Home Archive by category Fresh News (Page 586)

ಕೃಷಿಕರೊಬ್ಬರು ಕೀಟ ನಾಶಕ ಸೇವಿಸಿ ಆತ್ಮಹತ್ಯೆ

ಪುತ್ತೂರು ಫೆ 5 : ಕೃಷಿಕರೊಬ್ಬರು ಕೀಟ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ 15 ರಂದು ನಡೆದಿದೆ. ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಸೇಡಿಯಾಪು ನಿವಾಸಿ ದಿ. ಈಶ್ವರ ಗೌಡ ರವರ ಪುತ್ರ ಜತ್ತಪ್ಪ ಗೌಡ ( 68 ವ) ಆತ್ಮಹತ್ಯೆ ಮಾಡಿಕೊಂಡವರು. ವಿಪರೀತದ ಕುಡಿತದ ಚಟ ಹೊಂದಿದ್ದ ಅನಾರೋಗ್ಯದಿಂದ ಬಳಲುತ್ತಿದ್ದ ಜತ್ತಪ್ಪ ಗೌಡರವರು ಸಂಜೆ 6.30ರ ಸುಮಾರಿಗೆ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : ಫೆ.18 ಶನಿವಾರದಂದು ಮಹಾಶಿವರಾತ್ರಿ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಫೆಬ್ರವರಿ 18, 2023 ರ ಶನಿವಾರದಂದು ಆಚರಿಸಲ್ಪಡುವ ಮಹಾಶಿವರಾತ್ರಿಯು ಅನೇಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ರಾತ್ರಿ 09:30 ರಿಂದ ಪ್ರಾತಃ ಕಾಲದವರೆಗೆ ದೇವಸ್ಥಾನದ ವಠಾರದಲ್ಲಿ ಶ್ರೀ ಮಯೂರ ವಾಹನ ಯಕ್ಷಗಾನ ನಾಟಕ ಸಭಾ, ಸೂಡ ಇವರಿಂದ “ಅಬ್ಬಗ ದಾರಗ” ತುಳುಪ್ರಸಂಗ ಮತ್ತು “ಬೇಡರ ಕಣ್ಣಪ್ಪ” ಕನ್ನಡ ಪ್ರಸಂಗ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಫೆಬ್ರವರಿ 22, 2023

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಲು ರಾಜ್ಯಪಾಲರ ಕರೆ

ಮಾದಕ ಪದಾರ್ಥಗಳು ವ್ಯಕ್ತಿಯ ಬಾಹ್ಯ ಮತ್ತು ಆಂತರಿಕ ದೇಹಕ್ಕೆ ಹಾನಿಯನ್ನುಂಟುಮಾಡುತ್ತದೆ. ಹಾಗಾಗಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಜನರು ಸಹಕರಿಸಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು. ಅವರು ಫೆ.15ರ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಅಮೃತವರ್ಷಿನಿ ಸಭಾಭವನದಲ್ಲಿ ಆಯೋಜಿಸಿದ್ದ ನವಜೀವನ ಸಮಾವೇಶ 2022-23ರಲ್ಲಿ ಭಾಗವಹಿಸಿ

ಕಡಬದಲ್ಲಿ ಸರಕಾರಿ ಪದವಿ ಕಾಲೇಜು ಆರಂಭಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ

ಕಡಬ ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಹಲವು ವರ್ಷಗಳ ಬೇಡಿಕೆಯಾಗಿರುವ ಸರಕಾರಿ ಪದವಿ ಕಾಲೇಜು ಆರಂಭಿಸದೇ ಹೋದರೆ ಸ್ಥಳೀಯ ವಿವಿಧ ಸಂಘ ಸಂಸ್ಥೆಗಗಳ ಸಹಕಾರದೊಂದಿಗೆ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕಡಬ ಪದವಿ ಕಾಲೇಜು ಹೋರಾಟ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ರೈ ಕರ್ಮಾಯಿ ಅವರು ಎಚ್ಚರಿಸಿದ್ದಾರೆ. ಅವರು ಕಡಬದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕಡಬ ಪರಿಸರದ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ಲಭಿಸಬೇಕೆಂಬ

