ಸಂಸತ್ತಿನ ಒಳಗೆ ಭದ್ರತಾ ವೈಫಲ್ಯದ ಬಗೆಗೇಕೆ ಮೂಕರು? : 78 ಸಂಸದರ ಅಮಾನತು ಮೂಲಕ ಬಿಜೆಪಿ ಉತ್ತರ
ಸಂಸತ್ ಭದ್ರತಾ ವೈಫಲ್ಯದ ಬಗೆಗೆ ಗೃಹ ಮಂತ್ರಿ ಸಂಸತ್ತಿನಲ್ಲಿ ಉತ್ತರ ನೀಡಲೇಬೇಕು ಎಂದು ಪ್ರತಿಪಕ್ಷಗಳವರು ಒತ್ತಾಯಿಸಿದ್ದರಿಂದ ಬಿಜೆಪಿಯ ಉತ್ತರವಾಗಿ ಒಟ್ಟು 78 ಸಂಸದರನ್ನು
ಅಮಾನತು ಮಾಡಲಾಗಿದೆ. ಎಲ್ಲ ಸೇರಿ 91 ಸಂಸದರನ್ನು ಅಮಾನತು ಮಾಡಲಾಗಿದೆ ಎಂದು ಇನ್ನೂ ಕೆಲವು ಹೇಳಿಕೆಗಳು ಹೊರಬಿದ್ದಿವೆ.
ಲೋಕ ಸಭೆಯಿಂದ 33, ರಾಜ್ಯ ಸಭೆಯಿಂದ 45 ಎಂದು ಒಟ್ಟು 78 ಸಂಸದರನ್ನು ಅಮಾನತು ಮಾಡಲಾಗಿದೆ. ಲೋಕಸಭೆಯಿಂದ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೋಯ್, ಟಿ. ಆರ್. ಬಾಲು, ಎ. ರಾಜಾ, ದಯಾನಿಧಿ ಮಾರನ್ ಹಾಗೂ ರಾಜ್ಯ ಸಭೆಯಿಂದ ಕೆ. ಸಿ. ವೇಣುಗೋಪಾಲ್, ಜೈರಾಮ್ ರಮೇಶ್, ಸಯ್ಯದ್ ನಾಸಿರ್ ಹುಸೇನ್, ಎಲ್. ಹನುಮಂತಯ್ಯ, ಜಿ. ಸಿ. ಚಂದ್ರಶೇಖರ್ ಅಮಾನತುಗೊಂಡಿರುವ ಪ್ರತಿಪಕ್ಷಗಳ ಪ್ರಮುಖ ಸದಸ್ಯರಾಗಿದ್ದಾರೆ.