ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಶ್ರೀ ಡಿ.ಕೆ ಶಿವಕುಮಾರ್ ಹಾಗೂ ಉನ್ನತ ಶಿಕ್ಷಣ ಸಚಿವರಾದ ಶ್ರೀ ಎಂ. ಸಿ ಸುಧಾಕರ್ ಅವರ ಸೂಚನೆಯಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸವಾದ್ ಸುಳ್ಯ ಮೂಲತ ಸುಳ್ಯ ನಗರದ ಗಾಂಧಿನಗರದವರು, ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಬ್ರಿಜಿಸ್ಟ್ನಲ್ಲಿ ಮುಗಿಸಿ 14 ನೇ
ತೆಲಂಗಾಣದಲ್ಲಿ ವೈಎಸ್‌ಆರ್ ಪಕ್ಷವನ್ನು ಸ್ಥಾಪಿಸಿದ್ದ ಹಿಂದಿನ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಆಗಿದ್ದ ರಾಜಶೇಖರ ರೆಡ್ಡಿಯವರ ಮಗಳು ಮತ್ತು ಈಗಿನ ಆಂಧ್ರದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿಯವರ ಸಹೋದರಿ ವೈ. ಎಸ್. ಶರ್ಮಿಳಾ ಅವರು ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಶರ್ಮಿಳಾ ಅವರು ಕಾಂಗ್ರೆಸ್ ಸೇರಿದ್ದಲ್ಲದೆ ತಮ್ಮ ಪಕ್ಷವನ್ನು ಕಾಂಗ್ರೆಸ್ಸಿನಲ್ಲಿ
ಕೊಲ್ಕತ್ತಾದಲ್ಲಿ ಒಂದು ಲಕ್ಷ ನಾಗರಿಕರನ್ನು ಸೇರಿಸಿ ನಡೆದ ಗೀತಾ ಮಂತ್ರ ಪಠಣ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಹಣ ಬಾಚಿದ್ದಾರೆ ಎಂದು ಆರೋಪ ಮಾಡಿದ್ದ ಪಡುವಣ ಬಂಗಾಳದ ಬಿಜೆಪಿ ಮುಖಂಡ ಅನುಪಮ್ ಹಜ್ರಾ ಅವರನ್ನು ಕೇಂದ್ರೀಯ ಸ್ಥಾನದಿಂದ ವಜಾ ಮಾಡಲಾಗಿದೆ.ಗೀತಾ ಮಂತ್ರ ಪಠಣ ಕಾರ್ಯಕ್ರಮಕ್ಕೆ ಬಿಜೆಪಿಯ ಕೆಲವರು ಹಣವಂತರಿಗೆ ದೊಡ್ಡ ಮೊತ್ತದ ಹಣಕ್ಕೆ ವಿಶೇಷ ಪಾಸ್ ಮಾರಾಟ ಮಾಡಿದ್ದರು. ಅಕ್ರಮ ಹಣ ಮಾಡಿಕೊಂಡಿದ್ದರು ಎಂದು ಅನುಪಮ್ ಆರೋಪ ಮಾಡಿದ್ದರು. ಕೆಲವು ಬಿಜೆಪಿ
ರಾಮ ಮಂದಿರ ಉದ್ಘಾಟನೆಗೆ ದಯವಿಟ್ಟು ಬರಬೇಡಿ ಎಂದು ರಾಮ ಮಂದಿರ ಹೋರಾಟದ ಪ್ರಮುಖರು ಮತ್ತು ಬಿಜೆಪಿ ನಾಯಕರಾಗಿದ್ದ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿಯವರಿಗೆ ರಾಮ ಮಂದಿರ ಟ್ರಸ್ಟ್. ಇದು ಸ್ವಲ್ಪ ವಿವಾದಕ್ಕೆ ಕಾರಣವಾಗುತ್ತಲೇ ರಾಮ ಮಂದಿರ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಅವರು ಇಬ್ಬರು ಹಿರಿಯರೂ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಲಕ್ಷಗಟ್ಟಲೆ ಜನರು ಸೇರುವ ತಾಣದಲ್ಲಿ ಅವರನ್ನು ನೋಡಿಕೊಳ್ಳಲು