ಜೈನ್ ವಿವಿಯ ಪ್ರಕರಣ : ಮಂಗಳೂರು ವಿವಿಯಲ್ಲಿ ಎಪಿಎಸ್ಎ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಜೈನ್ ವಿವಿಯ ಪ್ರಕರಣವನ್ನು ಖಂಡಿಸಿ ನಡೆಸಿರುವ ಶಾಂತಿಯುತ ಪ್ರತಿಭಟನೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಬೋಧಕ ಹಾಗೂ ಬೋಧಕೇತರ ವರ್ಗದವರು ಬಾಗವಹಿಸಿದರು. ಈ ಶಾಂತಿಯುತ ಪ್ರತಿಭಟನೆಯಲ್ಲಿ ಅಂಬೇಡ್ಕರ್, ಫುಲೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೋಹನ್ ಕುಮಾರ್, ಪದಾಧಿಕಾರಿಗಳಾದ ಅವಿನಾಶ್ ಕಾಂಬ್ಳೆ, ವಿಜಯ್ ಕುಮಾರ್, ಗೋವಿಂದ್

ಕೇಂದ್ರ ಬಜೆಟ್‍ನ ಜನವಿರೋಧಿ ನಿರ್ದೇಶನ ಕೂಡಲೇ ಹಿಂಪಡೆಯಬೇಕು : ಮಂಜೇಶ್ವರ ವಲಯ ಸಿಪಿಐ ಸಮಿತಿಯಿಂದ ಹೊಸಂಗಡಿಯಲ್ಲಿ ಪ್ರತಿಭಟನೆ

ಮಂಜೇಶ್ವರ: ಅದಾನಿ ಗ್ರೂಪಿನ ಕಾನೂನು ಬಾಹಿರವಾದ ಚಟುವಟಿಕೆಗಳನ್ನು ಸಂಯುಕ್ತ ಪಾರ್ಲಿಮೆಂಟರಿ ಸಮಿತಿ ತನಿಖೆ ನಡೆಸಬೇಕು, ಕೇಂದ್ರ ಸರ್ಕಾರದ ಬಜೆಟಿನ ಜನ ವಿರೋಧಿ ನಿರ್ದೇಶನಗಳನ್ನು ಕೂಡಲೇ ಹಿಂಪಡೆಯಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಸಿಪಿಐ ಮಂಜೇಶ್ವರ ವಲಯ ಸಮಿತಿಯ ವತಿಯಿಂದ ಹೊಸಂಗಡಿಯಲ್ಲಿ ಪ್ರತಿಭಟನಾ ಧರಣಿ ನಡೆಸಿದರು. ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಅಜಿತ್ ಎಂಸಿ ಲಾಲ್ ಬಾಗ್ ರವರ ಅಧ್ಯಕ್ಷತೆಯಲ್ಲಿ ನಡೆದ ಧರಣಿಯನ್ನು ಸಿಪಿಐ ಜಿಲ್ಲಾ ಕಾರ್ಯಕಾರಿ ಸದಸ್ಯ

ಫೆ.17ರಂದು ಮಗಳು ಕನ್ನಡ ಚಲನಚಿತ್ರ ತೆರೆಗೆ

ಮಗಳು, ಇದು ಗ್ರಾಮೀಣ ಪ್ರತಿಭೆಗಳಿಂದಲೇ ಮೂಡಿಬಂದ ಕನ್ನಡ ಚಲನಚಿತ್ರ. ಗ್ರಾಮೀಣ ಭಾಗದ ಯುವ ಪ್ರತಿಭೆಗಳನ್ನೇ ಇಟ್ಟುಕೊಂಡು ಪೋಣಿಸಲಾದ ಮಗಳು ಎಂಬ ಕನ್ನಡ ಚಲನಚಿತ್ರಕ್ಕೆ ಚಿತ್ರಮಂಡಳಿಯಿಂದ ಅತ್ಯುತ್ತಮ ಚಲನಚಿತ್ರವೆಂದು ಯು ಸರ್ಟಿಫಿಕೆಟ್ ಲಭಿಸಿದೆ. ಫೆ.17ರಂದು ರಾಜ್ಯಾದ್ಯಂತ ಚಿತ್ರ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ತೋಮಸ್ ಎಂ.ಎಂ. ಹೇಳಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಗಾಡ್ ಗಿಫ್ಟ್

