ ಹಿಂದಷ್ಟೇ ತಾಯಿ ತೀರಿಕೊಂಡ ನಂತರ ದು:ಖದಲ್ಲಿದ್ದ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ನೂತನ ಬ್ಯಾಚ್ ನವರಾಗಿದ್ದ ವಿಮಲನಾಥ್ ಇಂದು ಕರ್ತವ್ಯಕ್ಕೆ ಹಾಜರಾಗದೇ ಬಾಡಿಗೆ ರೂಮಿನಲ್ಲಿ
ವಿಟ್ಲ: ವ್ಯಕ್ತಿಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಸಮೀಪದ ಕನ್ಯಾನದಲ್ಲಿ ನಡೆದಿದೆ.ಮೃತರನ್ನು ಆಟೋ ಚಾಲಕ ದಿನೇಶ್ ಬೈರಿಕಟ್ಟೆ (32) ಎಂದು ಗುರುತಿಸಲಾಗಿದೆ.ಅವಿವಾಹಿತರಾಗಿದ್ದ ದಿನೇಶ್ ರವರು ಆಟೋ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಇಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.ಆತ್ಮಹತ್ಯೆ ಕಾರಣ ತಿಳಿದು ಬಂದಿಲ್ಲ.
ಪುತ್ತೂರು ಫೆ 5 : ಕೃಷಿಕರೊಬ್ಬರು ಕೀಟ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ 15 ರಂದು ನಡೆದಿದೆ. ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಸೇಡಿಯಾಪು ನಿವಾಸಿ ದಿ. ಈಶ್ವರ ಗೌಡ ರವರ ಪುತ್ರ ಜತ್ತಪ್ಪ ಗೌಡ ( 68 ವ) ಆತ್ಮಹತ್ಯೆ ಮಾಡಿಕೊಂಡವರು. ವಿಪರೀತದ ಕುಡಿತದ ಚಟ ಹೊಂದಿದ್ದ ಅನಾರೋಗ್ಯದಿಂದ ಬಳಲುತ್ತಿದ್ದ ಜತ್ತಪ್ಪ ಗೌಡರವರು ಸಂಜೆ 6.30ರ ಸುಮಾರಿಗೆ ಮನೆಯಲ್ಲಿದ್ದ ಕೀಟ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಪುತ್ತೂರಿನ
ವಿಟ್ಲ: ಖಾಸಗಿ ಬಸ್ಸೊಂದು ಗುಡ್ಡಕ್ಕೆ ಹತ್ತಿದ ಘಟನೆ ವಿಟ್ಲ -ಮಂಗಳೂರು ರಸ್ತೆಯ ಕೆಲಿಂಜದ ಮಾಜೋನಿ ಎಂಬಲ್ಲಿ ನಡೆದಿದೆ. ವಿಟ್ಲದಿಂದ ಮಂಗಳೂರಿಗೆ ತೆರಳುವ ಖಾಸಗಿ ಬಸ್ ಗುಡ್ಡಕ್ಕೆ ಹತ್ತಿದೆ. ಘಟನೆಯಿಂದ ಚಂದಳಿಕೆಯ ಬಾಲಕಿಗೆ ಕಾಲಿಗೆ ಗಂಭೀರ ಗಾಯವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಕೆಲ ಪ್ರಯಾಣಿಕರಿಗೆ ಸಣ್ಣ -ಪುಟ್ಟ ಗಾಯಾವಾಗಿದೆ. ಸ್ಥಳಕ್ಕೆ ವಿಟ್ಲ ಪೋಲೀಸರು ಭೇಟಿ ನೀಡಿದ್ದಾರೆ
ಮಂಗಳೂರು: ನಗರದ ಹಂಪನ ಕಟ್ಟೆಯ ಜುವೆಲ್ಯರಿಯೊಂದರಲ್ಲಿ ಕಳೆದ ಶುಕ್ರವಾರ ಹಾಡುಹಗಲೇ ನಡೆದ ಸಿಬ್ಬಂದಿ ಕೊಲೆ, ಅಂಗಡಿ ದರೋಡೆ ಪ್ರಕರಣದ ಆರೋಪಿಯ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣದ ಶಂಕಿತ ಆರೋಪಿಯ ಸಿಸಿ ಕೆಮರಾ ಚಿತ್ರವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಕಪ್ಪು ಬಣ್ಣದ ಜರ್ಕಿನ್, ಜೀನ್ಸ್ ಪ್ಯಾಂಟ್ ಧರಿಸಿ, ಶೂ ಧರಿಸಿದ್ದು, ಹೆಗಲಿನಲ್ಲಿ ಬ್ಯಾಗ್ ಹಾಕಿಕೊಂಡಿದ್ದು, ಗುರುತು ಮರೆಮಾಚಲು ಕ್ಯಾಪ್, ಮಾಸ್ಕ್, ಕೂಲಿಂಗ್
ಧೂಳು ಬರುವ ಹಾಗೆ ವಾಹನವನ್ನು ಚಲಾಯಿಸಬೇಡ ನಿಧಾನವಾಗಿ ಹೋಗೆಂದು ಹೇಳಿದ ವ್ಯಕ್ತಿಗೆ ಟಿಪ್ಪರ್ ಚಾಲಕ ರಾಡ್ ನಿಂದ ಹೊಡೆದು, ಟಿಪ್ಪರ್ ಚಲಾಯಿಸಿ ಕೊಲೆ ನಡೆಸಿದ್ದು, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಟೆಬಾಗಿಲಿನ ನಿವಾಸಿ ಫಯಾಝ್ (61) ಹತ್ಯೆಗೀಡಾದ ವ್ಯಕ್ತಿ. ಪಯಾಜ್ ಶುಕ್ರವಾರ ಕೋಟೆಬಾಗಿಲು ಮಸೀದಿಗೆ ನಮಾಝ್‍ಗೆ ತೆರಳುವ ಸಂಧರ್ಭ ಕೋಟೆಬಾಗಿಲು ನಿವಾಸಿ, ಟಿಪ್ಪರ್ ಚಾಲಕ ಹಾರೀಸ್ ಎಂಬಾತ ಅತೀ ವೇಗದಿಂದ ಟಿಪ್ಪರ್ ಚಲಾಯಿಸಿಕೊಂಡು
ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಘಟನೆ ನಗರದ ಬಲ್ಮಠದಲ್ಲಿ ನಡೆದಿದೆ. ನಗರದಲ್ಲಿರುವ ಮಂಗಳೂರು ಜುವೆಲ್ಲರಿಗೆ ನುಗ್ಗಿದ ಮುಸುಕುಧಾರಿ ವ್ಯಕ್ತಿಯೊಬ್ಬ ಅಲ್ಲಿನ ಸಿಬ್ಬಂದಿಯನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿದ್ದಾನೆ. ಜುವೆಲ್ಲರಿ ಉದ್ಯೋಗಿ, ಅತ್ತಾವರ ನಿವಾಸಿ ರಾಘವ (52) ಕೊಲೆಯಾದ ವ್ಯಕ್ತಿ. ಮಧ್ಯಾಹ್ನ ಮುಸುಕು ಹಾಕಿಕೊಂಡು ಬಂದಿದ್ದ ವ್ಯಕ್ತಿ ಕೃತ್ಯ ಎಸಗಿದ್ದಾನೆ. ಜುವೆಲ್ಲರಿ ಮಾಲಕ ಊಟಕ್ಕೆಂದು ತೆರಳಿದ್ದಾಗ ಆಗಂತುಕ ಒಳಗೆ ಬಂದಿದ್ದ.




