ಸಂಸತ್ ಭದ್ರತಾ ವೈಫಲ್ಯದ ಬಗೆಗೆ ಗೃಹ ಮಂತ್ರಿ ಸಂಸತ್ತಿನಲ್ಲಿ ಉತ್ತರ ನೀಡಲೇಬೇಕು ಎಂದು ಪ್ರತಿಪಕ್ಷಗಳವರು ಒತ್ತಾಯಿಸಿದ್ದರಿಂದ ಬಿಜೆಪಿಯ ಉತ್ತರವಾಗಿ ಒಟ್ಟು 78 ಸಂಸದರನ್ನು ಅಮಾನತು ಮಾಡಲಾಗಿದೆ. ಎಲ್ಲ ಸೇರಿ 91 ಸಂಸದರನ್ನು ಅಮಾನತು ಮಾಡಲಾಗಿದೆ ಎಂದು ಇನ್ನೂ ಕೆಲವು ಹೇಳಿಕೆಗಳು ಹೊರಬಿದ್ದಿವೆ.ಲೋಕ ಸಭೆಯಿಂದ 33, ರಾಜ್ಯ ಸಭೆಯಿಂದ 45 ಎಂದು ಒಟ್ಟು 78 ಸಂಸದರನ್ನು ಅಮಾನತು ಮಾಡಲಾಗಿದೆ. ಲೋಕಸಭೆಯಿಂದ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೋಯ್, ಟಿ. ಆರ್. ಬಾಲು, ಎ.
ಆರೆಸ್ಸೆಸ್ ರಾಷ್ಟ್ರೀಯ ಕಚೇರಿ ಇರುವ ನಾಗಪುರ ವಲಯದಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಈ ಜಿಲ್ಲೆಯ ಹದಿಮೂರು ಪಂಚಾಯತು ಸಮಿತಿಗಳಲ್ಲಿ ಒಂಬತ್ತರ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.ಮೂರು ಪಂಚಾಯತು ಸಮಿತಿಗಳು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಸಿಕಿದೆ. ಒಂದರಲ್ಲಿ ಶಿವಸೇನೆಯ ಭಿನ್ನಮತೀಯ ಬಣವು ಅಧ್ಯಕ್ಷತೆಯನ್ನು ಗೆದ್ದಿದೆ. ಬಿಜೆಪಿ ಒಂದರಲ್ಲೂ ಅಧ್ಯಕ್ಷ ಸ್ಥಾನ ಗೆಲ್ಲಲು ವಿಫಲವಾಗಿದೆ. ಮೈತ್ರಿ ಕಾರಣಕ್ಕೆ ಎರಡು ಕಡೆ
ಸಂಸತ್ ದಾಳಿಯ ಆರೋಪಿ ಮನೋರಂಜನ್ ವಿವೇಕಾನಂದ, ಭಗತ್ ಸಿಂಗ್ ಮೊದಲಾದವರ ಪುಸ್ತಕ ಹೆಚ್ಚು ಓದುತ್ತಿದ್ದ ಎಂದೂ, ಮನೆಯಲ್ಲಿ ಸಾಕಷ್ಟು ಕ್ರಾಂತಿಕಾರಿಗಳ ಎಡ ಬಲ ವಾದದ ಪುಸ್ತಕಗಳು ದೊರೆತಿರುವುದಾಗಿ ವರದಿಯಾಗಿದೆ. ಹಾಸನ ಜಿಲ್ಲೆಯ ರಾಮನಾಥಪುರ ತಾಲೂಕಿನ ಮಲ್ಲಾಪುರ ಗ್ರಾಮ ಮೂಲದ ದೇವರಾಜೇಗೌಡ, ಶೈಲಜಾ ದಂಪತಿಯ ಮಗ ಮನೋರಂಜನ್. ವಿಕ್ರಾಂತ್ ಉದ್ಯೋಗದ ಬಳಿಕ ದೇವರಾಜೇಗೌಡರು ಕೃಷಿ ಮಾಡುತ್ತಿದ್ದರು. ಮೈಸೂರಿನ ವಿಜಯನಗರದಲ್ಲಿ ಸ್ವಂತ ಕಟ್ಟಿದ ಮನೆಯಲ್ಲಿ ವಾಸವಿದ್ದರು.