ಪುತ್ತೂರಿನಲ್ಲಿ ನಡೆದ ಭೀಕರ ಅಪಘಾತ : 50 ಅಡಿ ಆಳದ ತೋಟಕ್ಕೆ ಬಿದ್ದ ಕಾರು

ಪುತ್ತೂರು: ಪುತ್ತೂರಿನ ಸಂಟ್ಯಾರು ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟ ಘಟನೆ ನಡೆದಿದೆ. ನಿಡ್ಪಳ್ಳಿ ನಿವಾಸಿ ದಿ. ಶ್ರೀಧರ ಭಟ್ ಎಂಬವರ ಪುತ್ರ ಮುರಳಿ ಕೃಷ್ಣ ಭಟ್ ( 35) ಮೃತಪಟ್ಟವರು. ಇವರು ನಿಡ್ಪಳ್ಳಿ ಬಜರಂಗದಳದ ಮಾಜಿ ಸಂಚಾಲಕ ಹಾಗೂ ವಿಹಿಂಪ ಅಧ್ಯಕ್ಷರಾಗಿದ್ದರು. ಸಂಟ್ಯಾರು-ಬೆಟ್ಟಂಪಾಡಿ ರಸ್ತೆಯ ಸಂಟ್ಯಾರು ಸಮೀಪದ ಬಳಕ್ಕ ಎಂಬಲ್ಲಿ ಕಾರು ಅಪಘಾತ ಸಂಭವಿಸಿದ್ದು, ಕಾರು ಎರಡು ವಿದ್ಯುತ್ ಕಂಬಕ್ಕೆ ಗುದ್ದಿ 50 ಅಡಿ ಆಳದ ತೋಟಕ್ಕೆ ಬಿದ್ದಿದೆ.

ಕುಟುಂಬ ಸಮೇತ ಮಂಜುನಾಥ ಸ್ವಾಮಿಯ ದರ್ಶನ ಪಡೆದ ರಾಜ್ಯಪಾಲರು

ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಫೆ15ರ ಬುಧವಾರ ನವಜೀವನ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪತ್ನಿ ಅನಿತಾ ಗೆಹ್ಲೋಟ್ ಸೇರಿದಂತೆ ಮೊಮ್ಮಕ್ಕಳೊಂದಿಗೆ ಶ್ರೀ ಮಂಜುನಾಥ್ ಸ್ವಾಮಿಯ ದರ್ಶನ ಪಡೆದರು. ದೇವಸ್ಥಾನದ ಆಡಳಿತ ಮಂಡಳಿ ರಾಜ್ಯಪಾಲರಿಗೆ ಸ್ವಾಗತ ಕೋರಿದರು. ಗೌರವಾನ್ವಿತ ರಾಜ್ಯಪಾಲರು ಮತ್ತು ಪತ್ನಿ ಅನಿತಾ ಗೆಹ್ಲೋಟ್ ಅವರು ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್

ಸುಬ್ರಹ್ಮಣ್ಯ, ಫೆ.14: ಕರ್ನಾಟಕ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ಮಂಗಳವಾರ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದರು. ಕ್ಷೇತ್ರಕ್ಕೆ ಆಗಮಿಸಿದ ಅವರನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಶ್ರೀ ದೇವಳದಿಂದ ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು. ಪತ್ನಿ ಸೇರಿದಂತೆ ಕುಟುಂಬ ಸಮೇತರಾಗಿ ಶ್ರೀ ದೇವಳಕ್ಕೆ ಆಗಮಿಸಿದ ರಾಜ್ಯಪಾಲರನ್ನು ಶ್ರೀ ದೇವಳದ ಗಜರಾಣಿ ಯಶಸ್ವಿ ತನ್ನ ಸೊಂಡಿಲಿನಿಂದ