ಸೆಪ್ಟೆಂಬರ್ ವಿಶೇಷ ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಸ್ವೀಕಾರದ ವೇಳೆ ಅಟ್ಟಣಿಗೆಯಿಂದ ಕೆಲವರು ಮೋದೀಜಿ ಜೈ ಎಂದು ಕೂಗಿದ್ದರು. ಇದು ಭದ್ರತಾ ಲೋಪ, ನಾಳೆ ಅಟ್ಟಣಿಗೆಯಿಂದ ದಾಳಿ ಆಗಬಹುದು, ಬಾಂಬು ಎಸೆಯಬಹುದು ಎಂದು ಹಲವು ಸಂಸದರು ಆತಂಕ ವ್ಯಕ್ತಪಡಿಸಿದ್ದರು. ಈಗ ಇಬ್ಬರು ಗ್ಯಾಲರಿಯಿಂದ ಲೋಕಸಭೆಯೊಳಕ್ಕೆ ನುಗ್ಗಿ ಬಂದು ಹಾರಿ ಸಿಕ್ಕಿ ಬಿದ್ದಿದ್ದಾರೆ. ಇವರೂ ಬಲಪಂಥೀಯರೆ. ಅವರಲ್ಲಿ ಒಬ್ಬ ಮೈಸೂರಿನ ವಿದ್ಯಾರ್ಥಿ. ಪ್ರೇಕ್ಷಕರ ಗ್ಯಾಲರಿಗೆ ಪಾಸ್ ಮೈಸೂರು
ಸರ್ವಾಧಿಕಾರ ನಿಲ್ಲಿಸಿ, ಅತ್ಯಾಚಾರ ತಡೆಯಿರಿ ಎಂದು ಸಂಸತ್ತಿನ ಹೊರಗಡೆ ಇಬ್ಬರು ಪ್ರತಿಭಟನೆ ನಡೆಸಿದರು. ನೀಲಂ ಎನ್ನುವ ಪ್ರತಿಭಟನೆ ನಡೆಸಿದ ಮಹಿಳೆಯನ್ನು ಪೋಲೀಸರು ಬಂಧಿಸಿದರು. ಅಲ್ಲದೆ ಪ್ರತಿಭಟನೆ ನಡೆಸುತ್ತಿದ್ದ ನೀಲಂ ಅವರ ಸಂಗಾತಿಗಳು ಎನ್ನಲಾದ ಮತ್ತೂ ಮೂವರನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.ಜೈಭೀಮ್, ಜೈ ಭಾರತ್, ವಂದೇ ಮಾತರಂ ಘೋಷಣೆ ಕೂಗುತ್ತಿದ್ದ ಮಹಿಳೆ ನೀಲಂ ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿದರು ಮತ್ತು ಸರಕಾರವು ಮಹಿಳೆಯರ
370ನೇ ವಿಧಿಯ ವಿಶೇಷ ಅಧಿಕಾರವನ್ನು ಜಮ್ಮು ಮತ್ತು ಕಾಶ್ಮೀರದಿಂದ ಕಿತ್ತುಕೊಂಡು 4 ವರುಷವಾದ ಬಳಿಕ ಇಂದು ಸುಪ್ರೀಂ ಕೋರ್ಟು ನೀಡುವ ತೀರ್ಪಿನತ್ತ ಎಲ್ಲರ ಕಣ್ಣೋಟವಿತ್ತು. ವಿಭಜನೆಯನ್ನು ಮಾನ್ಯ ಮಾಡಿ ಸುಪ್ರೀ ಕೋರ್ಟು ಒಟ್ಟಾರೆ ತೀರ್ಪು ನೀಡಿದೆ. ಪಂಚ ನ್ಯಾಯಾಧೀಶರ ಏಕಾಭಿಪ್ರಾಯದ ತೀರ್ಪು ಎನ್ನಲಾಗಿದೆಯಾದರೂ ಮೂರು ವಿಭಿನ್ನ ಅಭಿಪ್ರಾಯದ ತೀರ್ಪು ಹೊರಬಂದಿದೆ. ಸರಕಾರದ, ಸಂಸತ್ತಿನ ತೀರ್ಮಾನ ಆದೇಶವನ್ನು ಅಲ್ಲಗಳೆಯಲಾಗದು. ಒಕ್ಕೂಟ ಸೇರಿದ ಮೇಲೆ ಪ್ರತ್ಯೇಕ




























